ನನ್ನ ಗರ್ಭಿಣಿ ಮಾಡಿ ₹13 ಲಕ್ಷ ಜೊತೆ ಮನೆ ಪಡೆಯಿರಿ, ಈ ಮೆಸೇಜ್ ನಿಮ್ಗೂ ಬಂತಾ? ಸ್ವಲ್ಪ ತಡ್ಕೊಳ್ಳಿ,  ನಂಬರ್ ಪಡೆದು ಕರೆ ಮಾಡಿದ ಕೆಲವರು ಡ್ರೈ ಫ್ರೂಟ್ಸ್, ಪೌಷ್ಠಿಕ ಆಹಾರ ತಿಂದು ಸಜ್ಜಾಗಿದ್ದಾರೆ. ಇನ್ನು ಕೆಲವರು ನಮಗೇನು ಗೊತ್ತಿಲ್ಲ ಎಂಬಂತೆ ಇದ್ದಾರೆ. ಈ ಮೆಸೇಜ್ ಬಂದಿದ್ದರೆ ಸ್ವಲ್ಪ ತಡ್ಕೊಳ್ಳಿ 

ನವದೆಹಲಿ (ಫೆ.26) ನನ್ನ ಪ್ರಗ್ನೆಂಟ್ ಮಾಡಿ, 13 ಲಕ್ಷ ರೂಪಾಯಿ ಜೊತೆಗೆ 2 ಬೆಡ್ ರೂಂ ಫ್ಲಾಟ್ ಪಡೆಯಿರಿ ಎಂದು ಸುಂದರ ಮಹಿಳೆಯೊಬ್ಬರ ಮೆಸೇಜ್ ಜೊತೆಗೆ ಫೋಟೋ ಭಾರಿ ಹರಿದಾಡುತ್ತಿದೆ. ಹಲವರು ವ್ಯಾಟ್ಸಾಪ್ ಖಾತೆಗೆ ಈ ಮೆಸೇಜ್ ಬರುತ್ತಿದೆ. ಇದೇ ವೇಳೆ ಈ ಮಾಹಿತಿ ಗೌಪ್ಯವಾಗಿಡಿ. ನಿಮಗೆ ಒಕೆ ಎಂದರೆ ಕರೆ ಮಾಡಿ ಅಥವಾ ಮೆಸೇಜ್ ಮಾಡಿ ಎಂಬ ಸಂದೇಶ ಬರುತ್ತಿದೆ. ಅಪ್ಪಿ ತಪ್ಪಿ ಈ ಫೋನ್ ನಂಬರ್‌ಗೆ ಕರೆ ಮಾಡಿದರೆ ಮೆಸೇಜ್ ಮಾಡಿದರೆ ನಿಮ್ಮ ಕಷ್ಟಕಾಲ ಆರಂಭಗೊಳ್ಳಲಿದೆ. ಕರೆ ಮಾಡಿದ ತಕ್ಷಣ ನಿಮ್ಮ ಖಾತೆಯ ಬ್ಯಾಲೆನ್ಸ್ ಕಟ್ ಆಗುವ ಸೈಬರ್ ವಂಚನೆ ಇದಲ್ಲ. ಅದರೂ ಹಲವರು ಈ ವಂಚನೆಯಲ್ಲಿ ಬಿದ್ದು ಹಣ ಕಳೆದುಕೊಂಡಿದ್ದಾರೆ. ಹೊರಗಡೆ ಹೇಳಲು ಆಗದೆ ಹೈರಾಣಾಗಿದ್ದಾರೆ. ಈ ಸ್ಕ್ಯಾಮ್ ಇದೀಗ ಭಾರದದಲ್ಲಿ ಭಾರಿ ಸಕ್ರಿಯವಾಗಿದೆ.

Add Asianetnews Kannada as a Preferred SourcegooglePreferred

ಆಲ್ ಇಂಡಿಯಾ ಪ್ರಗ್ನೆಂಟ್ ಸ್ಕ್ಯಾಮ್

ನನ್ನ ಗಂಡನಿಂದ ಗರ್ಭಿಣಿಯಾಗಲು ಸಾಧ್ಯವಿಲ್ಲ. ಹಲವು ಪ್ರಯತ್ನ ಬಳಿಕ ಪರೀಕ್ಷೆಯಲ್ಲೂ ದೃಢಪಟ್ಟಿದೆ. ಹೀಗಾಗಿ ನಾನು ಗರ್ಭಿಣಿಯಾಗಬೇಕು. ನನಗೆ ಮಗು ಬೇಕು. ನೀವು ನನ್ನ ಪ್ರೆಗ್ಮೆಂಟ್ ಮಾಡಿ. ನಾನು ಗರ್ಭಿಣಿಯಾದರೆ ನಿಮಗೆ 13 ಲಕ್ಷ ರೂಪಾಯಿ ನಗದು ಹಾಗೂ 2 ಬೆಡ್ ರೂಂ ಮನೆ ನೀಡುತ್ತೇನೆ ಎಂಬ ಮೆಸೇಜ್ ನೋಡಿ ಹಲವರು ಮರುಳಾಗಿದ್ದಾರೆ. ಅಷ್ಟೇ ವೇಗದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ವಿಡಿಯೋ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಮೆಸೇಜ್ ಬಂದ ಬಳಿಕ ಫೋನ್ ಅಥವಾ ಮೆಸೇಜ್ ಮಾಡಿದರೆ ನಿಮ್ಮ ಜೊತೆ ಮಹಿಳೆ ಮಾತನಾಡುತ್ತಾಳೆ. ಬಳಿಕ ಫೋನ್ ಮೂಲಕವೇ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಿಜಿಸ್ಟ್ರೇಶನ್, ಜಿಎಸ್‌ಟಿ ಸೇರಿದಂತೆ ಇತರ ರಿಜಿಸ್ಟ್ರೇಶನ್‌ಗೆ ಹಣ ನೀಡಬೇಕು ಎಂಬ ಸೂಚನೆಯಂಂತೆ ನೀವು ಹಣ ಪಾವತಿಸಿದರೆ ಬಳಿಕ ಹಲವು ಕಾರಣ ಹೇಳಿ ಹಣ ವಸೂಲಿ ಮಾಡುತ್ತಾರೆ. ಇಲ್ಲಿ ನೀವು ಜಾಣರಾದರೆ ಸಮಸ್ಯೆಯಿಂದ ಹೊರಬಂದರೆ ಉತ್ತಮ. ಆದರೆ ನೀವು ಅತೀ ಜಾಣತನ ತೋರಿದರೆ ಮತ್ತೆ ಸಂಕಷ್ಟ ಹೆಚ್ಚು.

ವಿಡಿಯೋ ಬ್ಲಾಕ್ ಮೇಲ್

ನೀವು ಹಣ ಪಾವತಿಸಲು ನಿರಾಕರಿಸಿದರೆ, ಅಥವಾ ಬೇರೆ ಕಾರಣ ಹೇಳಿದರೆ ಮುಂದಿನ ಹಂತ ಮತ್ತಷ್ಟು ತಿರುವು ಪಡೆಯಲಿದೆ. ನಿಮ್ಮನ್ನು ಕೆಲ ಸ್ಥಳಗಳಿಗೆ ಬರಲು ಸೂಚಿಸಲಾಗುತ್ತದೆ. ನೀವು ನಿಗಿದಿತ ಸ್ಥಳಕ್ಕೆ ತೆರಳಿದರೆ ಕೋಣೆಯೊಳಗೆ ಮಹಿಳೆ ನಿಮ್ಮನ್ನು ಬರಮಾಡಿಕೊಳ್ಳುತ್ತಾಳೆ. ಬಳಿಕ ನಿಮ್ಮ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಲಾಗುತ್ತದೆ. ಈ ವೇಳೆ ಅವರು ಹೇಳಿದ ಹಣ ನೀವುಕೊಡಲೇಬೇಕಾಗುತ್ತದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ.

ಕೆಲ ತಿಂಗಳ ಹಿಂದೆ ಬಿಹಾರ ಪೊಲೀಸರು ಇದೇ ಪ್ರಕರಣದಡಿಯಲ್ಲಿ ಈ ದಂಧೆ ನಡೆಸುತ್ತಿದ್ದ ಹಲವರನ್ನು ಬಂಧಿಸಿದ್ದರು. 10 ಲಕ್ಷ ರೂಪಾಯಿ ವಂಚಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಆರೋಪಿಗಳ ಬಂಧಿಸಿದ್ದರು. ಈ ಜಾಲ ದೇಶದ ಹಲವೆಡೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಕುರಿತು ಪೊಲೀಸರು ಹಲವರು ಬಾರಿ ಎಚ್ಚರಿಕೆ ನೀಡಿದ್ದಾರೆ.