Asianet Suvarna News Asianet Suvarna News

ವಿಷಕಾರಿ ಕ್ಯಾನ್‌ಗಳನ್ನು ಸಿಡಿಸಿ ಹಾಥ್ರಸ್‌ನಲ್ಲಿ 121 ಜನರ ಹತ್ಯೆ?: ಬಾಬಾ ಪರ ವಕೀಲ ಹೇಳಿದ್ದೇನು?

ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಜು.2ರಂದು 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಜನಜಂಗುಳಿಯ ನಡುವೆ ಕೆಲವು ವ್ಯಕ್ತಿಗಳು ವಿಷಪೂರಿತ ಕ್ಯಾನ್‌ಗಳನ್ನು ತೆರೆದಿದ್ದೇ ಕಾರಣ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಪರ ವಕೀಲ ಎ.ಪಿ.ಸಿಂಗ್‌ ಹೊಸ ಆರೋಪ ಮಾಡಿದ್ದಾರೆ.

Hathras stampede Crowd was poisoned alleges Babas lawyer gvd
Author
First Published Jul 8, 2024, 6:05 AM IST

ನವದೆಹಲಿ (ಜು.08): ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಜು.2ರಂದು 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಜನಜಂಗುಳಿಯ ನಡುವೆ ಕೆಲವು ವ್ಯಕ್ತಿಗಳು ವಿಷಪೂರಿತ ಕ್ಯಾನ್‌ಗಳನ್ನು ತೆರೆದಿದ್ದೇ ಕಾರಣ ಎಂದು ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಪರ ವಕೀಲ ಎ.ಪಿ.ಸಿಂಗ್‌ ಹೊಸ ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋಲೆ ಬಾಬಾ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಸಹಿಸದವರಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ ಎಂದು ದೂರಿದರು. ವಿಷಪೂರಿತವಾದ ಕ್ಯಾನ್‌ಗಳನ್ನು ಹಿಡಿದು 15ರಿಂದ 16 ಜನರು ನಿಂತಿದ್ದರು. ಅವರು ಆ ಕ್ಯಾನ್‌ಗಳನ್ನು ತೆರೆದರು ಎಂದು ಸಾಕ್ಷಿಗಳು ನಮ್ಮನ್ನು ಸಂಪರ್ಕಿಸಿವೆ. ಮರಣೋತ್ತರ ವರದಿಗಳನ್ನೂ ಗಮನಿಸಲಾಗಿದೆ. 

ಹಾಥ್ರಸ್‌ ಕಾಲ್ತುಳಿತ, 6 ಜನರ ಬಂಧನ: ಸಂಘಟಕನ ಪತ್ತೆಗೆ 1 ಲಕ್ಷ ಬಹುಮಾನ

ಗಾಯಗಳಿಂದ ಸಾವು ಸಂಭವಿಸಿಲ್ಲ. ಬದಲಾಗಿ ಉಸಿರಾಟ ಸಮಸ್ಯೆಯಿಂದಲೇ ಜನರು ಸಾವಿಗೀಡಾಗಿದ್ದಾರೆ. ಈ ರೀತಿ ಕ್ಯಾನ್‌ಗಳನ್ನು ತೆರೆದವರು ಪರಾರಿಯಾಗಲು ವಾಹನಗಳನ್ನು ಕೂಡ ನಿಲ್ಲಿಸಲಾಗಿತ್ತು. ಇದಕ್ಕೆ ನಮ್ಮ ಬಳಿ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ನಮಗೆ ಮಾಹಿತಿ ನೀಡಿರುವ ಸಾಕ್ಷಿಗಳು ಬಹಿರಂಗವಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಿಲ್ಲ. ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಯೋಗಿಗೆ ರಾಹುಲ್ ಪತ್ರ: ಹಾಥ್ರಸ್‌ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ, ಅಲ್ಲದೇ ಘಟನೆಗೆ ಕಾರಣರಾದವರಿಗೆ ಸೂಕ್ತ ಸರಿಯಾದ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಈ ಹಿಂದೆ ಯೋಗಿ ಘಟನೆಯಲ್ಲಿ ಮಡಿದವರಿಗೆ 2 ಲಕ್ಷ ರು. ಮತ್ತು ಗಾಯಗೊಂಡವರಿಗೆ 50 ಸಾವಿರ ಘೋಷಿಸಿದ್ದರು. ಶುಕ್ರವಾರ ರಾಹುಲ್‌ ಹಾಥ್ರಸ್‌ ಸಂತ್ರಸ್ಥರನ್ನು ಭೇಟಿ ನೀಡಿದ್ದರು. ಕಳೆದ ಮಂಗಳವಾರ ದೇವಮಾನವ ಬಾಬಾ ಭೋಲೆ ಸತ್ಸಂಗದಲ್ಲಿ ಕಾಲ್ತುಳಿತ ಸಂಭವಿಸಿ 121 ಜನರು ಮೃತ ಪಟ್ಟಿದ್ದರು.

ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಪ್ರಲ್ಹಾದ್ ಜೋಶಿ

ಕಾರಣಕರ್ತರ ಸುಮ್ಮನೇ ಬಿಡಬೇಡಿ: ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಸತ್ಸಂಗದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ ಬಳಿಕ ನಾಪತ್ತೆಯಾಗಿರುವ ಸ್ವಯಂಘೋಷಿತ ದೇವಮಾನವ ಭೋಲೇ ಬಾಬಾ ಇದೀಗ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ‘ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನಮಗೆ ನೀಡಲಿ. ಸರ್ಕಾರ ಮತ್ತು ಆಡಳಿತದಲ್ಲಿ ವಿಶ್ವಾಸ ಇಡಿ. ಈ ದುರ್ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ನನ್ನ ವಕೀಲ ಎ.ಪಿ.ಸಿಂಗ್‌ ಮೂಲಕ, ನೊಂದವರ ಸಂಕಷ್ಟಕ್ಕೆ ನೆರವಾಗಿ ಎಂದು ಈಗಾಗಲೇ ನನ್ನ ಆಪ್ತರಿಗೆ ಸೂಚಿಸಿದ್ದೇನೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios