ಹುಬ್ಬಳ್ಳಿಯ ಭೈರಿದೇವರಕೊಪ್ಪದ 'ಭಗವದ್ಗೀತಾ ಜ್ಞಾನಲೋಕ' ಸಿಎಂ ಬೊಮ್ಮಾಯಿ ಉದ್ಘಾಟನೆ

ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ಕಾರ್ಯಕ್ರಮ ಆಯೋಜಿಸಿಲಾಗಿದ್ದು ಭಾರತದಲ್ಲಿ ಪ್ರಪ್ರಥಮವಾಗಿ ಭಗವದ್ಗೀತೆ ಜ್ಞಾನಲೋಕವೆಂಬ ಅದ್ಭುತ ವಿಸ್ಮಯದ ಅನಾವರಣವಾಗಿದೆ

Mega museum Bhagavad Gita Jnanaloka inaugurated in Hubballi by CM Basavaraj Bommai mnj

ಹುಬ್ಬಳ್ಳಿ (ಮೇ 15):  ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ನಿರ್ಮಾಣವಾಗಿರುವ "ಭಗವದ್ಗೀತಾ ಜ್ಞಾನಲೋಕ" ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಿಂದ ಕಾರ್ಯಕ್ರಮ ಆಯೋಜಿಸಿಲಾಗಿದ್ದು ಭಾರತದಲ್ಲಿ ಪ್ರಪ್ರಥಮವಾಗಿ ಭಗವದ್ಗೀತೆ ಜ್ಞಾನಲೋಕವೆಂಬ ಅದ್ಭುತ ವಿಸ್ಮಯದ ಅನಾವರಣವಾಗಿದೆ. ಕಲುಷಿತ ಮನಸ್ಸುಗಳಿಗೆ ಭಗವದ್ಗೀತೆ ಅಮೃತಸಿಂಚನದ ಧ್ಯೇಯದೊಂದಿಗೆ ಜ್ಞಾನಲೋಕ ಲೋಕಾರ್ಪಣೆಯಾಗಿದೆ. 

ಜ್ಞಾನಲೋಕಕ್ಕೆ ಚಾಲನೆ ನೀಡಿದ ಬೊಮ್ಮಾಯಿ ಶುಭಕೋರಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಹಾಲಪ್ಪ ಆಚಾರ್, ಶಂಕರಪಾಟೀಲ ಮುನೇನಕೊಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಉಪಸ್ಥಿತಿದ್ದರು. ಈ ವೇಳೆ ಮಾತನಾಡಿದ ಬೊಮ್ಮಾಯಿ " ಭಗವದ್ಗೀತೆಯ ಪುಟ ತೆರೆದರೆ ಸಮಸ್ಯೆಗೆ ಉತ್ತರ ಸಿಗುತ್ತದೆ. ಮೌಲ್ಯಗಳನ್ನು ಅರಿತು ನಡೆಯಲು ಭಗವದ್ಗೀತೆ ಹೇಳಿಕೊಡುತ್ತದೆ. ಭಗವದ್ಗೀತೆ ಜಗತ್ತಿನ ಎಲ್ಲ ಧರ್ಮಗ್ರಂಥಗಳಿಗಿಂತ ಶ್ರೇಷ್ಠವಾದದು" ಎಂದರು.

ಇದನ್ನೂ ಓದಿ: ಭಗವದ್ಗೀತೆಯ ಜೀವನಸಾರ, ಹೀಗೆ ಮಾಡಿದರೆ ಮೋಕ್ಷ ಎನ್ನುತ್ತಾನೆ ಕೃಷ್ಣ

ಕೃಷ್ಣ ಪರಮಾತ್ಮನಲ್ಲಿ ನಂಬಿಕೆ ಇಟ್ಟವರಿಗೆ ಪರಿವರ್ತನೆ ಅನ್ನೋದು ಸಿಗುತ್ತೆ‌ ಎಂದ ಬೊಮ್ಮಾಯಿ "ಬುದ್ಧ, ಮಹಾವೀರ, ಕನಕದಾಸರು ಇದೇ ಭೂಮಿಯಲ್ಲಿ ಪರಿವರ್ತನೆ ಆದವರು. ಹುಬ್ಬಳ್ಳಿಗೆ ಬಂದು ಬಯಸಿದ ಜನರು ಭಗವದ್ಗೀತೆ ಜ್ಞಾನ ಪಡೆಯಲಿ. ನಿಮ್ಮ‌ ನಿಮ್ಮ ಕಾಯಕ ಮಾಡಿ, ಫಲ ಪರಮಾತ್ಮನಿಗೆ ಬಿಡಿ. ಭಾರತ ಭೂಮಿ ಸರ್ವಶ್ರೇಷ್ಠ ದೇಶ ಆಗಬೇಕು. ಇದನ್ನೇ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಕಲಿಯುಗದಲ್ಲಿ ಸತ್ಯ ಅಸತ್ಯತೆಯತ್ತ ಸಾಗುತ್ತಿದೆ. ನಾವು ಸಂತೋಷವಾಗಿದ್ದು, ಬೇರೆಯವರನ್ನ ಸಂತೋಷಗೊಳಿಸೋಣ" ಎಂದು ಹೇಳಿದರು. 

 

 

Latest Videos
Follow Us:
Download App:
  • android
  • ios