ಸರ್ಕಾರಿ ಉಪ ವಿಭಾಗಾಧಿಕಾರಿ ಸೇರಿ 8 ಜನರ ಬಂಧನ ಸೇತುವೆಯಿಂದ ಕಳ್ಳತನವಾದ 247 ಕೇಜಿ ಉಕ್ಕು ವಶ ಕೇಸು ದಾಖಲಿಸಿದ ಅಧಿಕಾರಿಯೇ ಕಳ್ಳ!
ಪಟನಾ: ಬಿಹಾರದಲ್ಲಿ 60 ಅಡಿ ಉದ್ದದ ಉಕ್ಕಿನ ಸೇತುವೆಯನ್ನೇ ಕಳ್ಳತನ ಮಾಡಿದ ವಿಚಿತ್ರ ಘಟನೆಯಲ್ಲಿ ಪ್ರಕರಣ ದಾಖಲಿಸಿದ ಸರ್ಕಾರಿ ಅಧಿಕಾರಿಯ ಕೈವಾಡವೂ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಭಾನುವಾರ ರಾಜ್ಯ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಸೇರಿ 8 ಮಂದಿಯನ್ನು ಬಂಧಿಸಲಾಗಿದೆ.
ಈ ಉಪವಿಭಾಗಾಧಿಕಾರಿ ಸಮ್ಮತಿಯ ಮೇಲೆಯೇ ಕಳ್ಳತನ ನಡೆದಿದೆ. ಆದರೆ ಸಂದೇಹ ಬರಬಾರದು ಎಂದು ಅವರೇ ಕಳ್ಳತನದ ದೂರು ದಾಖಲಿಸಿದ್ದರು. ಆದಾಗ್ಯೂ ತನಿಖೆಯಲ್ಲಿ ಅವರ ಕೈವಾಡ ಬಯಲಾಗಿದೆ ಎಂದು ಗೊತ್ತಾಗಿದೆ. ಈಗ ಕಳ್ಳರ ಬಳಿಯಿಂದ ಜೆಸಿಬಿ ಹಾಗೂ ಸುಮಾರು 247 ಕೇಜಿ ಕಳ್ಳತನವಾದ ಉಕ್ಕಿನ ಸೇತುವೆಯ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಉಪ ವಿಭಾಗಾಧಿಕಾರಿ ಮಾತ್ರವಲ್ಲದೇ ಸರ್ಕಾರಿ ಎಂಜಿನಿಯರ್ ಕೂಡಾ ಶಾಮೀಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ನೀರಾವರಿ ಇಲಾಖೆಯ ಅಧಿಕಾರಿಗಳಂತೆ ನಟಿಸಿ 60 ಅಡಿ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದರು!
ಜಲಸಂಪನ್ಮೂಲ ವಿಭಾಗದ ಅಧಿಕಾರಿಗಳೊಂದಿಗೆ ಕೈ ಜೋಡಿಸಿದ ಕಳ್ಳರು ತಾವು ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದು ಹಾಡಹಗಲಿನಲ್ಲಿಯೇ 50 ವರ್ಷ ಹಳೆಯ ಸೇತುವೆಯ ಕಳ್ಳತನ ಮಾಡಿದ್ದರು. ಸೇತುವೆಯ ನಂತರ ಬಿಡಿ ಭಾಗಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಹೊಸ ಸೇತುವೆಯನ್ನೇ ಜನರು ಸಂಚಾರಕ್ಕಾಗಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಸರ್ಕಾರ ಜನರು ಬಳಸದ ಹಳೆಯ ಸೇತುವೆಯನ್ನು ಕೆಡವಲು ನಿರ್ಧರಿಸಿರಬಹುದು ಎಂದು ಜನರು ತಿಳಿದು ಸುಮ್ಮನಿದ್ದರು.
ಬಿಹಾರದ (Bihar) ರೋಹ್ತಾಸ್ (Rohtas ) ಜಿಲ್ಲೆಯಲ್ಲಿ ಹಾಡಹಗಲೇ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು (60 feet long iron bridge ) ಖದೀಮರ ತಂಡ ಲಪಟಾಯಿಸಿತ್ತು. ಈ ದರೋಡೆಗೆ (Loot)ಸ್ಥಳೀಯ ಅಧಿಕಾರಿಗಳು (local officials) ಹಾಗೂ ಗ್ರಾಮಸ್ಥರ (villagers ) ಸಹಾಯವನ್ನೂ ಖದೀಮರು ಪಡೆದುಕೊಂಡಿದ್ದರು. ನೀರಾವರಿ ಇಲಾಖೆಯ ಅಧಿಕಾರಿಗಳ (state’s irrigation department) ಸೋಗಿನಲ್ಲಿದ್ದ ಕಳ್ಳರು, ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಮೂರು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಈ ದರೋಡೆಯನ್ನು ಪೂರ್ತಿ ಮಾಡಿದ್ದರು ಎಂದು ಮಾಧ್ಯಮಗಳಲ್ಲಿ ಈ ಕಳ್ಳತನ ಪ್ರಕರಣ ವರದಿಯಾಗಿತ್ತು.
ಸಾವಿನ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾಂಟೆಡ್ ನಕ್ಸಲ್ 26 ವರ್ಷದ ಬಳಿಕ ಅರೆಸ್ಟ್!
ಪ್ರಸ್ತುತ ಸಾರ್ವಜನಿಕರ ಸೇವೆಗೆ ಬಳಕೆಯಾಗದೇ ಉಳಿದುಕೊಂಡಿದ್ದ ಉಕ್ಕಿನ ಸೇತುವೆಯನ್ನು ಮೂರು ದಿನಗಳಲ್ಲಿ ಈ ಖದೀಮರು ಕೆಡವಿ ಹಾಕಿದ್ದರು. ಈ ಸೇತುವೆಯ ಕಬ್ಬಿಣವನ್ನು ತೆಗೆಯಲು ಗ್ಯಾಸ್ ಕಟ್ಟರ್ (Gas Cutter) ಮತ್ತು ಅರ್ಥ್ ಮೂವರ್ (earthmover ) ಯಂತ್ರಗಳನ್ನು ಬಳಸಿದ್ದರು. ಕಬ್ಬಿಣದ ಸೇತುವೆಯನ್ನು ಉಪಾಯದಿಂದ ತೆಗೆಯುವ ವೇಳೆ ದರೋಡೆಕೋರರು ಸ್ಥಳೀಯ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ದೊಡ್ಡ ಮಟ್ಟದ ಸಹಾಯವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಅಧಿಕಾರಿಗಳಿಗೆ ಇವರೆಲ್ಲರೂ ಕಳ್ಳರು ಎಂದು ತಿಳಿಯುವ ಹೊತ್ತಿಗಾಗಲೇ ದರೋಡೆಕೋರರು ಸೇತುವೆಯನ್ನು ಕದ್ದು ಪರಾರಿಯಾಗಿದ್ದರು.
ವರದಿಯ ಪ್ರಕಾರ, ನಸ್ರಿಗಂಜ್ ಪೊಲೀಸ್ ಠಾಣೆ (Nasriganj police station) ವ್ಯಾಪ್ತಿಯ ಅಮಿಯವರ್ (Amiyavar) ಗ್ರಾಮದಲ್ಲಿ 1972 ರಲ್ಲಿ ಅರಾ ಕಾಲುವೆಯ (Ara Canal) ಮೇಲೆ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಇದು ತುಂಬಾ ಹಳೆಯ ಸೇತುವೆಯಾಗಿದ್ದರಿಂದ ಹಾಗೂ ಸಂಚಾರಕ್ಕೆ ಅಪಾಯಕಾರಿ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಇದರ ಪಕ್ಕದಲ್ಲಿಯೇ ಹೊಸದಾಗಿ ನಿರ್ಮಾಣವಾಗಿದ್ದ ಕಾಂಕ್ರಿಟ್ ಸೇತುವೆಯನ್ನು ಬಳಸುತ್ತಿದ್ದರು. ಕಳ್ಳತನದ ದೂರು ದಾಖಲಾದ ನಂತರ ಪೊಲೀಸರು ಸ್ಥಳೀಯ ಸ್ಕ್ರ್ಯಾಪ್ ಡೀಲರ್‌ಗಳನ್ನು ಬಳಸಿ ತನಿಖೆ ನಡೆಸಿದ್ದರು.
