ನ್ಯೂಯಾರ್ಕ್(ಎ.13): ಸಂಭೋಗ ಸಂಬಂಧಗಳನ್ನು ಪೋಷಕ-ಮಗುವಿನ ಮಧ್ಯೆ ನಿಷೇಧಿಸುವ ಕಾನೂನುಗಳ ವಿರುದ್ಧ  ಪೋಷಕರು ತಮ್ಮ ವಯಸ್ಕ ಮಗುವನ್ನು ಮದುವೆಯಾಗಲು ಕಾನೂನು ವಿನಂತಿಯನ್ನು ಸಲ್ಲಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಮ್ಯಾನ್‌ಹ್ಯಾಟನ್ ಫೆಡರಲ್ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಪೋಷಕರು ಅನಾಮಧೇಯರಾಗಿರಲು ಬಯಸಿದ್ದು, ಅವರ ಹೆಸರನ್ನು ಬಹಿರಂಗಪಡಿಸಿಲ್ಲ.ಅವರ ವಿನಂತಿಯನ್ನು ಸಮಾಜದ ಬಹುತೇಕ ಜನ ಅನೈತಿಕವಾಗಿ, ಸಾಮಾಜಿಕವಾಗಿ ಮತ್ತು ಜೈವಿಕವಾಗಿ ಅಸಹ್ಯಕರವೆಂದು ಭಾವಿಸಿದ್ದಾರೆ. ಹೀಗಾಗಿಯೇ ಅರ್ಜಿದಾರರ ಮಾಹಿತಿ ಗುಟ್ಟಾಗಿದೆ.

ವಿಮಾನದಲ್ಲೇ ಬೆತ್ತಲಾಗಿ ಇಟಾಲಿಯನ್ ಸ್ಮೂಚ್ ಬೇಕೆಂದ..! ಗಗನಸಖಿಯರು ಸುಸ್ತು

ವಿವಾಹದ ನಿರಂತರ ಬಂಧದ ಮೂಲಕ ಇಬ್ಬರು ವ್ಯಕ್ತಿಗಳು ಪರಸ್ಪರ ಯಾವುದೇ ಸಂಬಂಧವನ್ನು ಹೊಂದಿರಬಹುದು, ಹೆಚ್ಚಿನ ಮಟ್ಟದ ಅಭಿವ್ಯಕ್ತಿ, ಅನ್ಯೋನ್ಯತೆ ಮತ್ತು ಆಧ್ಯಾತ್ಮಿಕತೆಯನ್ನು ಕಾಣಬಹುದು ಎಂದು ಪೋಷಕರು ಏಪ್ರಿಲ್ 1 ರಂದು ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ. ಪತ್ರಿಕೆಗಳಲ್ಲಿ ಪೋಷಕರು ಮತ್ತು ಅವರ ಮಗು ಅಥವಾ ಅವರ ಲಿಂಗ, ವಯಸ್ಸು ಅಥವಾ ಅವರ ಸಂಬಂಧದ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳಿಲ್ಲ.