ಕೆಲಸಗಾರರ ಮತ್ತು ಅವರ ಕುಟುಂಬದ ವ್ಯಾಕ್ಸೀನ್ ವೆಚ್ಚ ವಹಿಸಿಕೊಂಡ ರಿಲಯನ್ಸ್ | ವ್ಯಾಕ್ಸಿನೇಷನ್ ಬಗ್ಗೆ ನೀತಾ ಅಂಬಾನಿ ಭರವಸೆ

ಅಂಬಾನಿ ದಂಪತಿಗಳು ಕಂಪನಿ ಕೆಲಸಗಾರರ ವಿಚಾರದಲ್ಲಿ ನಡೆದುಕೊಳ್ಳುವ ರೀತಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕೊರೋನಾ ವ್ಯಾಕ್ಸಿನೇಷನ್ ಕೆಲಸ ಆರಂಭವಾಗಿದ್ದು, ಮಾವನೀಯ ಕೆಲಸಕ್ಕೆ ಮುಂದಾಗಿದ್ದಾರೆ ಅಂಬಾನಿ ದಂಪತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲಸಗಾರರಿಗೆ ಲೆಟೇಸ್ಟ್ ಮೇಲ್ ಕಳುಹಿಸಿದ ಕಂಪನಿ, ಕೆಲಸಗಾರರು, ಅವರ ಪತಿ ಅಥವಾ ಪತ್ನಿ ಮತ್ತು ಮಕ್ಕಳು, ಕುಟುಂಬದ ಕೊರೋನಾ ವ್ಯಾಕ್ಸಿನ್ ವೆಚ್ಚವನ್ನು ಕಂಪನಿ ಭರಿಸುವುದಾಗಿ ಹೇಳಿದೆ.

ವ್ಯಾಕ್ಸೀನ್ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ಬೇಡ: ಚುನಾವಣಾ ಆಯೋಗ ಸೂಚನೆ

ಈ ನಿಟ್ಟಿನಲ್ಲಿ ಕೆಲಸಗಾರರು ಮತ್ತು ಕುಟುಂಬಸ್ಥರು ವ್ಯಾಕ್ಸೀನ್ಗಾಗಿ ನೋಂದಣಿ ಮಾಡುವಂತೆ ಹೇಳಿದೆ. ನಮ್ಮ ಕುಟುಂಬದ ಆರೋಗ್ಯ ಮತ್ತು ಖುಷಿ ನಮ್ಮ ರಿಲಯೆನ್ಸ್ ಫ್ಯಾಮಿಲಿಯ ಭಾಗವೇ ಆಗಿದೆ ಎಂದು ಕಂಪನಿ ತಿಳಿಸಿದೆ.

ಸರ್ಕಾರ ಈಗ ಜಗತ್ತಿನ ಅತ್ಯಂತ ದೊಡ್ಡಮಟ್ಟದ ವ್ಯಾಕ್ಸಿನೇಷನ್ ಕಾರ್ಯಕ್ರಮ ನಡೆಸುತ್ತಿದೆ. ಕೊರೋನಾ ಸೋಲುತ್ತದೆ, ಭಾರತ ಗೆಲ್ಲುತ್ತದೆ ಎನ್ನುವುದರ ಮೂಲಕ ನೀತಾ ಅಂಬಾನಿ ಮೇಲ್ ಕೊನೆಗೊಳಿಸಿದ್ದಾರೆ.