Asianet Suvarna News Asianet Suvarna News

Zoom: ಝೂಮ್ ಬಳಸ್ತೀರಾ ? ಗ್ರಾಹಕರಿಗೆ 639 ಕೋಟಿ ಕೊಡ್ತಿದೆ ಕಂಪನಿ

ಕೊರೋನಾ ನಂತರ ಝೂಮ್(Zoom) ಎಂಬ ಎಪ್ಲಿಕೇಷನ್ ಎಲ್ಲರಿಗೂ ಪರಿಚಿತವಾಗಿಬಿಟ್ಟಿದೆ. ಮೀಟಿಂಗ್, ಸಭೆ, ಕಾನ್ಫೆರೆನ್ಸ್ ಎಲ್ಲವೂ ಝೂಮ್ ಮೂಲಕ. ಈಗ ಝೂಮ್ ತನ್ನ ಗ್ರಾಹಕರಿಗೆ ಹಣ ಕೊಡ್ತಿದೆ, ಸಿಂಪಲ್ ಆಗಿರೋ ಕಂಡೀಷನ್ ಕೂಡಾ ಇದೆ

If you have used Zoom between 2016 and 2021 you are eligible to get money from the company dpl
Author
Bangalore, First Published Dec 4, 2021, 10:31 PM IST

ಕೊರೋನಾ ನಂತರ ಡಿಜಿಟಲೀಕರಣದ ನಿಜ ಅರ್ಥ ಜನರಿಗೆ ತಲುಪಿದೆ. ಇಂಟರ್‌ನೆಟ್ ವರ್ಚುವಲ್ ಕೆಲಸಗಳ ಪ್ರಾಮುಖ್ಯತೆಯನ್ನೂ ಜನರು ಅರಿತುಕೊಂಡಿದ್ದಾರೆ. ಬಹಳಷ್ಟು ಜನರು ಝೂಮ್ ಬಳಕೆದಾರರು. ವಿಡಿಯೋ, ಆಡಿಯೋ ಮೂಲಕ ಸುಲಭ ಸಂವಹನ ನಡೆಸಲು ಜನಪ್ರಿಯವಾದ ಝೂಮ್ ಕಂಪನಿಗಳಿಗೆ ವರವಾಗಿದೆ. ಕೊರೋನಾ ನಂತರ ಝೂಮ್ ಅನಿರೀಕ್ಷಿತ ರೀತಿಯಲ್ಲಿ ದೊಡ್ಡ ಸಕ್ಸಸ್ ಗಳಿಸಿದೆ. ಇದೀಗ ಕಂಪನಿ ತಮ್ಮ ಗ್ರಾಹಕರಿಗೆ ಗಿಫ್ಟ್ ಒಂದನ್ನು ಕೊಡಲಿದೆ. ಹೌದು ಝೂಮ್ ನಗದು ಎನೌನ್ಸ್ ಮಾಡಿದ್ದು, ಇದಕ್ಕೆ ಕೆಲವು ಕಂಡೀಷನ್‌ಗಳೂ ಇವೆ.

ಸೆಕ್ಯುರಿಟಿ ಇಶ್ಯೂಗಳಿಗೆ ಸಂಬಂಧಿಸಿ ಕ್ಲಾಸ್ ಆಕ್ಷನ್ ಕಾನೂನಿನ ಮೂಲಕ ಝೂಮ್ ಬಳಕೆದಾರರು 1874 ರೂಪಾಯಿಯನ್ನು ಪಡೆಯಬಹುದಾಗಿದೆ. ವಿಡಿಯೋ ಕಾನ್ಫೆರೆನ್ಸಿಂಗ್ ಎಪ್ಲಿಕೇಷನ್‌ನ ಜನಪ್ರಿಯತೆ ಕೊರೋನಾ ನಂತರದಲ್ಲಿ ಏರುಗತಿಯಲ್ಲಿ ಸಾಗಿತು. ಲಾಕ್‌ಡೌನ್ ಆಗುತ್ತಿದ್ದಂತೆ ಝೂಮ್ ಕಂಪನಿಯ ಅದೃಷ್ಟ ಬದಲಾಯಿತು. ಇದು ಇಂದಿಗೂ ಅತ್ಯಂತ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಎಪ್ಲಿಕೇಷನ್. ಆದರೂ ಝೂಮ್ ತನ್ನ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿದೆ. ಥರ್ಡ್ ಪಾರ್ಟಿ ಜೊತೆ ಬಹಳಕೆದಾರರ ಖಾಸಗಿ ಮಾಹಿತಿಯನ್ನು ಹಂಚಿಕೊಂಡ ಆರೋಪವನ್ನೂ ಝೂಮ್ ಎದುರಿಸಿದೆ. ಈ ಆರೋಪಗಳನ್ನು ಝೂಮ್ ತಳ್ಳಿ ಹಾಕಿದ್ದರೂ ಗ್ರಾಹಕರಿಗೆ 85 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದೆ. ಅಂದರೆ ಬರೋಬ್ಬರಿ 6,39,55,27,500 ರೂಪಾಯಿಗಳು. ಈ ಮೂಲಕ ತನ್ನ ಪ್ರೈವಸಿ ಹಾಗೂ ಸೆಕ್ಯುರಿಟಿ ಪಾಲಿಸಿಗಳನ್ನು ಇನ್ನಷ್ಟು ಉತ್ತಮವಾಗಿಸಲು ಒಪ್ಪಿಕೊಂಡಿದೆ. ಗಮನಿಸಬೇಕಾದ ವಿಚಾರವೆಂದರೆ ಇದನ್ನು ಅಮೆರಿಕದ ಬಳಕೆದಾರರಷ್ಟೇ ಕ್ಲೈಮ್ ಮಾಡಬಹುದಾಗಿದೆ.

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ವೈಯಕ್ತಿಕ ಮಾಹಿತಿಗೆ ಧಕ್ಕೆಯಾದ ಬಳಕೆದಾರರಿಗೆ ಪರಿಹಾರ ನೀಡಲು ಜೂಮ್ ಒಪ್ಪಿಕೊಂಡಿದೆ. ಕ್ಲೈಮ್ ಇತ್ಯರ್ಥವಾಗಿ ಕಂಪನಿಯು ಬಳಕೆದಾರರಿಗೆ 25 ಡಾಲರ್ ವರೆಗೆ ಪಾವತಿಸುತ್ತದೆ. ಆದರೂ ಎಲ್ಲಾ ಬಳಕೆದಾರರು ಕಂಪನಿಯಿಂದ ಹಣವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ನೀವು ಝೂಮ್ ಮೀಟಿಂಗ್‌ಗಳ ಅಪ್ಲಿಕೇಶನ್‌ನ ಪಾವತಿಸಿದ ಚಂದಾದಾರರಾಗಿದ್ದರೆ, ಮಾರ್ಚ್ 2016 ಮತ್ತು ಜುಲೈ 2021 ರ ನಡುವೆ ಝೂಮ್‌ಗೆ ಪಾವತಿಸಿದ್ದರೆ, ನೀವು ಈ ಮೊತ್ತವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ನೀವು ಪಾವತಿಸಿದ ಮೊತ್ತದ 15% ಪಡೆಯಬಹುದು. ಕ್ಲೈಮ್ ಸೆಟಲ್‌ಮೆಂಟ್ ಮೊತ್ತಕ್ಕೆ ಅರ್ಹರಾಗಿರುವ ಇತರ ಸೆಟ್ ಬಳಕೆದಾರರು ಝೂಮ್ ಮೀಟಿಂಗ್ ಅಪ್ಲಿಕೇಶನ್ ಅನ್ನು ಮಾರ್ಚ್ 30, 2016 ಮತ್ತು ಜುಲೈ 30, 2021 ರ ನಡುವೆ ನೋಂದಾಯಿಸಿದ, ಬಳಸಿರುವ, ತೆರೆದ ಅಥವಾ ಡೌನ್‌ಲೋಡ್ ಮಾಡಿಕೊಂಡಿರಬೇಕು.

ನಗದು ಪಾವತಿಯನ್ನು ಸ್ವೀಕರಿಸಲು ಗ್ರಾಹಕರು ಕ್ಲೈಮ್ ಮಾಡಬೇಕಾಗಿರುತ್ತದೆ. ಕ್ಲೈಮ್ ಮಾಡಲು, ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಮತರ ಅದನ್ನು ಕಂಪನಿಗೆ ಸಲ್ಲಿಸಬೇಕು. ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ www.ZoomMeetingsClassAction.com ಅಥವಾ ಮೇಲ್ ಮೂಲಕ ಸಲ್ಲಿಸಬಹುದು. ಇದಕ್ಕೆ ಮಾರ್ಚ್ 5, 2022ರ ತನಕ ಗುಡವು ನೀಡಲಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಜೂಮ್ ವಿರುದ್ಧ ಮೊಕದ್ದಮೆ ಹೂಡಿರುವ ಗುಂಪು, ಜೂಮ್ ಬಳಕೆದಾರರಿಗೆ ಕ್ಲೈಮ್ ಬಗ್ಗೆ ಮತ್ತು ಅವರು ಹಣವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಅವರಿಗೆ ಇಮೇಲ್ ಕಳುಹಿಸಿದೆ.

Follow Us:
Download App:
  • android
  • ios