ಪುಣೆ (ಡಿ. 20): 2017 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕ ಕಾರ್ಯಕ್ರಮ ದ ಬಳಿಕ ನಡೆದ ಹಿಂಸೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲಾ 19 ಜನರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ, ಸರ್ಕಾರ ಉರುಳಿಸಲು ಯತ್ನಿಸಿದ ಮತ್ತು ದೇಶದ ವಿರುದ್ಧ ಸಮರ ಸಾರಿದ ಗಂಭೀರ ಆರೋಪ ಹೊರಿಸಲಾಗಿದೆ.

ಹಿಂದು ನಾಯಕರ ಹತ್ಯೆಗೆ ತಮಿಳುನಾಡಿಗೆ 4 ಉಗ್ರರ ಪ್ರವೇಶ: ಭಾರೀ ಕಟ್ಟೆಚ್ಚರ

ಬುಧವಾರ ಪೊಲೀ ಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಈ ಅಂಶಗಳಿವೆ. ಭೀಮಾ ಕೋರೆ ಗಾಂವ್ ಹಿಂಸಾಚಾರದ ಬಳಿಕ ಹಲವು ಸಾಮಾಜಿಕ ಹೋರಾಟಗಾರರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಹಿಂಸಾಚಾರದಲ್ಲಿ ನಕ್ಸಲರ ಕೈವಾಡದ ಜೊತೆಗೆ, ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಾದರಿಯಲ್ಲೇ ಹತ್ಯೆ ಮಾಡಲು ಸಂಚು ರೂಪಿಸಿದ, ಕೇಂದ್ರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಕುರಿತು ದಾಖಲೆಗಳು ಲಭ್ಯವಾಗಿದ್ದವು.