ಮದ್ವೆಗೆ ಬಿಹಾರ ಹುಡ್ಗೀರು 20 ಸಾವಿರ ರೂಗೆ ಸಿಕ್ತಾರೆ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಪತಿ ವಿವಾದ ಸೃಷ್ಟಿಸಿದ್ದಾರೆ. ಸಚಿವೆ ಪತಿಯ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ವಿವಾದವಾಗುತ್ತಿದ್ದಂತೆ ನಾಯಕ ಹೇಳಿದ್ದೇನು? 

ಉತ್ತರಖಂಡ (ಜ.03) ಹೆಣ್ಣುಮಕ್ಕಳು, ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸಚಿವ ಸ್ಥಾನದಿಂದ ಹಿಡಿದು ಪಾರ್ಟಿಯಿಂದಲೇ ಹೊರಬಿದ್ದ ಅನೇಕ ನಾಯಕರಿದ್ದಾರೆ. ಇದೀಗ ಉಪದೇಶ ಮಾಡಲು ಹೋಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮದುವೆಯಾಗಲು 20,000 ರೂಪಾಯಿ 25,000 ರೂಪಾಯಿಗ ಬಿಹಾರ ಹುಡುಗಿಯರು ಸಿಗುತ್ತಾರೆ. ಚಿಂತೆ ಯಾಕೆ ಎಂದಿದ್ದಾರೆ. ಈ ವಿವಾದ ಉತ್ತರಖಂಡದಲ್ಲಿ ಸೃಷ್ಟಿಯಾಗಿದೆ. ಬಿಜೆಪಿ ನಾಯಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ಪತಿ ಗಿರಿಧರಿ ಲಾಲೂ ಸಾಧು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಉತ್ತರಖಂಡದಲ್ಲಿ ಮಾತ್ರವಲ್ಲ, ಬಿಹಾರದಲ್ಲೂ ಭಾರಿ ಕೋಲಾಹ ಸೃಷ್ಟಿಸಿದೆ.

ಮದುವೆ ಕುರಿತು ಮಾತನಾಡುತ್ತಿದ್ದ ವೇಳೆ ವಿವಾದಿತ ಹೇಳಿಕೆ

ಗಿರಿಧರಿ ಲಾಲೂ ಸಾಧು ಉತ್ತರಖಂಡದಲ್ಲಿ ಯುವ ಸಮೂಹದ ಜೊತೆ ಮಾತನಾಡುತ್ತಾ ಈ ವಿವಾದ ಸೃಷ್ಟಿಸಿದ್ದಾರೆ. ಯುವ ಸಮೂಹದಲ್ಲಿ ಮದುವೆಯಾಗಿದೆಯಾ ಎಂದು ಕೇಳಿದ್ದಾರೆ. ಹಲವರು ಆಗಿಲ್ಲ ಎಂದಿದ್ದಾರೆ. ಇದೇ ವೇಳೆ ನೀವು ಯಾವತ್ತು ಮದುವೆಯಾಗುತ್ತೀರಿ? ವಯಸ್ಸಾದ ಮೇಲೆ ಮದುವೆಯಾಗಲು ಪ್ಲಾನ್ ಮಾಡಿದರೆ ನಿಮಗೆ ಹೆಣ್ಣು ಸಿಗುವುದಿಲ್ಲ ಎಂಬ ಆತಂಕ ಕಾಡುತ್ತಿದೆಯಾ? ಚಿಂತೆ ಮಾಡಬೇಡಿ, ವಯಸ್ಸಾದ ಮೇಲೂ ಹುಡುಗಿ ಸಿಕ್ಕಾಳೆ. ಸಿಗದಿದ್ದರೆ ನಾವು ಬಿಹಾರದಿಂದ 20,000 ರೂಪಾಯಿಯಂದ 25,000 ರೂಪಾಯಿಗೆ ಹುಡುಗಿಯನ್ನು ತಂದುಕೊಡುತ್ತೇವೆ ಎಂದು ಹೇಳಿದ್ದಾರೆ.

ಹೇಳಿಕೆ ಖಂಡಿಸಿದಿ ಬಿಜೆಪಿ

ತಮ್ಮದೇ ಪಕ್ಷದ ನಾಯಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ಪತಿ ಗಿರಿಧಿರಿ ಲಾಲೂ ಸಾಧು ನೀಡಿದ ಹೇಳಿಕೆಗೆ ಉತ್ತರಖಂಡ ಬಿಜೆಪಿ ಹಾಗೂ ಬಿಹಾರ ಬಿಜಿಪಿ ಖಂಡಿಸಿದೆ. ಹೇಳಿಕೆಗೆ ಅಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಮಹಿಳೆಯರನ್ನು ಅವಮಾನಿಸುವ ಕೆಲಸವನ್ನು ಬಿಜೆಪಿ ಸಹಿಸುವುದಿಲ್ಲ ಎಂದಿದೆ. ಇತ್ತ ಬಿಹಾರದಲ್ಲೂ ಭಾರಿ ಆಕ್ರೋಶಗಳು ಕೇಳಿಬರುತ್ತಿದೆ.

ಕ್ಷಮೆಯಾಚಿಸಿದ ಗಿರಿಧಿರಿ ಲಾಲೂ ಸಾಧು

ತಮ್ಮ ಹೇಳಿಕೆ ಭಾರಿ ವಿವಾದವಾಗುತ್ತಿದ್ದಂತೆ ಗಿರಿಧರಿ ಲಾಲೂ ಸಾಧು ಕ್ಷಮೆ ಯಾಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತಿದ್ದೇನೆ. ಬಾಯಿ ತಪ್ಪಿನಿಂದ ಪದಗಳು ಬಂದಿದೆ. ಹೆಣ್ಣುಮಕ್ಕಳ ಅವಮಾನಿಸುವ ಉದ್ದೇಶದಿಂದ ಹೇಳಿಲ್ಲ ಎಂದು ಗಿರಿಧಿರಿ ಲಾಲೂ ಸಾಧು ಹೇಳಿದ್ದಾರೆ. ಗೆಳೆಯನಿಗೆ ಈ ಹೇಳಿಕೆ ನೀಡಿದ್ದೇನೆ. ಆದರೆ ಹಲವರು ತನ್ನ ಪತ್ನಿಗೆ ರಾಜಕೀಯ ಹಿನ್ನಡೆ ತರಲು ಈ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ವಿವಾದಗಳ ಸರದಾರ ಗಿರಿಧಿರಿ ಲಾಲೂ

ಗಿರಿಧಿರಿ ಸಾಲು ಸಾಧು ವಿವಾದಗಳ ಸರದಾನಾಗಿ ಗುರುತಿಸಿಕೊಂಡಿದ್ದಾರೆ. ಕೊಲೆ ಯತ್ನ, ವಂಚನೆ, ಕೆಲಸಾಗರರ ಮೇಲೆ ದಬ್ಬಾಳಿಕೆ ಸೇರಿದಂತೆ ಹಲವು ಆರೋಪಗಳು ಗಿರಿಧಿರಿ ಲಾಲೂ ಮೇಲಿದೆ. ಡಬಲ್ ಮರ್ಡರ್ ಪ್ರಕರಣದಲ್ಲಿ ಗಿರಿಧರಿ ಲಾಲೂ ಸಾಧು ಪ್ರಮುಖ ಆರೋಪಿಯಾಗಿದ್ದಾರೆ. ಇದೀಗ ಹೊಸ ವಿವಾದ ಸೃಷ್ಟಿಸಿದ್ದಾರೆ. ಎರಡು ಮದುವೆಯಾಗಿರುವ ಗಿರಿಧರಿ ಲಾಲೂ ಸಾಧು, ಕೌಟುಂಬಿಕಾಗಿಯೂ ಭಾರಿ ವಿವಾದ, ಟೀಕೆಗೆ ಗುರಿಯಾಗಿದ್ದಾರೆ.