ಹೆಂಡ್ತಿಗೆ ಜಿರಳೆ ಭಯ: 3 ವರ್ಷದಲ್ಲಿ 18 ಸಲ ಮನೆ ಚೇಂಜ್ ಮಾಡಿದ
ಹೆಂಡ್ತಿಗೆ ಜಿರಳೆ ಕಂಡ್ರೆ ಭಯ | ಜಿರಳೆ ಇದ್ರೆ ಹೆಂಡ್ತಿ ನಿಲ್ಲಲ್ಲ | ಪತ್ನಿಗಾಗಿ 18 ಸಲ ಮನೆ ಚೇಂಜ್ ಮಾಡಿದ | ಪಾಪ ಇವನ ಪಾಡು..!
ಭೋಪಾಲ್(ಎ.16): ನಿಮ್ಮ ಕೋಣೆಯಲ್ಲಿ ಜಿರಳೆ ಕಂಡ್ರೆ ನೀವು ಏನು ಮಾಡುತ್ತೀರಿ? ನಿಮ್ಮ ಜೀವನಕ್ಕಾಗಿ ಓಡುತ್ತೀರಾ? ಒಬ್ಬ ಮಹಿಳೆ ಜಿರಳೆಗಳಿಗೆ ತುಂಬಾ ಹೆದರುತ್ತಾಳೆ. ಇದರ ಪರಿಣಾಮ ಬರೋಬ್ಬರಿ 18 ಬಾರಿ ಆಕೆ ಮನೆಗಳನ್ನು ಬದಲಾಯಿಸಿದ್ದಾಳೆ. ಆಕೆಯ ಈ ವಿಚಿತ್ರ ಭಯದ ಕಾಯಿಲೆಯಿಂದ ಆಕೆಯ ವೈವಾಹಿಕ ಜೀವನಕ್ಕೆ ಏನೂ ಹಾನಿಯಾಗಿಲ್ಲ.
ಮಧ್ಯಪ್ರದೇಶದ ಭೋಪಾಲ್ ನಿಂದ ವರದಿಯಾದ ವಿಲಕ್ಷಣ ಘಟನೆಯೊಂದರಲ್ಲಿ, ದಂಪತಿಗಳು ಮದುವೆಯಾದ ಮೂರು ವರ್ಷಗಳಲ್ಲಿ 18 ಮನೆಗಳನ್ನು ಬದಲಾಯಿಸಿದ್ದಾರೆ. ಹೆಂಡತಿಯ ಜಿರಳೆಗಳ ಭಯದಿಂದಾಗಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪತಿಗೆ ಮನೆ ಹುಡುಕೋದೇ ಕೆಲಸ ಆಗ್ಬಿಟ್ಟಿದೆ.
ಹರೆಯದ ಸ್ವಂತ ಮಗುವನ್ನು ಮದುವೆಯಾಗಲು ಕೋರ್ಟ್ ಮೆಟ್ಟಿಲೇರಿದ ಪೋಷಕ..!
ಹೆಂಡತಿಯ ಭೀತಿಯಿಂದಾಗಿ ಇತರರ ಮುಂದೆ ನಗೆಗೀಡಾಗಿ ಮುಜುಗರಕ್ಕೊಳಗಾಗುವುದರಿಂದ ಬೇಸರಗೊಂಡು ವಿಚ್ಛೇದನೆ ಸಲ್ಲಿಸಲು ಯೋಜಿಸುತ್ತಿದ್ದಾರೆ ಈ ಸಾಫ್ಟ್‌ವೇರ್ ಪತಿ.
2017 ರಲ್ಲಿ ದಂಪತಿಗಳ ವಿವಾಹವಾದ ಕೂಡಲೇ ಪತಿಗೆ ಹೆಂಡತಿಯ ಜಿರಳೆಗಳ ಭಯದ ಬಗ್ಗೆ ಅರಿವಾಯಿತು. ಒಂದು ದಿನ ಅಡುಗೆಮನೆಯಲ್ಲಿ ಜಿರಳೆ ಕಂಡಾಗ ಹೆಂಡತಿ ಕಿರುಚುತ್ತಾಳೆ. ಮನೆಯಲ್ಲಿದ್ದ ಎಲ್ಲರೂ ಭಯಭೀತರಾಗಿದ್ದರು. ಘಟನೆಯ ನಂತರ ಅವಳು ಅಡುಗೆಮನೆ ಪ್ರವೇಶಿಸಲು ನಿರಾಕರಿಸಿದ್ದಾಳೆ. ಮತ್ತೆ ಹೊಸ ಮನೆಗೆ ಶಿಫ್ಟ್ ಆಗಬೇಕೆಂಬುದು ಒಂದೇ ಒತ್ತಾಯ.
ವಿಮಾನದಲ್ಲೇ ಬೆತ್ತಲಾಗಿ ಇಟಾಲಿಯನ್ ಸ್ಮೂಚ್ ಬೇಕೆಂದ..! ಗಗನಸಖಿಯರು ಸುಸ್ತು
ದಂಪತಿಗಳು 2018 ರಲ್ಲಿ ಮೊದಲ ಬಾರಿಗೆ ತಮ್ಮ ಮನೆಯನ್ನು ಬದಲಾಯಿಸಿಕೊಂಡರು. ಆದರೆ ಅದು ಕೇವಲ ಪ್ರಾರಂಭ ಎಂಬುದು ಪಾಪ ಯಾರಿಗೂ ಗೊತ್ತಿರಲಿಲ್ಲ. ಇದೇ ರೀತಿಯ ಮತ್ತೊಂದು ಘಟನೆ ಹೊಸ ಮನೆಯಲ್ಲಿ ಸಂಭವಿಸಿದೆ. ಅಂದಿನಿಂದ ದಂಪತಿಗಳು 18 ಮನೆಗಳನ್ನು ಬದಲಾಯಿಸಿದ್ದಾರೆ.