ಇಬ್ಬರು ಶಿಕ್ಷಕರ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳ ನಡೆದಿದ್ದು, ಶಾಲೆಯಲ್ಲಿ ಘರ್ಷಣೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಪಾಟ್ನಾ (ಮೇ 25, 2023): ಶಾಲೆಯೊಂದರಲ್ಲಿ ಕಿಟಕಿಗಳನ್ನು ಮುಚ್ಚುವ ಸಣ್ಣ ವಿಚಾರಕ್ಕೆ ಮುಖ್ಯೋಪಾಧ್ಯಾಯಿನಿ ಮೇಲೆ ಅದೇ ಶಾಲೆಯ ಶಿಕ್ಷಕಿಯರೇ ಚಪ್ಪಲಿಯಿಂದ ಥಳಿಸಿದ್ದಾರೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಣ್ಣ ವಿಚಾರಕ್ಕೆ ಬಿಹಾರದಲ್ಲಿ ಮುಖ್ಯೋಪಾಧ್ಯಾಯಿನಿ ಮತ್ತು ಇಬ್ಬರು ಶಿಕ್ಷಕರ ನಡುವೆ ದೈಹಿಕ ವಾಗ್ವಾದಕ್ಕೆ ತಿರುಗಿದೆ.
ಇನ್ನು, ಬಿಹಾರದ ಈ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಮೊದಲು ತರಗತಿಯ ಒಳಗೆ ಮತ್ತು ನಂತರ ಮೈದಾನದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡುತ್ತಲೇ ಇದ್ದರು ಎಂದೂ ತಿಳಿದುಬಂದಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ಸಹ ಇದನ್ನು ನೋಡಬಹುದು.
ಇದನ್ನು ಓದಿ: ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್
ತರಗತಿಯ ಕಿಟಕಿಗಳನ್ನು ಮುಚ್ಚಲು ಒಬ್ಬರು ಮನವಿ ಮಾಡಿಕೊಂಡರೆ, ಇನ್ನೊಂದು ಕಡೆಯವರು ಕಿಟಕಿ ಮುಚ್ಚಲು ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಆರಂಭವಾದ ವಾಗ್ವಾದ ಮಾತಿಗೆ ಮಾತು ಬೆಳೆದು ಹೊಡೆದಾಡುವ ಹಂತಕ್ಕೆ ಹೋಗಿದೆ. ಚಪ್ಪಲಿಯಲ್ಲೂ ಸಹ ಮುಖ್ಯೊಪಾಧ್ಯಾಯಿನಿ ಮೇಲೆ ಶಿಕ್ಷಕಿಯೊಬ್ಬರು ಹಲ್ಲೆ ಮಾಡಿರುವುದನ್ನೂ ವಿಡಿಯೋದಲ್ಲಿ ನೋಡಬಹುದು.
ಹೋರಾಟದ ಯಾತನೆಯ ದೃಶ್ಯಗಳನ್ನು ವೈರಲ್ ವಿಡಿಯೋ ತೋರಿಸುತ್ತವೆ. ಗ್ರಿಲ್ ಹಾಕಿದ ಕಿಟಕಿಯ ಮೂಲಕ ಯುವ ವಿದ್ಯಾರ್ಥಿಗಳು ತಮ್ಮ ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ಮತ್ತು ಶಿಕ್ಷಕಿ ಅನಿತಾ ಕುಮಾರಿ ಅವರ ನಡುವಿನ ಮಾತಿನ ಚಕಮಕಿಯನ್ನು ವೀಕ್ಷಿಸಿದರು.
ಇದನ್ನೂ ಓದಿ: ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!
ಕಾಂತಿ ಕುಮಾರಿ ತರಗತಿಯಿಂದ ಹೊರಗೆ ನಡೆಯಲು ಪ್ರಾರಂಭಿಸಿದಾಗ, ಶಿಕ್ಷಕಿ ಕೈಯಲ್ಲಿ ಚಪ್ಪಲಿಯೊಂದಿಗೆ ಅವಳ ಹಿಂದೆ ಓಡುತ್ತಾರೆ ಮತ್ತು ಅವಳಿಗೆ ಹೊಡೆಯಲು ಪ್ರಾರಂಭಿಸುತ್ತಾರೆ. ನಂತರ, ಇನ್ನೊಬ್ಬರು ಶಿಕ್ಷಕಿ ಸಹ ಸೇರಿಕೊಂಡಿದ್ದು, ಇಬ್ಬರೂ ಮುಖ್ಯ ಶಿಕ್ಷಕಿಯನ್ನು ಮೈದಾನದಲ್ಲಿ ನೆಲದ ಮೇಲೆ ತಳ್ಳಿ ಕುಸ್ತಿಯಾಡುತ್ತಾರೆ. ಒಬ್ಬರು ಚಪ್ಪಲಿಯಿಂದ ಹೊಡೆದರೆ, ಇನ್ನೊಬ್ಬರು ಕೋಲು ಬಳಸಿದ್ದಾರೆ ಎಂದೂ ತಿಳಿದುಬಂದಿದೆ.
ಇನ್ನು, ಮತ್ತೊಂದು ವಿಡಿಯೋದಲ್ಲಿ ಅಂತಿಮವಾಗಿ ಕೆಲವು ಪುರುಷರು ಮಹಿಳಾ ಶಿಕ್ಷಕರ ಜಗಳ ಬಿಡಿಸಿದ್ದು, ಶಾಕ್ ಆಗಿದ್ದ ವಿದ್ಯಾರ್ಥಿಗಳು ಇದನ್ನು ನೋಡಿದ್ದಾರೆ ಎಂದೂ ತಿಳಿದುಬಂದಿದೆ. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬುದರ ಬಗ್ಗೆ ಅಷ್ಟು ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!
ಈ ಮಧ್ಯೆ, ಈ ವೈರಲ್ ವಿಡಿಯೋಗಳ ಬಗ್ಗೆ ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ಸಹ ಮಾತನಾಡಿದ್ದಾರೆ. ಇಬ್ಬರು ಶಿಕ್ಷಕರ ನಡುವೆ ವೈಯುಕ್ತಿಕ ಜಗಳ ನಡೆದಿದ್ದು, ಶಾಲೆಯಲ್ಲಿ ಘರ್ಷಣೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ ಎಂದು ನರೇಶ್ ತಿಳಿಸಿದ್ದಾರೆ.
ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ಮಾತನಾಡಿ, ಇಬ್ಬರು ಶಿಕ್ಷಕರ ನಡುವೆ ವೈಯಕ್ತಿಕ ವಿಚಾರಕ್ಕೆ ಜಗಳ ನಡೆದಿದ್ದು, ಶಾಲೆಯಲ್ಲಿ ಘರ್ಷಣೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ಕಾಯಲಾಗುತ್ತಿದೆ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: 3ನೇ ಮಗುವಿಗೆ ಜನ್ಮ ನೀಡಿದ ಮಾರ್ಕ್ ಜುಕರ್‌ಬರ್ಗ್ ಪತ್ನಿ: ತುಂಬಾ ಕಷ್ಟಪಡ್ತಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು
