Asianet Suvarna News Asianet Suvarna News

ಸೆಗಣಿಯ ಬೆರಣಿ ಮಾಡಲು ಬನಾರಸ್ ವಿವಿಯಿಂದ ವಿದ್ಯಾರ್ಥಿಗಳಿಗೆ ತರಬೇತಿ

 

  • ಬೆರಣಿ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ
  • ಬನಾರಸ್‌ ವಿವಿಯಿಂದ ತರಬೇತಿ ಕಾರ್ಯಾಗಾರ
  • ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿವಿ
BHU Trains Students to Make Cow Dung Cakes watch video akb
Author
Bangalore, First Published Feb 7, 2022, 6:46 PM IST

ಉತ್ತರಪ್ರದೇಶ(ಫೆ.7): ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯವಾಗಿರುವ ವಾರಣಾಸಿಯ ಬನಾರಸ್‌  ಹಿಂದೂ ವಿಶ್ವ ವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಹಸುವಿನ ಸೆಗಣಿಯಿಂದ ಬೆರಣಿ ಮಾಡುವುದು ಹೇಗೆ ಎಂದು ತರಬೇತಿ ನೀಡುತ್ತಿದ್ದು, ಈ ವಿಡಿಯೋದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಪ್ರೊಫೆಸರ್ ಕೌಶಲ್ ಕಿಶೋರ್‌ ಮಿಶ್ರಾ ( Kaushal Kishore Mishra) ವಿದ್ಯಾರ್ಥಿಗಳಿಗೆ ಹಸುವಿನ ಕೇಕ್‌ಗಳನ್ನು ಹೇಗೆ ತಯಾರಿಸಬೇಕೆಂದು ತೋರಿಸುತ್ತಾರೆ ಮತ್ತು ದೈನಂದಿನ ಜೀವನದಲ್ಲಿ ಅದರ ಅನೇಕ ಪ್ರಯೋಜನಗಳನ್ನು ವಿವರಿಸುತ್ತಾರೆ.

ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು 'ಉಪಾಲಾ' (ಹಸುವಿನ ಸೆಗಣಿಯ ಬೆರಣಿ)  ಹೇಗೆ ತಯಾರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ವೀಡಿಯೊ ಟ್ವಿಟರ್‌ನಲ್ಲಿ ಪೋಸ್ಟ್‌ ಆಗಿದೆ. ವಿವಿಯೂ ಇತ್ತೀಚೆಗೆ ಈ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಿತು. ಇದರಲ್ಲಿ ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ಕೌಶಲ್ ಕಿಶೋರ್‌ ಮಿಶ್ರಾ ಈ ಬಗ್ಗೆ ವಿವರಣೆ ನೀಡಿದರು. 

ಅಮೆರಿಕ ಏರ್‌ಪೋರ್ಟ್‌ನಲ್ಲಿ ಭಾರತೀಯನ ಬ್ಯಾಗ್‌ನಲ್ಲಿ ಸಿಕ್ತು ಸೆಗಣಿ ಬೆರಣಿ

ವೀಡಿಯೊದಲ್ಲಿ, ಪ್ರೊ. ಈ ಸಗಣಿ ಬೆರಣಿಗಳನ್ನು 'ಹವನ', ಪೂಜೆ ಮತ್ತು ಆಹಾರ ತಯಾರಿಸಲು ಇಂಧನವಾಗಿಯೂ ಬಳಸಬಹುದು ಎಂದು ಹೇಳುತ್ತಾರೆ. ವಿದ್ಯಾರ್ಥಿಗಳು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಹಸುವಿನ ಬೆರಣಿಗಳನ್ನು ತಯಾರಿಸುವ ತರಬೇತಿಯನ್ನು ನೀಡಲಿದ್ದಾರೆ ಮತ್ತು ಗೋವಿನ ಸಗಣಿಯಿಂದ ತಯಾರಿಸಬಹುದಾದ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರವು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ವಿಶ್ವವಿದ್ಯಾನಿಲಯದ ಸಮಗ್ರ ಗ್ರಾಮಾಭಿವೃದ್ಧಿ ಕೇಂದ್ರದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಎಚ್‌ಯು ವೀಡಿಯೋವನ್ನು ಟ್ವೀಟ್ ಮಾಡಿ ತಿಳಿಸಿದೆ.

 

ವೀಡಿಯೋ ವೈರಲ್ ಆಗಿದ್ದು, ಅನೇಕ ಜನರು ಇದಕ್ಕೆ ಹಾಸ್ಯ ಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಹಳ್ಳಿಗಳ ಜನರಿಗೆ ಈಗಾಗಲೇ ಹಸುವಿನ ಬೆರಣಿ ಮಾಡುವುದು ಹೇಗೆ ಎಂದು ತಿಳಿದಿದೆ ಎಂದು ಕೆಲವರು ಹೇಳಿದರು. ಇತರರು ವಿಶ್ವವಿದ್ಯಾನಿಲಯಗಳು ಉನ್ನತ ಶಿಕ್ಷಣದ ಸ್ಥಳಗಳಾಗಬೇಕು ಮತ್ತು ಹಸುವಿನ ಬೆರಣಿ ಮಾಡುವುದನ್ನು ಕಲಿಯುವ ಕೇಂದ್ರಗಳಲ್ಲ ಎಂದು ಪ್ರತಿಕ್ರಿಯಿಸಿದರು.

'ನನ್ನ ಚಪ್ಪಲಿಗಳಲ್ಲಿ ಸೆಗಣಿ ಗುರುತಿದೆ': ರಾಜಸ್ಥಾನದ ಹೈನುಗಾರನ ಮಗಳೀಗ ಜಡ್ಜ್

ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದನದ ಸಗಣಿಯಿಂದ ತಯಾರಿಸಿದ ಸೋಪು ಹಾಗೂ ಬಿದಿರಿನಿಂದ ತಯಾರಿಸಲಾದ ನೀರಿನ ಬಾಟಲ್‌ಗಳನ್ನು ಕೆಲ ವರ್ಷಗಳ ಹಿಂದೆ ಬಿಡುಗಡೆಗೊಳಿಸಲಾಗಿತ್ತು. ಖಾದಿ ಹಾಗೂ ಗ್ರಾಮೋದ್ಯೋಗ ಮೂಲಕ ಈ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಸಚಿವ ಗಡ್ಕರಿ ಇವುಗಳನ್ನು ಬಿಡುಗಡೆ ಮಾಡಿದ್ದರು. ಆಗ ಬಿದಿರಿನ ನೀರಿನ ಬಾಟಲ್‌ ದರ 560 ರೂ ಇದ್ದರೆ  125 ಗ್ರಾಂ ಸೋಪಿನ ಬೆಲೆ 125 ರೂಪಾಯಿಗೆ ನಿಗದಿ ಮಾಡಲಾಗಿತ್ತು.

ಕಳೆದ ವರ್ಷ ಭಾರತೀಯ ಪ್ರಯಾಣಿಕನೋರ್ವನ ಬ್ಯಾಗ್‌ನಲ್ಲಿದ್ದ ಸೆಗಣಿ ಬೆರಣಿಯನ್ನು ಅಮೆರಿಕದಲ್ಲಿ ಏರ್ಪೋರ್ಟ್ ಸಿಬ್ಬಂದಿ ವಶಪಡಿಸಿಕೊಂಡು ನಾಶ ಮಾಡಿದ ಘಟನೆ ನಡೆದಿತ್ತು. ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದಿಂದ ಪ್ರಯಾಣಿಸಿದ ವ್ಯಕ್ತಿಯ ಸಾಮಾನು ಸರಂಜಾಮುಗಳಲ್ಲಿ ಬೆರಣಿ ಪತ್ತೆ ಮಾಡಿದ್ದರು.

ಆದರೆ ಹಸುವಿನ ಸಗಣಿ ಬೆರಣಿಯನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಸೆಗಣಿ ಹೆಚ್ಚು ಸಾಂಕ್ರಾಮಿಕ ಕಾಲು ಬಾಯಿ ರೋಗದ ಸಂಭಾವ್ಯ ವಾಹಕಗಳಾಗಿವೆ ಎಂದು ಅವರು ಬಲವಾಗಿ ನಂಬುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಅವುಗಳನ್ನು ಸಂಪೂರ್ಣ ನಾಶ ಮಾಡಲಾಯಿತು ಎಂದು ತಿಳಿದು ಬಂದಿದೆ.

 

Follow Us:
Download App:
  • android
  • ios