ತಿರುಪ್ಪರಂಕುಂಡ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಅಡ್ಡಿಪಡಿಸಿದ ಸಿಎಂ ವಿಜಯ್ ಜೊಸೆಫ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದೆ. ಇದೇ ವೇಳೆ ತಮ್ಮದೇನು ತಪ್ಪಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ವಿರುದ್ದ ಹೊಸ ಬಾಂಬ್ ಹಾಕಿದೆ
ನವದೆಹಲಿ (ನ.25) ತಿರುಪ್ಪರಂಕುಂಡ್ರಂನಲ್ಲಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿಸಿದರೂ ಸಿಎಂ ವಿಜಯ್ ಜೊಸೆಫ್ ಸರ್ಕಾರ ಅನುಮತಿ ನೀಡಲಿಲ್ಲ. ಐತಿಹಾಸಿಕ ದೀಪತ್ತೂಣ್ ಕಂಬದಲ್ಲಿ ದೀಪ ಬೆಳಗಿ ದೇವರ ಕೃಪೆಗೆ ಪಾತ್ರರಾಗಲು ಬಯಸಿದ್ದ ಹಿಂಗೂಗಳಿಗೆ ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್ ಆದೇಶ ದಿಕ್ಕಿರಿಸಿದ ತಮಿಳುನಾಡಿನ ವಿಜಯ್ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇಷ್ಟೇ ಅಲ್ಲ ವಿಜಯ್ ಸರ್ಕಾರ ವಿರುದ್ದ ಪ್ರತಿಭಟನೆಗಳು ತೀವ್ರಗೊಂಡಿದೆ. ಆಕ್ರೋಶಗಳು ಭುಗಿಲೆದ್ದ ಬೆನ್ನಲ್ಲೇ ವಿಜಯ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದೆ.
ದೇವಸ್ಥಾನ ಆಡಳಿ ಮಂಡಳಿ ವಿರುದ್ಧ ಬಾಂಬ್
ಸಿಎಂ ವಿಜಯ್ ಜೊಸೆಫ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆ ಯಾಚಿಸಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ. ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ದೀಪತ್ತೂಣ್ನಲ್ಲಿ ಕಾರ್ತಿಕ ದೀಪ ಬೆಳಗಲು ತಯಾರಿ ನಡೆಸಿತ್ತು. ಆದರೆ ದೇವಸ್ಥಾನ ಆಡಳಿತ ಮಂಡಳಿ ಕಾರ್ತಿಕ ದೀಪ ಬೆಳಗಲು ಅನುಮತಿ ನಿರಾರಿಸಿತು. ಹೀಗಾಗಿ ಸಂಪ್ರದಾಯಿಕ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಲಾಗಿದೆ ಎಂದು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ಗೆ ಮಧುರೈ ಜಿಲ್ಲಾಧಿಕಾರಿ ವರದಿ
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ವಿಫುಲ್ ಎಂ ಪಾಂಚೋಲಿ ಒಳಗೊಂಡ ಪೀಠದ ಮುಂದೆ ಮಧುರೈ ಜಿಲ್ಲಾಧಿಕಾರಿ ನಿಶಾಂಕ್ ಕೃಷ್ಣ ಸ್ಥಿತಿಗತಿ ವರದಿ ತಯಾರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಜಾರಿಗೊಳಿಸಲು ಜಿಲ್ಲಾಡಳಿತ ಸಂಪೂರ್ಣ ತಯಾರಿ ಮಾಡಿಕೊಂಡಿತ್ತು. ಸೀಮಿತ ತಂಡಕ್ಕೆ ದೀಪತ್ತೂಣ್ನಲ್ಲಿ ದೀಪ ಬೆಳಗಲು ಸೂಚಿಸಲಾಗಿತ್ತು. ಆದರೆ ದೇವಲಾಯದ ಆಡಳಿತ ಮಂಡಳಿ ದೀಪತ್ತೂಣ್ ಬದಲು ಸಾಂಪ್ರದಾಯಿಕ ಸ್ಥಳದಲ್ಲಿ ದೀಪ ಬೆಳಗಲು ನಿರ್ದರಿಸಿತ್ತು. ದೇವಲಾಯದ ಅನುಮತಿ ಪಡೆಯಲು ಜಿಲ್ಲಾಡಳಿತ, ಸರ್ಕಾರ ಸಂಪೂರ್ಣ ಪ್ರಯತ್ನ ನಡೆಸಿ ವಿಫಲಗೊಂಡಿತು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ದೀಪ ಬೆಳಗಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ.
ನ್ಯಾಯಾಂಗ ನಿಂದನೆ ಅರ್ಜಿ ಪರಿಗಣಿಸುವುದಾಗಿ ಹೇಳಿದ ಕೋರ್ಟ್
ಮುಖ್ಯ ಅರ್ಜಿಯ ವಿಚಾರಣೆಯನ್ನು ಜನವರಿ 2027ಕ್ಕೆ ಮುಂದೂಡಿಲಾಗಿದೆ. ಇದೇ ವೇಳೆ ನ್ಯಾಯಾಂಗ ನಿಂದನೆ ಕುರಿತ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಲಿದೆ ಎಂದಿದೆ.ಇತ್ತ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಗಳು, ಬಿಜೆಪಿ ಸೇರಿದಂತೆ ಇತರ ಕೆಲ ಸಂಘಟನೆಗಳು ವಿಜಯ್ ಸರ್ಕಾರ ವಿರುದ್ದ ಹೋರಾಟ ತೀವ್ರಗೊಳಿಸಿದೆ.
















