ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ಕಾಲ್ತುಳಿತದಿಂದ 123 ಭಕ್ತರ ಸಾವಿಗೆ ಕಾರಣವಾದ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟ ವಿವಾದಿತ ಧರ್ಮಗುರು ಭೋಲೆಬಾಬಾ ಸಾವಿನ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ.
ಕಾಸ್‌ಗಂಜ್ (ಉ.ಪ್ರ.) ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ಕಾಲ್ತುಳಿತದಿಂದ 123 ಭಕ್ತರ ಸಾವಿಗೆ ಕಾರಣವಾದ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟ ವಿವಾದಿತ ಧರ್ಮಗುರು ಭೋಲೆಬಾಬಾ ಸಾವಿನ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಇಷ್ಟೊಂದು ಜನರು ಸಾವನ್ನಪ್ಪಿದ್ದಕ್ಕೆ ದುಃಖ ವ್ಯಕ್ತಪಡಿಸುವ ಬದಲು ಬಾಬಾ ಈ ಜಗತ್ತಿಗೆ ಬಂದ ಪ್ರತಿಯೊಬ್ಬರೂ ಒಂದು ದಿನ ಹೊರಡಲೇಬೇಕು ಎಂದು ಹೇಳಿದ್ದಾರೆ. ಬಾಬಾ ಹೇಳಿಕೆ ಕಹಿಸತ್ಯವೇ ಈ ಜಗತ್ತಿನಲ್ಲಿ ಹುಟ್ಟಿದವರು ಸಾಯಲೇಬೇಕು. ಆದರೂ. ಇಷ್ಟೊಂದು ಸಾವುಗಳ ನಂತರ ಅವರು ನೀಡಿದ ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಜನಿಸಿದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಸಾವಿನ ಸಮಯ ಮಾತ್ರ ಖಚಿತವಾಗಿರಲ್ಲ ಅಷ್ಟೇ, ಒಂದು ದಿನ ಹೆಚ್ಚೋ ಕಡಿಮೆಯೋ ಆಗಬಹುದು ಅಷ್ಟೇ (ಹೋನಿ ಕೋ ಕೌನ್ ಟಾಲ್ ಸಕ್ತಾ ಹೈ, ಜೋ ಆಯಾ ಹೈ, ಉಸ್ ಏಕ್ ದಿನ್ ಜಾನಾ ಹೀ ಹೈ. ಭಲೇ ಹೀ ಕೋಯಿ ಆಗೇ ಪೀಚೆ ಹೋ) ಎಂದು ಹೇಳಿದರು. ಅಲ್ಲದೇ 121 ಜನರ ಬಲಿ ಪಡೆದ ಹಾಥ್ರಸ್ ದುರಂತದಿಂದ ತಾನು ಬಹಳ ಖಿನ್ನತೆಗೆ ಜಾರಿರುವುದಾಗಿ ಹೇಳಿದ ಬಾಬಾ, ಈ ಡೆಸ್ಟಿನಿಯನ್ನು ಯಾರು ತಡೆಯಲಾಗುತ್ತಿತ್ತು. ಇಲ್ಲಿಗೆ ಬಂದ ಯಾರೇ ಆದರೂ ಅಷ್ಟೇ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದು ಹೇಳಿದರು.
ಭೋಲೇ ಬಾಬಾನ ಈ ಆಶ್ರಮಕ್ಕೆ ಮಹಿಳೆಯರಿಗಷ್ಟೇ ಪ್ರವೇಶ! ಹಾಥ್ರಸ್ ದುರಂತ ಹಿಂದೆ ಪಿತೂರಿ: ಎಸ್‌ಐಟಿ ಶಂಕೆ
ಹಾಥ್ರಸ್ ದುರಂತದ ಹಿಂದೆ ಕೆಲ ಪಿತೂರಿ ಇದೆ, ಕೆಲವರು ವಿಷಕಾರಿ ಸ್ಪೇ ಮಾಡಿದ್ದರಿಂದ ಈ ರೀತಿ ದೊಡ್ಡ ಮಟ್ಟದಲ್ಲಿ ಸಾವು ಸಂಭವಿಸಿದೆ ಎಂದು ಈ ಬಾಬಾ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇರುವುದಾಗಿ ಅವರು ಹೇಳಿದ್ದಾರೆ. ತನ್ನ ಆಧ್ಯಾತ್ಮಿಕ ಜನಪ್ರಿಯತೆಯನ್ನು ತಡೆಯಲಾಗದೇ ಕೆಲವರು ನನಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದು ಬಾಬಾ ಆರೋಪಿಸಿದ್ದಾರೆ. ಅಲ್ಲದೇ ಜುಲೈ 2 ರಂದು ಹಾಥ್ರಸ್‌ನ ಸಿಕಂದರರೂರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಭಕ್ತರ ಕುಟುಂಬದ ಪರ ನಾವು ಇದ್ದೇವೆ ಎಂದು ಹೇಳಿದ ಬಾಬಾ ನ್ಯಾಯಾಂಗ ತನಿಖೆಯ ಮೇಲೆ ತನಗೆ ನಂಬಿಕೆ ಇರುವುದಾಗಿ ಹೇಳಿದರು. ಆದರೆ ಈ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕಂದ್ರರೂರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಆರೋಪಿಯಾಗಿ ಬಾಬಾ ಹೆಸರಿಲ್ಲ.
ವಿಷಕಾರಿ ಕ್ಯಾನ್‌ಗಳನ್ನು ಸಿಡಿಸಿ ಹಾಥ್ರಸ್‌ನಲ್ಲಿ 121 ಜನರ ಹತ್ಯೆ?: ಬಾಬಾ ಪರ ವಕೀಲ ಹೇಳಿದ್ದೇನು?
ಒಂದು ಪೈಸೆಯೂ ದಾನ ಪಡೆಯಲ್ಲ ಅಂತಿದ್ದ ಭೋಲೆಬಾಬಾನ ಆಸ್ತಿ ಒಂದಲ್ಲ ಎರಡಲ್ಲ 100 ಕೋಟಿ
