ಇಡೀ ಕುಟುಂಬವೇ ಗೃಹಸ್ಥಾಶ್ರಮ ತೊರೆದು, ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿತ್ತು. ಆದರೆ ಈಗ ಸಾಧ್ವಿ ಪ್ರೇಮ್‌ ಬಾಯಿ ತಂದೆ ಜೊತೆಗೆ ಅನುಚಿತವಾಗಿ ನಡೆದುಕೊಂಡ ವಿಡಿಯೋ ವೈರಲ್‌ ಆಗ್ತಿದೆ. 

ಊರು ತುಂಬೆಲ್ಲ ಆಧ್ಯಾತ್ಮಿಕ ಗುರುವಾಗಿ ಕಥೆ ಹೇಳುತ್ತಿದ್ದ ಸಾಧ್ವಿ ಪ್ರೇಮ್‌ ಬಾಯಿ ಈಗ ತಂದೆಯ ಜೊತೆಗೆ ಬೆಡ್‌ರೂಮ್‌ನಲ್ಲಿ ಚೆಲ್ಲಾಟ ಆಡಿರೋ ವಿಡಿಯೋ ವೈರಲ್‌ ಆಗ್ತಿದೆ.

ಪಶ್ಚಿಮ ರಾಜಸ್ಥಾನದ ಭಾಗವತ ಕಥಾ ವಾಚಕಿ ಸಾಧ್ವಿ ಪ್ರೇಮ್ ಬಾಯಿ ಮತ್ತು ಪ್ರೇಮ್ ಬಾಯ್ಸಾಳ ಅವರ ಖಾಸಗಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರೇಮ್‌ ಬಾಯಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಿಜಕ್ಕೂ ಏನಾಗಿತ್ತು?

ಪ್ರಾಥಮಿಕ ಮಾಹಿತಿ & ಹಕ್ಕುಗಳ ಪ್ರಕಾರ, ಈ ವೀಡಿಯೊ 2021ರ ಸಮಯದ್ದು ಎಂದು ಹೇಳಲಾಗಿದೆ. ಈ ವಿಡಿಯೊದಲ್ಲಿ ಪ್ರೇಮ್ ಬಾಯಿ ಹಾಸಿಗೆಯ ಮೇಲೆ ಮಲಗಿದ್ದಾರೆ. ಅವರ ಸಮೀಪ ಒಬ್ಬ ಮಹಿಳೆ ನಡೆಯುತ್ತಿದ್ದಾರೆ.

ನಂತರ ಕೇಸರಿ ಬಟ್ಟೆ ಧರಿಸಿದ ಒಬ್ಬ ವ್ಯಕ್ತಿ ಬಂದು ಪ್ರೇಮ್ ಬಾಯಿಯ ಮುಖದ ಮೇಲೆ ಕೈ ಇಡುತ್ತಾರೆ. ಆ ನಂತರ ಪ್ರೇಮ್ ಆ ವ್ಯಕ್ತಿಯನ್ನು ಅಪ್ಪಿಕೊಳ್ತಾರೆ. ಬಹಳ ಅನುಚಿತವಾದ ವಿಡಿಯೋ ಇದಾಗಿದೆ.

ಆಶ್ರಮ ರೂಪದಲ್ಲಿರೋ ಮನೆ!

ಪ್ರೇಮ್ ಬಾಯಿ ಓರ್ವ ಕಥಾ ವಾಚಕಿ, ಅವರ ತಂದೆ ವಿರಮ್‌ನಾಥ್. ಪ್ರೇಮ್ ಬಾಯಿಯ ತಾಯಿ ಅಮೃ ಬಾಯಿ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ.

ಇವರು ಮೂಲತಃ ಬಾರ್ಮರ್‌ನ ಪರೇವ್ ಗ್ರಾಮದ ಜಾಟ್ ಜಾತಿಯ ನಿವಾಸಿಗಳು. ಅಲ್ಲಿ ಇವರ ಮನೆಯು ಆಶ್ರಮ ರೂಪದಲ್ಲಿದೆ. ಆ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರ ತಂದೆ ವಿರಮ್‌ನಾಥ್.

ಸನ್ಯಾಸಿಗಳಾಗಿರೋ ಇಡೀ ಕುಟುಂಬ!

ಸುಮಾರು 20 ವರ್ಷಗಳ ಹಿಂದೆ ಈ ಇಡೀ ಕುಟುಂಬವು ಗೃಹಸ್ಥ ಜೀವನವನ್ನು ತ್ಯಜಿಸಿ ಸನ್ಯಾಸಿಗಳಾಗಿ‌ ದೀಕ್ಷೆ ಪಡೆದಿತ್ತು. ಅಷ್ಟೇ ಅಲ್ಲದೆ ತಮ್ಮ ಮನೆ, ಕುಟುಂಬವನ್ನು ತೊರೆದಿತ್ತು. ಆಮೇಲೆ ಈ ಕುಟುಂಬವು ಜಸ್ತಿ ಗ್ರಾಮದಲ್ಲಿ ವಾಸ ಮಾಡಲು ಆರಂಭಿಸಿತು. ಅಲ್ಲಿ ಪ್ರೇಮ್ ಬಾಯಿಯ ತಾಯಿ ಅಮೃ ಬಾಯಿ ತೀರಿಕೊಂಡಿದ್ದು, ಅವರ ಸಮಾಧಿ (ಗೋರಿ) ನಿರ್ಮಾಣ ಮಾಡಲಾಗಿದೆ.

ಪ್ರೇಮ್‌ ಬಾಯಿ ಹೇಳಿದ್ದೇನು?

ಈ ಬಗ್ಗೆ ಪ್ರೇಮ್‌ ಬಾಯಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದು, “ನನ್ನ ವಿಡಿಯೋ ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಯಾವಾಗ ಮಗಳು ಬೇಸರದಲ್ಲಿದ್ದಾಳೋ, ದುಃಖದಲ್ಲಿದ್ದಾಳೋ ಆಗಲೇ ತಂದೆ ಅವಳನ್ನು ಎಲ್ಲರ ಮುಂದೆ ಅಪ್ಪಿಕೊಂಡು ಸಮಾಧಾನಪಡಿಸುತ್ತಾರೆ. ನನ್ನ ವಿಡಿಯೋ ಎಡಿಟ್‌ ಮಾಡಿದ್ದರ ಬಗ್ಗೆ ನಾವು ಪೊಲೀಸ್‌ ದೂರು ನೀಡಿದ್ದೆವು. ಆಗ ಪೊಲೀಸರು ಅವರನ್ನು ಹುಡುಕಿ, ಬಂಧಿಸಿ, ಕೋರ್ಟ್‌ಗೆ ಒಪ್ಪಿಸಿದ್ದೆವು. ಆದರೆ ಅವರ ಮನೆಯವರು ಮುಂದೆ ಬಂದು ಕ್ಷಮೆ ಕೇಳಿದ್ದಕ್ಕೆ ಸುಮ್ಮನಾದೆವು. ನನ್ನ ತಂದೆಯೇ ನನಗೆ ಪಾಲನೆ ಮಾಡಿ ಶಿಕ್ಷಣ ಕೊಡಿಸಿದರು” ಎಂದಿದ್ದಾರೆ.

View post on Instagram

View post on Instagram