Asianet Suvarna News Asianet Suvarna News

ಮುಕೇಶ್‌ ಅಂಬಾನಿ ಪತ್ನಿ ಬನಾರಸ್‌ ವಿವಿಗೆ ಅತಿಥಿ ಉಪನ್ಯಾಸಕಿ: ಆಕ್ಷೇಪ

ರಿಲ​ಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅತಿಥಿ ಉಪನ್ಯಾಸ| ಬನರಾಸ್‌ ಹಿಂದೂ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಆಕ್ಷೇಪ

BHU students protest decision to make Nita Ambani visiting professor pod
Author
Bangalore, First Published Mar 18, 2021, 8:40 AM IST

ಲಖ​ನೌ/​ವಾ​ರಾ​ಣ​ಸಿ(ಮಾ.18): ರಿಲ​ಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರನ್ನು ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಲು ಬನರಾಸ್‌ ಹಿಂದೂ ವಿಶ್ವವಿದ್ಯಾಲಯ ಮುಂದಾಗಿದೆ.

ಕೆಲಸಗಾರರ ಮತ್ತು ಕುಟುಂಬಗಳ ವ್ಯಾಕ್ಸೀನ್ ಖರ್ಚು ವಹಿಸಿಕೊಂಡ ರಿಲಯನ್ಸ್

ಸಾಮಾ​ಜಿಕ ವಿಜ್ಞಾನ ವಿಭಾ​ಗ​ದಲ್ಲಿ 3 ಅತಿಥಿ ಉಪ​ನ್ಯಾ​ಸ​ಕರ ಹುದ್ದೆ​ಗಳು ಖಾಲಿ​ಯಿದ್ದು, ಈ ಪೈಕಿ ಒಂದು ಸ್ಥಾನಕ್ಕೆ ನೀತಾ ಅಂಬಾ​ನಿಗೆ ಪ್ರಸ್ತಾ​ವನೆ ರವಾ​ನಿ​ಸ​ಲಾ​ಗಿದೆ. ಇನ್ನು​ಳಿದ 2 ಸ್ಥಾನ​ಗ​ಳಿ​ಗಾಗಿ ಉದ್ಯಮಿ ಗೌತಮ್‌ ಅದಾನಿ ಪತ್ನಿ ಪ್ರೀತಿ ಅದಾನಿ ಹಾಗೂ ಲಕ್ಷ್ಮೇ ಮಿತ್ತಲ್‌ ಪತ್ನಿ ಉಷಾ ಮಿತ್ತಲ್‌ ಅವ​ರ ಹೆಸ​ರು​ಗ​ಳನ್ನು ಪರಿ​ಗ​ಣಿ​ಸ​ಲಾ​ಗು​ತ್ತಿದೆ ಎನ್ನ​ಲಾ​ಗಿದೆ. ಆದರೆ ವಿವಿಯ ಈ ಪ್ರಸ್ತಾಪಕ್ಕೆ ಕೆಲ ವಿದ್ಯಾರ್ಥಿಗಳು ತೀವ್ರ ಆಕ್ಷೆಪ ವ್ಯಕ್ತಪಡಿಸಿದ್ದಾರೆ.

ಈ ನಡುವೆ ನೀತಾ ಅಂಬಾನಿ ಅವ​ರನ್ನು ಸಾಮಾ​ಜಿಕ ವಿಜ್ಞಾ​ನದ ಅತಿಥಿ ಉಪ​ನ್ಯಾ​ಸ​ಕಿ​ಯಾಗಿ ನೇಮಿ​ಸಿ​ಕೊ​ಳ್ಳುವ ಕುರಿ​ತಾಗಿ ಈವ​ರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ರಿಲ​ಯನ್ಸ್‌ ಇಂಡ​ಸ್ಟ್ರೀಸ್‌ ಸ್ಪಷ್ಟ​ಪ​ಡಿ​ಸಿದೆ.

Follow Us:
Download App:
  • android
  • ios