Hijab row : ಸಂವಿಧಾನ ಹೇಳಿದಂತೆ ನಡೆಯುತ್ತೇವೆ, ನಮಗೆ ಸಂವಿಧಾನವೇ ಭಗವದ್ಗೀತೆ ಎಂದ ಹೈಕೋರ್ಟ್!

* ಹಿಜಾಬ್ ವಿವಾದದ ಕುರಿತಾಗಿ ಹೈಕೋರ್ಟ್ ನಲ್ಲಿ ವಿಚಾರಣೆ
* ಸಂವಿಧಾನವೇ ನಮಗೆ ಭಗವದ್ಗೀತೆ ಎಂದು ಕರ್ನಾಟಕ ಹೈಕೋರ್ಟ್
* ಸಮವಸ್ತ್ರವನ್ನು ನಿರ್ಣಯ ಮಾಡುವ ಬಗ್ಗೆ ಕಾಲೇಜುಗಳಿಗೆ ಸ್ವಾತಂತ್ರ್ಯವಿದೆ

Karnataka High Court on Hijab Row say We will go by what Constitution says Constitution is Bhagavad Gita for me san

ಬೆಂಗಳೂರು (ಫೆ. 8): ಉಡುಪಿಯ (Udupi) ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್ (Hijab) ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದ ಕುರಿತಾಗಿ ಉಂಟಾಗಿರುವ ವಿವಾದದ ಕುರಿತಾಗಿ ಮಂಗಳವಾರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (High Court), ಭಾವೋದ್ರೇಕ ಅಥವಾ ಭಾವನಾತ್ಮಕವಾಗಿ ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಕಾನೂನಿನ ರೀತಿಯಲ್ಲಿಯೇ ಹೋಗುತ್ತೇವೆ ಎಂದು ಹೇಳಿದೆ. ಸಂವಿಧಾನವು ನಮಗೆ ಏನು ಹೇಳುತ್ತದೆಯೋ ಅದರಂತೆಯೇ ನಾವು ಹೋಗುತ್ತೇವೆ. ಸಂವಿಧಾನವೇ ನನಗೆ ಭಗವದ್ಗೀತೆ (Constitution is Bhagavad Gita) ಎಂದು ಹೈಕೋರ್ಟ್ ಹೇಳಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿಕೆ ಮಾಡಿದೆ.

ಸಮವಸ್ತ್ರವನ್ನು ನಿರ್ಧರಿಸಲು ಕಾಲೇಜುಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ಅಡ್ವೊಕೇಟ್ ಜನರಲ್ (Advocate General) ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು. ಹಾಗೇನಾದರೂ ಹಿಜಾಬ್ ಧರಿಸಲೇಬೇಕು ಎಂದು ಬಯಸುವ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.  ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ‘ನಮ್ಮ ಜಾತ್ಯತೀತತೆ ಗೌರವದ ಮೇಲೆ ನಿಂತಿದೆ... ರಾಜ್ಯವು ಎಲ್ಲಾ ಧರ್ಮವನ್ನು ಗೌರವಿಸುತ್ತದೆ. "ಭಾರತದಲ್ಲಿ ಜಾತ್ಯತೀತತೆ ವಿಭಿನ್ನವಾಗಿದೆ, ನಾವು ಸಕಾರಾತ್ಮಕ ಜಾತ್ಯತೀತತೆಯನ್ನು ಅಭ್ಯಾಸ ಮಾಡುತ್ತೇವೆ" ಎಂದು ಅವರು ಹೇಳಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ್ ಕಾಮತ್ (Senior Advocate Devdutt Kamat), ಮುಸ್ಲಿಮ್ ಸಂಪ್ರದಾಯದ ಪ್ರಮುಖ ಭಾಗವೆಂದರೆ ಸ್ಕಾರ್ಫ್ ಧರಿಸುವುದಾಗಿದೆ ಎಂದು ಹೇಳಿದರು. ಕೆಲವು ದೇಶಗಳಿ ಋಣಾತ್ಮಕ ಜಾತ್ಯಾತೀತತೆಯನ್ನು ಅಭ್ಯಸಿಸುತ್ತಾರೆ. ಅವರಲ್ಲಿ ಧಾರ್ಮಿಕ ಐಡೆಂಟಿಟಿಯನ್ನು ಸಾರ್ವಜನಿಕವಾಗಿ ತೋರಿಸುವ ಹಾಗಿಲ್ಲ. ಆದರೆ, ಭಾರತ ಈ ರೀತಿಯ ದೇಶವಲ್ಲ. ನಮಲ್ಲಿಲ್ಲ ಜಾತ್ಯಾತೀತತೆ ಭಿನ್ನ ಎಂದರು.
ಇನ್ನು ಸಿಖ್ ಟರ್ಬನ್ ವಿಚಾರದ ಬಗ್ಗೆಯೂ ಹೇಳಿದ ಹೈಕೋರ್ಟ್, ಸಿಖ್ಖರ ವಿಚಾರದಲ್ಲಿ, ಇದು ಭಾರತೀಯ ಮಾತ್ರವಲ್ಲದೆ ಕೆನಡಾದ ಮತ್ತು ಯುಕೆ ನ್ಯಾಯಾಲಯಗಳಿಂದ ಟರ್ಬನ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯನ್ನು (ERP) ಎನ್ನುವುದಾಗಿ ಹೇಳಲಾಗಿದೆ' ಎಂದರು.


ಪ್ರತಿಭಟನೆಗೆ ಇಳಿಯಬೇಡಿ ಎಂದ ಕೋರ್ಟ್: ಪ್ರತಿಭಟನೆ ಮಾಡುವುದು, ಬೀದಿಗಿಳಿಯುವುದು, ಘೋಷಣೆ ಕೂಗುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವುದು, ವಿದ್ಯಾರ್ಥಿಗಳು ಇತರರ ಮೇಲೆ ಹಲ್ಲೆ ನಡೆಸುವುದು ಒಳ್ಳೆಯದಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಟಿವಿಯಲ್ಲಿ ಬೆಂಕಿ, ರಕ್ತ ಕಂಡರೆ ನ್ಯಾಯಧೀಶರುಗಳೇ ಗಲಿಬಿಲಿಗೊಳ್ಳುತ್ತಾರೆ. ಮನಸ್ಸಿಗೆ ತೊಂದರೆ ಆದಲ್ಲಿ ಬುದ್ಧಿ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.

Hijab controversy : ದೆಹಲಿಯಿಂದಲೇ ಶಾಲಾ ಕಾಲೇಜಿಗೆ 3  ದಿನ ರಜೆ ಘೋಷಿಸಿದ ಸಿಎಂ
ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ. ಸಾರ್ವಜನಿಕರ ಒಳ್ಳೆಯ ಗುಣದಲ್ಲಿ ತನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅದನ್ನೇ ಅಭ್ಯಾಸ ಮಾಡಬೇಕೆಂದು ಆಶಿಸುತ್ತೇವೆ ಎಂದು ಕೋರ್ಟ್ ಹೇಳಿದೆ.

Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್‌ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
ವಸ್ತ್ರಸಂಹಿತೆಗೆ ನಮ್ಮ ವಿರೋಧ ಇಲ್ಲ ಎಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ: ಹೈಕೋರ್ಟ್ ನಲ್ಲಿ ಮೊದಲ ದಿನದ ವಿಚಾರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಸ್ತ್ರ ಸಂಹಿತೆ ನಮ್ಮ ವಿರೋಧವಿಲ್ಲ ಎಂದು ಹೇಳಿದೆ. "ನಮಗೆ ಪಾಸಿಟಿವ್ ರೆಸ್ಪಾನ್ಸ್ ಬರಬಹುದು ಅಂತ ಇದೆ. ಅದಕ್ಕೆ ತದ್ವಿರುದ್ಧವಾಗಿದ್ದರೆ, ಏನು ಕಾನೂನು ಹೋರಾಟ ನಡೆಸಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ನೆಗೆಟಿವ್ ಅಥವಾ ನ್ಯೂಟ್ರಲ್‌ ಆಗಿ ಬಂದರೆ ಏನು ಮಾಡಬೇಕು ಅಂತ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದೆ.

ಶಾಂತಿ, ಸೌಹಾರ್ದತೆ ಕಾಪಾಡಿ: ವಿದ್ಯಾರ್ಥಿಗಳು ಪಟ್ಟು ಹಿಡಿದಿರೋದ್ರಿಂದ ಈ ರೀತಿಯ ಪ್ರತಿಭಟನೆಗಳು ನಡೆಯುತ್ತಿದೆ. ಶಾಂತಿ ಸೌಹಾರ್ದತೆಯನ್ನ ಕಾಪಾಡಿ, ಕಾನೂನನ್ನ ಕೈಗೆತ್ತಿಕೊಳ್ಳಬೇಡಿ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ಮನವಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಯಾವ ತೀರ್ಪು ನೀಡಲಿದೆಯೋ ಅದಕ್ಕೆ ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios