ಸನಾತನ ಧರ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದ ಉದಯನಿಧಿ; ಇತ್ತ ಹಿಂದುತ್ವ ಪದ ತೆಗೆಯಲು ಸಲ್ಲಿಸಿದ್ದ ಅರ್ಜಿ ವಜಾ
ತಮಿಳುನಾಡು ಮುಖ್ಯಮಂತ್ರಿಗಳ ಪುತ್ರ ಉದಯನಿಧಿ ಸ್ಟಾಲಿನ್ ಅವರು ತಮ್ಮ ವಿವಾದಾತ್ಮಕ 'ಸನಾತನ ಧರ್ಮ' ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಚೆನ್ನೈ: 'ಸನಾತನ ಧರ್ಮ ಎಂಬುದು ಡೆಂಘೀ ಮತ್ತು ಮಲೇರಿಯಾ ಇದ್ದಂತೆ. ಅದನ್ನು ವಿರೋಧಿಸುವುದಲ್ಲ. ಬದಲಾಗಿ ನಿರ್ಮೂಲನೆ ಮಾಡಬೇಕು' ಎಂದು ಕಳೆದ ವರ್ಷ ತಾವು ನೀಡಿದ್ದ ವಿವಾದಿತ ಹೇಳಿಕೆ ಬಗ್ಗೆ ಕ್ಷಮೆ ಕೇಳಲ್ಲ ಎಂದು ತಮಿಳು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ ಹಾಗೂ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಉದಯನಿಧಿ, 'ಸನಾತನ ಧರ್ಮ ಮಹಿಳೆ ಯರ ಕುರಿತು ದಮನಕಾರಿ ನಿಲುವು ಹೊಂದಿದೆ. ಹೀಗಾಗಿಯೇ ಇದರ ವಿರುದ್ಧ ದ್ರಾವಿಡ ನಾಯಕರಾದ ಪೆರಿಯಾರ್, ಅಣ್ಣದೊರೈ ಕರುಣಾನಿಧಿ ಅವರಂಥ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
ನಾನು ಆದೇ ಮಾತುಗಳನ್ನು ಪುನರುಚ್ಚಾರ ಮಾಡಿದ್ದೆ. ಆದರ ನನ್ನ ಮಾತುಗಳನ್ನು ತಿರುಚಿ ವಿವಾದ ಸೃಷ್ಟಿಸಲಾಗಿತ್ತು.' ಎಂದರು. 'ಸಮಿಳುನಾಡು ಮಾತ್ರವ ಇದೇ ಬೇರೆ ಬೇರೆ ರಾಜ್ಯಗ ಇಲ್ಲೂ ನನ್ನ ವಿರುದ್ಧ ಪ್ರಕರಣ ನನ್ನ ಕ್ಷಮೆಗೆ ಆಗ್ರಹಿಸಲಾಗಿದೆ. ಆದರೆ ನಾನು ಕಲೈನಾರ್ (ಕರುಣಾನಿಧಿ) ಅವರ ಮೊಮ್ಮಗ ಯಾವುದೇ ಕಾರಣಕ್ಕೂ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸುವುದಿಲ್ಲ. ಎಲ್ಲಾ ಪ್ರಕರಣಗಳನ್ನೂ ಎದುರಿಸಲು ನಾನು ಸಿದ್ದ' ಎಂದು ಹೇಳಿದ್ದಾರೆ.
ಹಿಂದುತ್ವ ಪದ ತೆಗೆಯಲು ಸಲ್ಲಿಸಿದ್ದ ಅರ್ಜಿ ವಜಾ
ಸಂವಿಧಾನದ ಪೀಠಿಕೆಯಲ್ಲಿ ರುವ 'ಹಿಂದುತ್ವ' ಪದ ತೆಗೆದು 'ಸಂವಿಧಾನತ್ವ' ಎಂಬ ಪದ ಸೇರಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕಳೆದ ಕೆಲ ದಶಕಗಳಲ್ಲಿ ಹೀಗೆ ವಜಾ ಆದ ಮೂರನೇ ಅರ್ಜಿ ಇದು ಎಂಬುದು ವಿಶೇಷ.
'ಹಿಂದುತ್ವ ಎಂಬ ಪದವು, ಸಮುದಾಯವೊಂದರ ಮೂಲಭೂತವಾದಿಗಳು ದುರುಪಯೋಗಪಡಿಸಿಕೊಳ್ಳಲು ಸಾಕಷ್ಟು ಅವಕಾಶ ಕಲ್ಪಿಸಿದೆ. ಜೊತೆಗೆ ಈ ಪದವು. ಜಾತ್ಯತೀತ ಸಂವಿಧಾನವನ್ನು ದೇವಪ್ರಭುತ್ವದ ಸಂವಿಧಾನಕ್ಕೆ ಬದಲಾಯಿಸಲು ಉದ್ದೇಶ ಹೊಂದಿರುವವರಿಗೆ ಅವಕಾಶ ಕಲ್ಪಿಸುತ್ತವೆ' ಎಂದು ಡಾ.ಎಸ್.ಎನ್. ಕುಂದ್ರಾ ಎಂಬುವರು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ಸಿಜೆಐ ನೇತೃತ್ವದ ನ್ಯಾಯಪೀಠ, 'ನಾವು ಇಂಥ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸುವುದಿಲ್ಲ. ನಮಗೆ ಮಾಡಲು ಬೇಕಾದಷ್ಟು ಒಳ್ಳೆಯ ಕೆಲಸಗಳಿವೆ' ಎಂದು ಹೇಳಿ ಅರ್ಜಿ ವಜಾ ಮಾಡಿತು.
ಸನಾತನ ಧರ್ಮ ಅವಹೇಳನ ಪ್ರಕರಣ; ಉದಯ್ ನಿಧಿ ಸ್ಟಾಲಿನ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್
ಉದಯನಿಧಿ ವಿರುದ್ಧ ಹೈಕೋರ್ಟ್‌ಗೆ ದೂರು
ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರು ಟಿ-ಶರ್ಟ್, ಜೀನ್ಸ್ ಧರಿಸಿ ಸರ್ಕಾರದ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮದ್ರಾಸ್ ಕೈಕೋರ್ಟ್‌ಗೆ ದೂರು ಸಲ್ಲಿಸಿರುವ ವಕೀಲರೊಬ್ಬರು, ಅವರಿಗೆ 2019ರ ಸರ್ಕಾರಿ ಆದೇಶಾನುಸಾರ ಔಪಚಾರಿಕ ವಸ್ತ್ರಸಂಹಿತೆಯನ್ನು ಅನುಸರಿಸಲು ನಿರ್ದೇಶಿಸುವಂತೆ ಕೋರಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಉದಯನಿಧಿ ಧರಿಸುವ ಟಿ-ಶರ್ಟ್, ಜೀನ್ಸ್, ಪಾದರಕ್ಷೆಯನ್ನು ವಸ್ತ್ರಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಎಂದು ವಕೀಲ ಎಂ. ಸತ್ಯ ಕುಮಾರ್ ಮನವಿ ಮಾಡಿದ್ದಾರೆ.
‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಡಿಎಂಕೆ ಪಕ್ಷದ ಚಿಹ್ನೆಗಳ ಪ್ರದರ್ಶನ ಅಸಂವಿಧಾನಿಕ ಹಾಗೂ ಅಕ್ರಮ. ರಾಜಕೀಯ ಮತ್ತು ಸರ್ಕಾರಿ ಕರ್ತವ್ಯಗಳ ನಡುವಿನ ಅಂತರವನ್ನು ಅರಿತು, ವಸ್ತ್ರ ಸಂಹಿತೆಯನ್ನು ಅನುಸರಿಸಲು ಅವರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತಾವು ಆಧುನಿಕತೆ ಮತ್ತು ತಮಿಳು ಸಂಸ್ಕೃತಿಯ ಪರ ಎಂದು ಬಿಂಬಿಸಲು ಡಿಎಂಕೆಯ ಕೆಲ ನಾಯಕರು ಟಿ-ಶರ್ಟ್ ಹಾಗೂ ಧೋತಿ ಧರಿಸುತ್ತಿದ್ದುದನ್ನೂ ವಕೀಲರು ಇಲ್ಲಿ ಸ್ಮರಿಸಿದ್ದಾರೆ.
ಸನಾತನ ಧರ್ಮ ಅಳಿಸಲಾಗದು ಎಂದ ಪವನ್ ಕಲ್ಯಾಣ್: ಕಾದು ನೋಡಿ ಎಂದ ಉದಯನಿಧಿ ಸ್ಟಾಲಿನ್