ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ಬಿಜೆಪಿ ಸದಸ್ಯನ ಮಾತಿನಿಂದ ಕೋಪಗೊಂಡ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಗಾಜಿನ ಲೋಟ ಒಡೆದ ಘಟನೆ ನಡೆದಿದೆ.
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ಮಂಗಳವಾರ ಹೈಡ್ರಾಮಾ ನಡೆದಿದ್ದು, ಸಭೆ ವೇಳೆ ಬಿಜೆಪಿ ಸದಸ್ಯನ ಮಾತಿನಿಂದ ಕೋಪಗೊಂಡ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ, ಅಲ್ಲೇ ಇದ್ದ ಗಾಜಿನ ಲೋಟ ಒಡೆದು ಅದನ್ನು ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರತ್ತ ಎಸೆದ ಪ್ರಸಂಗ ನಡೆದಿದೆ.
ಘಟನೆಯಲ್ಲಿ ಕಲ್ಯಾಣ್ ಬೆರಳುಗಳಿಗೆ ಗಾಯಗಳಾಗಿವೆ. ಆದರೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ಮುಂದಿನ ವಕ್ಫ್ ಸಭೆಯಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಹಲವು ಕೇಸ್ ಇತ್ಯರ್ಥ, ನೂರಾರು ಆದೇಶ; ಈ ಕೋರ್ಟ್ ಕತೆ ಕೇಳಿ ದೇಶವೇ ಶಾಕ್!
ಆಗಿದ್ದೇನು?:
ಮೂಲಗಳ ಪ್ರಕಾರ ವಕ್ಫ್ ಸದನ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಬಿಜೆಪಿ ಸದಸ್ಯ ಹಾಗೂ ಕಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಯ ಮಾತಿಗೆ ಕಲ್ಯಾಣ್ ಕೆರಳಿದ್ದಾರೆ. ಈ ವೇಳೆ ಬ್ಯಾನರ್ಜಿ ಕೂಡ ಕೆಲವು ಪದಗಳನ್ನು ಗಂಗೋಪಾಧ್ಯಾಯ ವಿರುದ್ಧ ಪ್ರಯೋಗಿಸಿದ್ದಾರೆ. ಬಳಿಕ
ಅಲ್ಲೇ ನೀರಿದ್ದ ಗಾಜಿನ ಲೋಟವನ್ನು ಟೇಬಲ್ ಮೇಲೆ ಕುಕ್ಕಿ ಒಡೆದು ಹಾಕಿದರು ಹಾಗೂ ಅದರ ತುಣುಕನ್ನು ಸಮಿತಿ ಅಧ್ಯಕ್ಷ ಪಾಲ್ ಅವರತ್ತ ಎಸೆದರು ಎಂದು ಗೊತ್ತಾಗಿದೆ. ಈ ವೇಳೆ ಗಾಜು ಒಡೆದು ಕಲ್ಯಾಣ್ ಬೆರಳಿಗೆ ಚುಚ್ಚಿ ಗಾಯಗಳಾಗಿವೆ. ಆದರೆ ಪಾಲ್‌ಗೆ ಏನೂ ಆಗಿಲ್ಲ.
ಸ್ಥಳದಲ್ಲೇ ಬ್ಯಾನರ್ಜಿಗೆ 4 ಹೊಲಿಗೆ ಹಾಕಿ ಡ್ರೆಸ್ಸಿಂಗ್ ಮಾಡಲಾಯಿತು. ಬಲಗೈಗೆ ಏಟಾಗಿದ್ದರಿಂದ ಅಧಿಕಾರಿಗಳೇ ಅವರಿಗೆ ಸೂಪ್ ಕುಡಿಸಿದರು. ಬಳಿಕ ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಮತ್ತು ಆಪ್ ನಾಯಕ ಸಂಜಯ್ ಸಿಂಗ್ ಅವರು ಕಲ್ಯಾಣ್ ಬ್ಯಾನರ್ಜಿ ಅವರ ಕೈ ಹಿಡಿದು ಹೊರಗೆ ಕರೆದೊಯ್ದರು.
ಸನಾತನ ಧರ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದ ಉದಯನಿಧಿ; ಇತ್ತ ಹಿಂದುತ್ವ ಪದ ತೆಗೆಯಲು ಸಲ್ಲಿಸಿದ್ದ ಅರ್ಜಿ ವಜಾ
