Bhagavad Gita ಗುಜರಾತ್ ಶಾಲೆಗಳಲ್ಲಿ ಇನ್ನು ಭಗವದ್ಗೀತೆ ಅಧ್ಯಯನ!
ಗುಜರಾತ್ ಶಾಲೆಗಳಲ್ಲಿ ಇನ್ನು ಭಗದ್ಗೀತೆ ಅಧ್ಯಯನ
6-12 ತರಗತಿ ಮಕ್ಕಳಿಗೆ ಶ್ಲೋಕಗಳ ಪಠಣ
ಗುಜರಾತ್ ಶಿಕ್ಷಣ ಸಚಿವ ಜಿತು ವಾಘನಿ ಘೋಷಣೆ
ಅಹಮದಾಬಾದ್(ಮಾ. 17): ಸಕಲ ಹಿಂದುಗಳ ಧರ್ಮಗ್ರಂಥ ಎಂದೇ ಹೇಳಲಾಗುವ ಭಗವದ್ಗೀತೆಯನ್ನು (Shrimad Bhagavad Gita) ಗುಜರಾತ್ ನ (Gujarat ) ಶಾಲೆಗಳಲ್ಲಿ ಪಠ್ಯಕ್ರಮವಾಗಿ ಸೇರಿಸಲಾಗುವುದು ಎಂದು ಗುಜರಾತ್ ನ ಶಿಕ್ಷಣ ಸಚಿವ ಜಿತು ವಾಘನಿ (Gujarat Education Minister Jitu Vaghani) ಗುರುವಾರ ಘೋಷಣೆ ಮಾಡಿದ್ದಾರೆ.
ಗುಜರಾತ್ ಶಾಲೆಯ 6 ರಿಂದ 12ನೇ ತರಗತಿಯ ಮಕ್ಕಳು ಪಠ್ಯಕ್ರಮದ ಭಾಗವಾಗಿ ಶ್ರೀಮದ್ ಭಗವದ್ಗೀತೆಯ ಸಾರವನ್ನು ಕಲಿಯಲಿದ್ದಾರೆ ಎಂದು ಗುಜರಾತ್ ಸರ್ಕಾರ ಗುರುವಾರ ಬಿಡುಗಡೆ ಮಾಡಿದ ಹೊಸ ಶಿಕ್ಷಣ ನೀತಿಯಲ್ಲಿ (New Education Policy) ತಿಳಿಸಲಾಗಿದೆ. ಭಗವದ್ಗೀತೆಯ ತತ್ವಗಳು ಹಾಗೂ ಮೌಲ್ಯಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯ ಮಕ್ಕಳಿಗೆ ಕಲಿಸಲಾಗುತ್ತದೆ.
ಶಾಲಾ ಮಕ್ಕಳಿಗೆ ಗೀತಾ ಜ್ಞಾನ ಮತ್ತು ಅದರ ಮೌಲ್ಯಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಗೀತಾ ಕುರಿತು ಭಾಷಣ ಸ್ಪರ್ಧೆ, ಶ್ಲೋಕ ಗಾನ, ಸಾಹಿತ್ಯ ಸ್ಪರ್ಧೆಯನ್ನೂ ಸಹ ಆಯೋಜಿಸಲಾಗುವುದು ಎಂದು ಸರ್ಕಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹೊತ್ತಿನಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದಾಗಿ ಗುಜರಾತ್ ಸರ್ಕಾರ ಘೋಷಿಸಿದೆ.
ಗುಜರಾತ್ ವಿಧಾನಸಭೆ ಚುನಾವಣೆ (Gujrat Election) ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡಡೆಯುವ ಸಾಧ್ಯತೆಗಳಿವೆ. ಆ ನಿಟ್ಟಿನಲ್ಲಿ ಸರ್ಕಾರದ ಈ ಘೋಷಣೆ ಮಹತ್ವ ಪಡೆದುಕೊಂಡಿದೆ. ಹಾಲಿ ಸರ್ಕಾರದ ಅವಧಿ 2023ರ ಫೆಬ್ರವರಿ 18ಕ್ಕೆ ಕೊನೆಗೊಳ್ಳಲಿದೆ. ಪ್ರಸ್ತುತ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಸರ್ಕಾರವಿದೆ. 182 ಕ್ಷೇತ್ರಗಳ ವಿಧಾನಸಭೆ ಇದಾಗದ್ದು, ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದಲ್ಲಿ ಬಹುಮತದ ಮಾರ್ಕ್ ಆಗಿರುವ 92 ಕ್ಷೇತ್ರಗಳನ್ನು ಗೆಲ್ಲಬೇಕಿದೆ.
ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಕ್ರಮ: ಡಿಸಿಎಂ ಅಶ್ವತ್ಥ ನಾರಾಯಣ
ಕಳೆದ ವರ್ಷದ ಡಿಸೆಂಬರ್ ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, "ಶಾಲೆ ಮತ್ತು ಕಾಲೇಜು ಪಠ್ಯಕ್ರಮದಿಂದ ತಾಂತ್ರಿಕ ಶಿಕ್ಷಣದವರೆಗೆ, ಭಗವದ್ಗೀತೆಯನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ಪಠ್ಯಕ್ರಮಗಳಲ್ಲಿ ಸೇರಿಸಿಕೊಳ್ಳಬಹುದು" ಎಂದು ಹೇಳಿದ್ದರು. "ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ & ಟ್ರೈನಿಂಗ್ (NCERT) ತನ್ನ 11 ಮತ್ತು 12 ನೇ ತರಗತಿಯ ಸಂಸ್ಕೃತ ಪಠ್ಯಪುಸ್ತಕಗಳಲ್ಲಿ 'ಶ್ರೀಮದ್ ಭಗವತ್ ಗೀತೆ' ಗೆ ಸಂಬಂಧಿಸಿದ ವಿಷಯಗಳನ್ನು ಈಗಾಗಲೇ ಸೇರಿಸಲಾಗಿದೆ" ಎಂದು ತಿಳಿಸಿದ್ದರು. "ಎನ್ ಸಿಇಆರ್ ಟಿಯ ಇತಿಹಾಸ ಪಠ್ಯಪುಸ್ತಕ, ಸಮಾಜ ವಿಜ್ಞಾನದ ಅಡಿಯಲ್ಲಿ, 6 ನೇ ತರಗತಿಗೆ ಪುಸ್ತಕಗಳಲ್ಲಿ 'ನಮ್ಮ ಭೂತಕಾಲ-I', ಭಕ್ತಿ ಆಂದೋಲನಕ್ಕೆ ಸಂಬಂಧಿಸಿದಂತೆ 'ವ್ಯಾಪಾರಿಗಳು, ರಾಜರು ಮತ್ತು ಯಾತ್ರಿಕರು' ಎಂಬ ವಿಷಯದ ಅಡಿಯಲ್ಲಿ ಶ್ರೀಮದ್ ಭಗವದ್ಗೀತೆಯ ಉಲ್ಲೇಖವನ್ನು ಮಾಡಿದೆ' ಎಂದು ತಿಳಿಸಿದ್ದರು.
Hijab row : ಸಂವಿಧಾನ ಹೇಳಿದಂತೆ ನಡೆಯುತ್ತೇವೆ, ನಮಗೆ ಸಂವಿಧಾನವೇ ಭಗವದ್ಗೀತೆ ಎಂದ ಹೈಕೋರ್ಟ್!
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗಳು ತಮ್ಮ ಶಾಲೆಗಳಲ್ಲಿ ಭಗವದ್ಗೀತೆಯನ್ನು ಸೇರಿಸಲು ಸಿದ್ಧವಾಗಿವೆ. ಭಾರತದ "ನೈಜ ಇತಿಹಾಸ"ವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ದಕ್ಷಿಣ ದೆಹಲಿ ಮೇಯರ್ ಮುಖೇಶ್ ಸೂರ್ಯನ್ ಹೇಳಿದ್ದರು. "ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರವು ನಗರದಲ್ಲಿ ಇಂಗ್ಲಿಷ್ ವೈನ್ ಮತ್ತು ಮದ್ಯ ಮಾರಾಟದಲ್ಲಿ ನಿರತವಾಗಿರುವಾಗ, ನಾವು ಪ್ರತಿ ವಾರ್ಡ್‌ನಲ್ಲಿ ಒಂದು ಇಂಗ್ಲಿಷ್-ಮಾಧ್ಯಮ ಶಾಲೆಯನ್ನು ತೆರೆಯುತ್ತಿದ್ದೇವೆ. ನಾವು ಪ್ರಾಥಮಿಕ ಶಾಲೆಗಳಲ್ಲಿ ಗೀತೆಯನ್ನು ಸಹ ಕಲಿಸುತ್ತೇವೆ. ನಮ್ಮ ಮಾದರಿ ಶಾಲೆಗಳಿಗೆ ಒಬ್ಬರು ಭೇಟಿ ನೀಡಬೇಕು." ಅವರು ಹೇಳಿದ್ದರು.
ಇನ್ನೊಂದೆಡೆ ಕರ್ನಾಟಕದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪಠ್ಯಕ್ರಮಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.