ಇತ್ತೀಚೆಗೆ ಕರ್ನಾಟಕದಲ್ಲಿ ಆನೆಯನ್ನು ಕಿಡ್ನಾಪ್ ಮಾಡಲು ಪ್ರಯತ್ನ ಪಟ್ಟಿದ್ದು ಬಹುತೇಕರಿಗೆ ಅಚ್ಚರಿಯಾಗಿ ಕಂಡಿತ್ತು. ಆದರೆ, ಬಿಹಾರದಲ್ಲಿ ನಂಬಲು ಅಸಾಧ್ಯವಾಗಿರುವಂಥ ಘಟನೆಯೊಂದು ನಡೆದಿದೆ. ನೀರಾವರಿ ಇಲಾಖೆ ಅಧಿಕಾರಿಗಳಂತೆ ನಟಿಸಿ, ಗ್ರಾಮವೊಂದರ 60 ಅಡಿ ಕಬ್ಬಿಣದ ಸೇತುವೆಯನ್ನೇ ಕಳ್ಳತನ ಮಾಡಲಾಗಿದೆ.
ನವದೆಹಲಿ (ಏ. 9): ಬಿಹಾರದ (Bihar) ರೋಹ್ತಾಸ್ (Rohtas ) ಜಿಲ್ಲೆಯಲ್ಲಿ ಹಾಡಹಗಲೇ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು (60 feet long iron bridge ) ಖದೀಮರ ತಂಡ ಲಪಟಾಯಿಸಿದೆ. ವಿಶೇಷವೆಂದರೆ, ಈ ದರೋಡೆಗೆ (Loot)ಸ್ಥಳೀಯ ಅಧಿಕಾರಿಗಳು (local officials) ಹಾಗೂ ಗ್ರಾಮಸ್ಥರ (villagers ) ಸಹಾಯವನ್ನೂ ಖದೀಮರು ಪಡೆದುಕೊಂಡಿದ್ದಾರೆ ಎನ್ನುವುದು. ನೀರಾವರಿ ಇಲಾಖೆಯ ಅಧಿಕಾರಿಗಳ (state’s irrigation department) ಸೋಗಿನಲ್ಲಿದ್ದ ಕಳ್ಳರು, ಸ್ಥಳೀಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಮೂರು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಈ ದರೋಡೆಯನ್ನು ಪೂರ್ತಿ ಮಾಡಿದ್ದಾರೆ.
ಪ್ರಸ್ತುತ ಸಾರ್ವಜನಿಕರ ಸೇವೆಗೆ ಬಳಕೆಯಾಗದೇ ಉಳಿದುಕೊಂಡಿದ್ದ ಉಕ್ಕಿನ ಸೇತುವೆಯನ್ನು ಮೂರು ದಿನಗಳಲ್ಲಿ ಕೆಡವಿ ಹಾಕಿದ್ದಾರೆ. ಈ ಸೇತುವೆಯ ಕಬ್ಬಿಣವನ್ನು ತೆಗೆಯಲು ಗ್ಯಾಸ್ ಕಟ್ಟರ್ (Gas Cutter) ಮತ್ತು ಅರ್ಥ್ ಮೂವರ್ (earthmover ) ಯಂತ್ರಗಳನ್ನು ಬಳಸಿದ್ದಾರೆ. ಕಬ್ಬಿಣದ ಸೇತುವೆಯನ್ನು ಉಪಾಯದಿಂದ ತೆಗೆಯುವ ವೇಳೆ ದರೋಡೆಕೋರರು ಸ್ಥಳೀಯ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ದೊಡ್ಡ ಮಟ್ಟದ ಸಹಾಯವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಅಧಿಕಾರಿಗಳಿಗೆ ಇವರೆಲ್ಲರೂ ಕಳ್ಳರು ಎಂದು ತಿಳಿಯುವ ಹೊತ್ತಿಗಾಗಲೇ ದರೋಡೆಕೋರರು ಸೇತುವೆಯನ್ನು ಕದ್ದು ಪರಾರಿಯಾಗಿದ್ದಾರೆ.
ವರದಿಯ ಪ್ರಕಾರ, ನಸ್ರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮಿಯವರ್ ಗ್ರಾಮದಲ್ಲಿ 1972 ರಲ್ಲಿ ಅರಾ ಕಾಲುವೆಯ ಮೇಲೆ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ತುಂಬಾ ಹಳೆಯ
ಸೇತುವೆಯಾಗಿದ್ದರಿಂದ ಹಾಗೂ ಸಂಚಾರಕ್ಕೆ ಅಪಾಯಕಾರಿ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಇದರ ಪಕ್ಕದಲ್ಲಿಯೇ ಹೊಸದಾಗಿ ನಿರ್ಮಾಣವಾಗಿದ್ದ ಕಾಂಕ್ರಿಟ್ ಸೇತುವೆಯನ್ನು ಬಳಸುತ್ತಿದ್ದರು. ಕಳ್ಳತನದ ದೂರು ದಾಖಲಾದ ನಂತರ ಪೊಲೀಸರು ಸ್ಥಳೀಯ ಸ್ಕ್ರ್ಯಾಪ್ ಡೀಲರ್‌ಗಳನ್ನು ಬಳಸಿ ತನಿಖೆ ನಡೆಸುತ್ತಿದ್ದಾರೆ.
ನೀರಾವರಿ ಇಲಾಖೆ ಅಧಿಕಾರಿಗಳಿಂದ ದೂರು ಸ್ವೀಕರಿಸಿದ್ದೇವೆ. ಅದರಂತೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿಗಳ ಗುರುತು ಪತ್ತೆಗೆ ರೇಖಾಚಿತ್ರ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಾಹಿತಿಯನ್ನು ರವಾನಿಸಲು ನಾವು ಸ್ಕ್ರ್ಯಾಪ್ ವಿತರಕರಿಗೆ ಎಚ್ಚರಿಕೆ ನೀಡಿದ್ದೇವೆ. ಅಂತಹ ಯಾವುದೇ ವಸ್ತುವು ಅವರ ಸಮೀಪ ಬಂದಿದ್ದಲ್ಲಿ ತಿಳಿಸುವಂತೆ ಹೇಳಿದ್ದೇವೆ. ಸೇತುವೆ 60 ಅಡಿ ಉದ್ದ ಮತ್ತು 12 ಅಡಿ ಎತ್ತರವಿತ್ತು” ಎಂದು ನಸ್ರಿಗಂಜ್ ಎಸ್‌ಎಚ್‌ಒ ಸುಭಾಷ್ ಕುಮಾರ್ ತಿಳಿಸಿದ್ದಾರೆ.
Bizarre Kidnap : 'ಕಿಡ್ನಾಪ್ ಮಾಡಿದ್ದಾರೆ ಬನ್ನಿ' ಅಲ್ಲಿ ಹೋಗಿ ನೋಡಿದಾಗ ಗೊತ್ತಾಗಿದ್ದೇ ಬೇರೆ
ಸೇತುವೆ ಕಳ್ಳತನವಾಗಿರುವ ಸುದ್ದಿ ಭಾರತದ ಮಟ್ಟಿಗೆ ಹೊಸತು. ಆದರೆ, ಅಮೆರಿಕ, ಉಕ್ರೇನ್ ಹಾಗೂ ಜೆಕ್ ಗಣರಾಜ್ಯದಲ್ಲಿ ಸೇತುವೆ ಕಳ್ಳತನವಾಗಿರುವ ಸುದ್ದಿ ಈ ಹಿಂದೆ ಪ್ರಕಟವಾಗಿತ್ತು. ಬಿಹಾರ ರಾಜಧಾನಿ ಪಾಟ್ನಾದಿಂದ ಅಂದಾಜು 120 ಕಿಲೋಮೀಟರ್ ದೂರದಲ್ಲಿರುವ ಅಮಿಯವಾರ್ ಗ್ರಾಮ ಇಂಥ ವಿಚಾರಗಳಿಗೆ ಸುದ್ದಿಯಾಗಿರುವುದು ಇದು ಮೊದಲೇನಲ್ಲ. ಮೂರು ದಿನಗಳ ಕಾಲ ದರೋಡೆಕೋರರು ಬಂದು ಇಡೀ ಸೇತುವೆಯನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಸ್ಥಳೀಯ ಜನರಲ್ಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಳೆದ ವರ್ಷ ಸುಮಾರು 200 ಕೋಟಿ ರೂಪಾಯಿ ಮೊತ್ತದ ಮರಳು ಈ ಗ್ರಾಮದಿಂದ ಕಳ್ಳತನವಾಗಿತ್ತು.
Elephant Kidnap : ತುಮಕೂರು ಮಠದ ಆನೆಯ ಕಿಡ್ನಾಪ್ ಯತ್ನ
ಕರ್ನಾಟಕದಲ್ಲಿ ನಡೆದ ಘಟನೆಯಲ್ಲಿ ಹಣಕ್ಕಾಗಿ ಆನೆಯನ್ನೇ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಮಠಕ್ಕೆ (Tumkur Mutt) ಸೇರಿದ ಆನೆಯನ್ನೇ (Elephant) ಕಿಡ್ನಾಪ್ (Kiodnap) ಮಾಡಲು ಯತ್ನಿಸಲಾಗಿದೆ. ತುಮಕೂರು ನಗರದ ಹೊರಪೇಟೆಯ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಹೆಣ್ಣಾನೆ ಕಳ್ಳತನಕ್ಕೆ ಸಂಚು ರೂಪಿಸಲಾಗಿತ್ತು. ವಿಚಿತ್ರ ಎಂದರೆ ಈ ಸಂಚಿನಲ್ಲಿ ಅರಣ್ಯ (Forest Department) ಇಲಾಖೆ ಅಧಿಕಾರಿಗಳ ಪಾತ್ರವೂ ಇತ್ತು ಎಂಬ ಮಾಹಿತಿ. ಮಠಕ್ಕೆ ವಂಚಿಸಿ ಗುಜರಾತಿಗೆ ಆನೆ ಸಾಗಿಸಲು ಪ್ಲಾನ್ ರೂಪಿಸಿದ್ದರು. ಬನ್ನೇರುಘಟ್ಟಕ್ಕೆ ಕೆರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತೇವೆಂದು ಕರೆದೊಯ್ದ ಖದೀಮರು ದಾಬಬಸ್ ಪೇಟೆಯಲ್ಲಿ ಬಳಿ ಮಾವುತನ ಮೇಲೆ ಹಲ್ಲೆ ನಡೆಸಿದ್ದಾರೆ. ಲಾರಿಯಿಂದ ಮಾವುತನನ್ನು ಕೆಳಗಿಸಿದ್ದಾರೆ. ದಾಬಸ್ ಪೇಟೆಯಿಂದ ಕುಣಿಗಲ್ ತಾಲೂಕಿನ ಹಳ್ಳಿಗೆ ಆನೆ ಸಾಗಿಸಲಾಗಿತ್ತು. ಗುಜರಾತ್ ಮೂಲದ ಸರ್ಕಲ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ್ದರು. ವಕೀಲ ಎಂದು ಹೇಳಿಕೊಂಡು ಬಂದಿದ್ದ ದೇವರಾಜು, ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ್ ಎಂಬುವರ ಮೇಲೆ ಆನೆ ಕಿಡ್ನ್ಯಾಪ್ ಯತ್ನ ನಡೆಸಿದ ಆರೋಪ ಬಂದಿದೆ.
