Asianet Suvarna News Asianet Suvarna News

ಮೋದಿ ಸಮ್ಮುಖದಲ್ಲಿ 2ನೇ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾದ ಭೂಪೇಂದ್ರ !

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ 20 ಘಟನಾನುಘಟಿ ನಾಯಕರ ಸಮ್ಮುಖದಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿ ಭೂಪೇಂದ್ರ ಭಾಯಿ ಪಟೇಲ್‌ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 16 ಶಾಸಕರು ಈ ವೇಳೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
 

Bhupendrabhai Patel takes Oath as Gujarat CM Cabinet Minister List Narendra Modi Amit Shah JP Nadda Rajnath Singh san
Author
First Published Dec 12, 2022, 2:24 PM IST

ಅಹಮದಾಬಾದ್‌ (ಡಿ.12): ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ 20ಕ್ಕೂ ಅಧಿಕ ದೊಡ್ಡ ನಾಯಕರ ಸಮ್ಮುಖದಲ್ಲಿ 2ನೇ ಬಾರಿಗೆ 62 ವರ್ಷದ ಭೂಪೇಂದ್ರ ಭಾಯಿ ಪಟೇಲ್‌ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಅವರೊಂದಿಗೆ 16 ಶಾಸಕರು, ಸಚಿವರಾಗಿ ಬಡ್ತಿ ಪಡೆದಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದರು. ಭೂಪೇಂದ್ರ ಭಾಯಿ ಪಟೇಲ್‌ ಗುಜರಾತ್‌ನ 18ನೇ ಮುಖ್ಯಮಂತ್ರಿ ಎನಿಸಿದ್ದಾರೆ. ಚುನಾವಣೆಗೂ ಮುನ್ನ ಗುಜರಾತ್ ನಲ್ಲಿ ಆಗಾಗ ಸಭೆ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಪಟೇಲ್ ಪ್ರಮಾಣ ವಚನ ಸ್ವೀಕಾರಕ್ಕೆ ಒಂದು ದಿನ ಮುಂಚಿತವಾಗಿ ಅಹಮದಾಬಾದ್ ಗೆ ಆಗಮಿಸಿದ್ದರು. ಏರ್‌ಪೋರ್ಟ್‌ನಿಂದ ಬರುವ ವೇಳೆ ತಡರಾತ್ರಿಯಾದರೂ ಜನರು ಮೋದಿಯವರನ್ನು ಸ್ವಾಗತಿಸಲು ನಿಂತಿದ್ದರಿಂದ ಅಲ್ಲಿಯೇ ಸಣ್ಣ ಪ್ರಮಾಣದ ರೋಡ್‌ ಶೂ ಕೂಡ ನಡೆಯಿತು. ಮೋದಿ ಕೂಡ ತಮ್ಮ ಕಾರಿನ ವೇಗವನ್ನು ಕಡಿಮೆ ಮಾಡುವ ಮೂಲಕ ಜನರ ಸ್ವಾಗತಕ್ಕೆ ಧನ್ಯವಾದ ಸಲ್ಲಿಸಿದರು.

    
ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಸೆಕ್ರೆಟರಿಯೇಟ್‌ನ ಹೆಲಿಪ್ಯಾಡ್ ಮೈದಾನದಲ್ಲಿ ಭೂಪೇಂದ್ರ ಪಟೇಲ್ ಅವರ ಪ್ರಮಾಣ ವಚನ ಸಮಾರಂಭ ನಡೆಯಿತು. ಮಾಧ್ಯಮ ವರದಿಗಳ ಪ್ರಕಾರ ಇಂದು 16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ 20 ರಾಜ್ಯಗಳ ಸಿಎಂಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಎರಡು ಸಾವಿರಕ್ಕೂ ಹೆಚ್ಚು ಇತರ ನಾಯಕರು ಮತ್ತು 200 ಸಂತರು ಸಹ ಪ್ರಮಾಣವಚನದ ಭಾಗವಾಗಿದ್ದರು,

ಗುಜರಾತ್‌ ಸಿಎಂ ಆಯ್ಕೆಗೆ ವೀಕ್ಷಕರಾಗಿ ತೆರಳಿದ ಬಿಎಸ್‌ವೈ: ವಿದೇಶಿ ಮಾಧ್ಯಮಗಳಲ್ಲಿ ಗುಜರಾತ್‌ ಗೆಲುವಿನ ಬಣ್ಣನೆ

ಕ್ಯಾಬಿನೆಟ್ ಮಂತ್ರಿಗಳು: ಕನುಭಾಯಿ ದೇಸಾಯಿ, ಹೃಷಿಕೇಶ್ ಪಟೇಲ್, ರಾಘವಜಿ ಭಾಯಿ ಪಟೇಲ್, ಬಲವಂತ್ ಸಿಂಗ್ ರಜಪೂತ್, ಭಾನುಬೆನ್ ಬವೇರಿಯಾ, ಕುಬೇರಭಾಯ್ ದಿಂಡೋರ್, ಕುಂವರ್ಜಿ ಬೌಡಿಯಾ, ಅಯ್ಯರ್ ಮುಲುಭಾಯ್ ಬೇರಾ. ರಾಜ್ಯ ಸ್ವತಂತ್ರ ಸಚಿವರು: ಹರ್ಷ ಸಾಂಘ್ವಿ, ಜಗದೀಶ್ ವಿಶ್ವಕರ್ಮ. ರಾಜ್ಯ ಮಂತ್ರಿಗಳು: ಪುರುಷೋತ್ತಮ ಸೋಲಂಕಿ, ಬಾಚುಭಾಯಿ ಖಬಾದ್, ಮುಖೇಶಭಾಯ್ ಪಟೇಲ್, ಪ್ರಫುಲ್ಲ ಪನ್ಸೇರಿಯಾ, ಭಿಖು ಸಿಂಗ್ ಪರ್ಮಾರ್, ಕುಂವರ್ಜಿ ಭಾಯಿ ಹಳಪತಿ.

ರಾಜ್ಯ ಬಿಜೆಪಿ-ಕಾಂಗ್ರೆಸ್‌ನಲ್ಲಿ ಗುಜರಾತ್‌ ಮಾಡೆಲ್‌ ಜಪ!

ಭೂಪೇಂದ್ರ ಸಂಪುಟದಲ್ಲಿ ಹಾರ್ದಿಕ್‌ಗೆ ಸ್ಥಾನವಿಲ್ಲ:
ಗುಜರಾತ್ ನ 18ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಸತತ ಎರಡನೇ ಬಾರಿಗೆ ಸಿಎಂ ಆಗುತ್ತಿರುವ ಪಾಟಿದಾರ್ ಸಮುದಾಯದ ಏಕೈಕ ನಾಯಕ. 15 ತಿಂಗಳ ಹಿಂದೆ ವಿಜಯ್ ರೂಪಾನಿ ಬದಲಿಗೆ ಗುಜರಾತ್‌ನ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು. ಭೂಪೇಂದ್ರ ಪಟೇಲ್ ಸಂಪುಟದಲ್ಲಿ ಹಾರ್ದಿಕ್ ಪಟೇಲ್ ಗೆ ಸ್ಥಾನ ಸಿಕ್ಕಿಲ್ಲ. ನಾನು ಸಂಪುಟದಲ್ಲಿ ಉಳಿಯಬೇಕೋ ಬೇಡವೋ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹಾರ್ದಿಕ್‌ ಪಟೇಲ್‌ ಬೆಳಗ್ಗೆಯೇ ಹೇಳಿದ್ದರು. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುವುದಾಗಿ ತಿಳಿಸಿದ್ದರು.

ಗುಜರಾತ್‌ನಲ್ಲಿ ಹೊಸ ದಾಖಲೆ ಬರೆದ ಬಿಜೆಪಿ: ಗುಜರಾತ್‌ನ 182 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 156 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ನಿರ್ಮಿಸಿದೆ. 1985ರಲ್ಲಿ ಮಾಧವ್ ಸಿಂಗ್ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ 149 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಅದೇ ಸಮಯದಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದಾಗ 2002ರ ಚುನಾವಣೆಯಲ್ಲಿ ಬಿಜೆಪಿ 127 ಸ್ಥಾನಗಳನ್ನು ಗೆದ್ದಿತ್ತು. ಈ ಗೆಲುವಿನೊಂದಿಗೆ ಬಿಜೆಪಿ ಎರಡೂ ದಾಖಲೆಗಳನ್ನು ಮುರಿದಿದೆ.

Follow Us:
Download App:
  • android
  • ios