ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಕ್ರಮ: ಡಿಸಿಎಂ ಅಶ್ವತ್ಥ ನಾರಾಯಣ

ಪ್ರಮುಖ ದೇಗು​ಲ​ಗ​ಳಿಗೆ ಸ್ವಾಯತ್ತೆ ನೀಡಲು ಚಿಂತ​ನೆ-ಅಶ್ವತ್ಥ ನಾರಾ​ಯ​ಣ| ಯಡ​ತೊರೆ ಮಠದ ಉತ್ತ​ರಾ​ಧಿ​ಕಾರಿ ಶಿಷ್ಯ ​ಸ್ವೀ​ಕಾರ ಮಹೋ​ತ್ಸ​ವ| ರಾಜ್ಯದ ಪ್ರಮುಖ ದೇವಾಲಯಗಳಿಗೂ ಸ್ವಾಯತ್ತತೆ ನೀಡುವ ಸಂಬಂಧ ಕಾನೂನು ಸುಧಾರಣೆ ಮಾಡಲು ಚಿಂತನೆ| 
 

Inclusion of Bhagavad Gita in the Text Says DCM Ashwath Narayan grg

ಭೇರ್ಯ(ಫೆ.18): ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯದ ಪಠ್ಯಕ್ರಮಗಳಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಕೆ.ಆರ್‌. ನಗರ ತಾಲೂಕಿನ ಶ್ರೀ ಜಪ್ಯೇಶ್ವರ (ಜಪದಕಟ್ಟೆ) ಕ್ಷೇತ್ರದಲ್ಲಿ ಕೃಷ್ಣರಾಜನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಿಂದ ನಡೆದ ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

PES ವಿವಿ ವಿದ್ಯಾರ್ಥಿಗಳ ಸಂಶೋಧನೆ: ಫೆ. 28ಕ್ಕೆ ಉಪಗ್ರಹ ಉಡಾವಣೆ

ಭಗವದ್ಗೀತೆ ಸೇರಿ ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ಅಂಶಗಳು ಸೇರಿ ಮುಖ್ಯಗುರಿಯಾದ ಮೌಲ್ಯಾಧಾರಿತ ಶಿಕ್ಷಣ ಜಾರಿಗೆ ಅಳವಡಿಕೆ ಮಾಡಲಾಗುವುದು ಎಂದು ಪ್ರಕಟಿಸಿದರು. ‘ರಾಜ್ಯದ ಪ್ರಮುಖ ದೇವಾಲಯಗಳಿಗೂ ಸ್ವಾಯತ್ತತೆ ನೀಡುವ ಸಂಬಂಧ ಕಾನೂನು ಸುಧಾರಣೆ ಮಾಡಲು ಚಿಂತನೆ ನಡೆಸಲಾಗುವುದು. ಎಲ್ಲ ಕಾಲಘಟ್ಟದಲ್ಲೂ ಸ್ವಾಯತ್ತೆ ನೀಡುವುದು ಸೂಕ್ತ. ಯಾವ್ಯಾವ ಉದ್ದೇಶಗಳಿಗೆ ಸ್ಥಾಪನೆಯಾಗಿವೆ ಎಂಬ ಆಧಾರದಲ್ಲಿ ದೇವಾಲಯಗಳು, ಮಠಗಳಲ್ಲದೆ ಎಲ್ಲ ಕ್ಷೇತ್ರಗಳಿಗೂ ಸ್ವಾಯತ್ತತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಜವಾಬ್ದಾರಿ’ ಎಂದರು.

ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಪೀಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿ​ಧ್ಯ​ವ​ಹಿ​ಸಿದ್ದ​ರು. ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಎಡತೊರೆ ಶ್ರೀ ಯೋಗಾನಂದೇಶ್ವರ ಮಠದ ಪೀಠಾಧೀಶ ಶಂಕರ ಭಾರತಿ ಸ್ವಾಮೀ​ಜಿ, ವಿವಿಧ ಮಠಾಧೀಶರು ಭಾಗವಹಿಸಿದ್ದರು.
 

Latest Videos
Follow Us:
Download App:
  • android
  • ios