ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ, ಸಿಬ್ಬಂದಿಗಳಿಗೆ ಶಾಕ್ ನೀಡಿದ ಕಂಪನಿ ಝೂಮ್ ವಿಡಿಯೋ ಕಾಲ್ ಮೂಲಕ 900 ನೌಕರರ ತೆಗೆದ ಕಂಪನಿ ನಿರ್ಧಾರ ಸಮರ್ಥಿಸಿದ ಬಿಟ್ಟರ್. ಕಾಮ್ ಕಂಪನಿ ಸಿಇಒ

ನವದೆಹಲಿ(ಡಿ.06): ಇದು ವರ್ಷಾಂತ್ಯದ ಬೋನಸ್ ಮೀಟಿಂಗ್, ಇದು ಹೊಸ ವರ್ಷದಿಂದ ವೇತನ ಹೆಚ್ಚಳದ ಮೀಟಿಂಗ್, ಇದು ಕಂಪನಿಯ ಹೊಸ ಘೋಷಣೆಗಳ ಮೀಟಿಂಗ್ ಎಂದು ಸಿಬ್ಬಂದಿಗಳು ನಗು ಮುಖದಿಂದ ಝೂಮ್ ಮೀಟಿಂಗ್‌ಗೆ ಹಾಜರಾಗಿದ್ದಾರೆ. ಕಂಪನಿ ಸಿಇಒ ಮಾತು ಆರಂಭಿಸುತ್ತಿದ್ದಂತೆ ನೌಕರರ ಮುಖದಲ್ಲಿ ನಗು ಮಾಯವಾಗಿದೆ. ಕಾರಣ ಸಿಇಒ ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದಾರೆ. 

900 ಉದ್ಯೋಗಿಗಳ ವಜಾ ಘಟನೆ ನಡೆದಿರುವುದು ಭಾರತದ ಬೆಟರ್ ಡಾಟ್ ಕಾಮ್ ಕಂಪನಿಯಲ್ಲಿ ನಡೆದಿದೆ. ಕಂಪನಿ ಸಿಇಓ ವಿಶಾಲ್ ಗರ್ಗ್ ದಿಟ್ಟ ನಿರ್ಧಾರ ಘೋಷಿಸಿ ಇದೀಗ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಈ ವಿಡಿಯೋ ಮೀಟಿಂಗ್ ಭಾರಿ ವೈರಲ್ ಆಗಿದೆ. ಕಂಪನಿ ಹಾಗೂ ಸಿಇಓ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ.

Zoom: ಝೂಮ್ ಬಳಸ್ತೀರಾ ? ಗ್ರಾಹಕರಿಗೆ 639 ಕೋಟಿ ಕೊಡ್ತಿದೆ ಕಂಪನಿ

ವಿಡಿಯೋ ಮೀಟಿಂಗ್‌ನಲ್ಲಿ ವಿಶಾಲ್ ಗರ್ಗ್, ನೀವು ಕೇಳ ಬಯಸಿದ ಸುದ್ದಿ ಇದಲ್ಲ. ನೀವೆಲ್ಲಾ ವಜಾಗೊಳಿಸುತ್ತಿರುವ ಸಿಬ್ಬಂದಿಗಳ ಗುಂಪಿನ ಭಾಗವಾಗಿದ್ದೀರಿ. ಈ ಕಂಪನಿ ಜೊತೆಗಿನ ನಿಮ್ಮ ಉದ್ಯೋಗ ಇಲ್ಲಿಗೆ ಅಂತ್ಯವಾಗುತ್ತಿದೆ ಎಂದು ಇಂಡೋ ಅಮೆರಿಕನ್ ಸಿಇಓ ವಿಶಾಲ್ ಗರ್ಗ್ ಝೂಮ್ ವಿಡಿಯೋ ಕಾಲ್‌ನಲ್ಲಿ ಹೇಳಿದ್ದಾರೆ.

Scroll to load tweet…

3 ನಿಮಿಷದ ವಿಡಿಯೋ ಕಾಲ್‌ನಲ್ಲಿ 900 ಸಿಬ್ಬಂದಿಗಳು ಕಂಪನಿಯಿಂದ ಹೊರಬಿದ್ದಿದ್ದಾರೆ. ಇದಕ್ಕೆ ವಿಶಾಲ್ ಗರ್ಗ್ ಕಾರಣವನ್ನೂ ನೀಡಿದ್ದಾರೆ. ಈ ಉದ್ಯೋಗಿಗಳು ದಿನದಲ್ಲಿ ಗರಿಷ್ಠ 2 ಗಂಟೆ ಕೆಲಸ ಮಾಡಿಲ್ಲ. ಸಮರ್ಥವಾಗಿ ಕೆಲಸ ನಿರ್ವಹಿಸಲು ಅಸಾಧ್ಯರಾಗಿದ್ದಾರೆ. ಕಂಪನಿಯ ವೇತನ, ಇತರ ಸೌಲಭ್ಯ ಪಡೆದು ಕಂಪನಿಗೆ ಒಂದು ರೂಪಾಯಿ ಆದಾಯವನ್ನು ತಂದುಕೊಟ್ಟಿಲ್ಲ. ಹೀಗಾಗಿ ಕಂಪನಿ ಅಸಮರ್ಥ ಸಿಬ್ಬಂದಿಗಳನ್ನು ವಜಾಗೊಳಿಸುತ್ತಿದೆ ಎಂದಿದೆ.

ನೀವು ಜೂಮ್ ಬಳಕೆದಾರರೇ, ಈಗ ಬಂದಿದೆ ಡಬಲ್ ಪ್ರೊಟೆಕ್ಷನ್..!

900 ನೌಕರರ ಪೈಕಿ 250 ಮಂದಿ ದಿನದಲ್ಲಿ 2 ಗಂಟೆ ಕೆಲಸ ಮಾಡಿಲ್ಲ. ಇದರಿಂದ ನಮ್ಮ ಗ್ರಾಹಕರಿಗೆ ತೀವ್ರ ತೊಂದದರೆಗಳಾಗಿವೆ. ನಾನು ಈ ರೀತಿಯ ನಿರ್ಧಾರ ಎರಡನೇ ಬಾರಿಗೆ ತೆಗೆದುಕೊಳ್ಳುತ್ತಿದ್ದೇನೆ. ಇದು ನನಗೂ ಅತ್ಯಂತ ಕಠಿಣ ನಿರ್ಧಾರವಾಗಿದೆ. ಕಳೆದ ಬಾರಿ ನಿರ್ಧಾರ ಪ್ರಕಟಿಸಿ ಭಾವುಕನಾಗಿದ್ದೆ. ಆದರೆ ಈ ಬಾರಿ ಹೆಚ್ಚು ಸ್ಟ್ರಾಂಗ್ ಆಗಿದ್ದೇನೆ. ಯಾವುದೇ ಭಾವುಕತೆ ಒಳಗಾಗುವುದಿಲ್ಲ. ಕಂಪನಿ ಆದಾಯ, ಮುನ್ನಡೆಸಿಕೊಂಡು ಹೋಗುವುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತರ ಕಂಪನಿಗಳೊಂದಿಗೆ ಪೈಪೋಟಿ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ ವಜಾಗೊಳಿಸಲೇಬೇಕಾಗಿದೆ ಎಂದು ವಿಶಾಲ್ ಗರ್ಗ್ ಹೇಳಿದ್ದಾರೆ.

ಕೊರೋನಾ ವೈರಸ್‌ನಿಂದ ಈಗಾಗಲೇ ಕಂಪನಿ ಆರ್ಥಿಕ ಹೊಡೆತ ಅನುಭವಿಸಿದೆ. ಎಲ್ಲಾ ಅಡೆ ತಡೆ ನಿವಾರಿಸಿಕೊಂಡು ಮುನ್ನಗ್ಗುತ್ತಿರುವ ಬಿಟ್ಟರ್ ಕಂಪನಿಗೆ ಉದ್ಯೋಗಿಗಳೇ ಹಿನ್ನಡೆ ತರುತ್ತಿದ್ದಾರೆ. ಹಲವರು ಕೊರೋನಾದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಸಿಗಲು ಪರದಾಡುತ್ತಿದ್ದಾರೆ. ಆದರೆ ಇರುವ ಉದ್ಯೋಗವನ್ನು ಬೇಕಾಬಿಟ್ಟಿ ಮಾಡಿದರೆ ಯಾವ ಕಂಪನಿಯೂ ಸಹಿಸುವುದಿಲ್ಲ. ಸಂಕಷ್ಟ ಸಮಯದಲ್ಲಿ ಉತ್ತಮ ಕೆಲಸ ಮಾಡಿ ಕಂಪನಿ ಹಾಗೂ ಸಿಬ್ಬಂದಿಗಳ ಏಳಿಗೆಗೆ ಶ್ರಮವಹಿಸಬೇಕು. ಆದರೆ ವಜಾಗೊಳಿಸುವ ಸಿಬ್ಬಂದಿಗಳು ಹಾಗೇ ಮಾಡಲಿಲ್ಲ ಎಂದು ವಿಶಾಲ್ ಗರ್ಗ್ ಹೇಳಿದ್ದಾರೆ.