Asianet Suvarna News

ನೀವು ಜೂಮ್ ಬಳಕೆದಾರರೇ, ಈಗ ಬಂದಿದೆ ಡಬಲ್ ಪ್ರೊಟೆಕ್ಷನ್..!

ಕೊರೋನಾ ಕಾಲದಲ್ಲಿ ಅತಿ ಹೆಚ್ಚು ಬಳಸಿ, ಅಷ್ಟೇ ವೇಗವಾಗಿ ಹ್ಯಾಕ್‌ಗೆ ಉಳಗಾಗಿದ್ದ ಜೂಮ್ ಆ್ಯಪ್ ಈಗ ಬಳಕೆದಾರರ ಸುರಕ್ಷತೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತನ್ನ ಸುರಕ್ಷತಾ ಫೀಚರ್‌ಗಳಿಗೆ ಹೆಚ್ಚು ಆದ್ಯತೆ ನೀಡಿದ್ದು, ಡಬಲ್ ಪ್ರೊಟೆಕ್ಷನ್ ನೀಡುವ ಮೂಲಕ ಸುಲಭವಾಗಿ ಹ್ಯಾಕ್ ಆಗುವುದನ್ನು ತಡೆಯಲು ಹೊರಟಿದೆ. 2FA ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲು ಹೊರಟಿರುವ ಜೂಮ್‌ನ ಹೊಸ ಫೀಚರ್ ಏನು ಎಂಬುದರ ಬಗ್ಗೆ ನೋಡೋಣ..

Zoom introduces two factor authentication in the app
Author
Bangalore, First Published Sep 15, 2020, 8:42 AM IST
  • Facebook
  • Twitter
  • Whatsapp

ವಿಡಿಯೋ ಕಾಲಿಂಗ್ ಆ್ಯಪ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದ್ದು, ಕೋವಿಡ್ – 19 ಕಾಲದಲ್ಲಿ ಎಂದರೆ ತಪ್ಪಾಗಲಾರದು. ಅಲ್ಲಿಯವರೆಗೆ ಕೆಲವು ಆನ್‌ಲೈನ್ ಮೀಟಿಂಗ್, ಕ್ಲಾಸ್‌ಗಳಿಗಷ್ಟೇ ಸೀಮಿತವಾಗಿದ್ದ ಸೇವೆಗಳು ಕೊನೆಗೆ ಎಲ್ಲ ಕೆಲಸಗಳಿಗೂ ಬೇಕಾಗತೊಡಗಿತು. ವರ್ಕ್ ಫ್ರಂ ಹೋಂ ಬಳಕೆ ಹೆಚ್ಚಾದಂತೆ ಇವುಗಳ ಬಳಕೆಯೂ ಅಧಿಕವಾದವು, ಇದೇ ವೇಳೆ ಆಗ ಹೆಚ್ಚು ಪ್ರಚಲಿತದಲ್ಲಿದ್ದ ಜೂಮ್ ಆ್ಯಪ್ ಮೇಲೆ ಹ್ಯಾಕರ್‌ಗಳ ದಾಳಿ ನಡೆದು ಸಾಕಷ್ಟು ಗೊಂದಲವನ್ನುಂಟು ಮಾಡಿತ್ತು. ಕೊನೆಗೆ ಈ ಆ್ಯಪ್ ಅನ್ನು ಬಳಸುವುದನ್ನೇ ಹಲವರು ಬಿಟ್ಟುಬಿಟ್ಟರು, ಆದರೂ ಸಂಪೂರ್ಣವಾಗಿ ಎಲ್ಲರೂ ಹಿಂದೆ ಸರಿಯಲಿಲ್ಲ. ಇದಕ್ಕೋಸ್ಕರ ಕಂಪನಿ ಸಹ ಕೆಲವೊಂದು ಅಪ್ಡೇಟ್‌ಗಳನ್ನು ನೀಡತೊಡಗಿತು. ಹೀಗಾಗಿ ಜೂಮ್ ಅಂದರೆ ಸಾಕು ಒಂದು ರೀತಿಯ ಭಯ ಹುಟ್ಟಿಸುತ್ತಿದ್ದ ಸಮಯದಲ್ಲಿ ಅನೇಕ ಹೊಸ ಫೀಚರ್‌ಗಳನ್ನು ಬಿಟ್ಟು, ಹ್ಯಾಕ್‌ಗಳಾಗದಂತೆ ಕ್ರಮಗಳನ್ನು ಕಂಪನಿ ತೆಗೆದುಕೊಂಡಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಡಬಲ್ ಪ್ರೊಟೆಕ್ಷನ್ ನೀಡಲು ಹೊರಟಿದೆ. ಇಂತಹ ಕ್ರಮದಿಂಧ ಹ್ಯಾಕ್ ಮಾಡುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಟು ಫ್ಯಾಕ್ಟರ್ ಅಥೆಂಟಿಕೇಶನ್ (2FA) ಅಂದರೆ ಎರಡು ಮಾದರಿಯ ದೃಢೀಕರಣವನ್ನು ಇನ್ನು ಮುಂದೆ ಜೂಮ್ ಬಳಕೆದಾರರು ಹೊಂದಬೇಕಾಗುತ್ತದೆ. ಇದರಿಂದ ಆ್ಯಪ್ ಬಳಕೆ ಮತ್ತಷ್ಟು ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಇದನ್ನು ಓದಿ: ಪಾಸ್ವರ್ಡ್ ಆಯ್ಕೆ ಮಾಡ್ಬೇಕಾದ್ರೆ ಇರಲಿ ಎಚ್ಚರ, ಹೀಗಂತೂ ಮಾಡ್ಲೇಬೇಡಿ…!

ಜೊತೆಗೆ ಈ 2FA ಬಳಸುವುದರಿಂದ ಅಡ್ಮಿನ್‌ಗಳಿಗೆ ಹಾಗೂ ಕಾನ್ಫರೆನ್ಸ್ ಸಂಯೋಜಕರಿಗೆ ಇನ್ನಷ್ಟು ಸುಲಭ ಹಾಗೂ ತಲೆನೋವಿನ ಸಂಗತಿ ಇರುವುದಿಲ್ಲ. ಬಳಕೆದಾರರ ಮಾಹಿತಿ ಸಂರಕ್ಷಣೆಗೂ ಇದರಿಂದ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಜೂಮ್ ಬಳಕೆದಾರರು ಈಗ ಪಾಸ್ವರ್ಡ್, ಪಿನ್ ನಂಬರ್, ಇಲ್ಲವೇ ಸ್ಮಾರ್ಟ್ ಕಾರ್ಡ್ ಬಳಕೆ, ಮೊಬೈಲ್ ಡಿವೈಸ್ ಅಥವಾ ಬಯೋಮೆಟ್ರಿಕ್ ಅಥೆಂಟಿಕೇಶನ್ ಅನ್ನು ಬಳಸಬೇಕಾಗುತ್ತದೆ. 

2FA ಪ್ರಯೋಜನವೇನು..?
ಈ ಹೊಸ 2FA ಕ್ರಮಗಳನ್ನು ಅನುಸರಿಸುವುದರಿಂದ ಸಂಸ್ಥೆ ಇಲ್ಲವೇ ಅಡ್ಮಿನ್‌ಗಳಿಗೆ ತಮ್ಮ ಬಳಕೆದಾರರ ಸಂಪೂರ್ಣ ಮಾಹಿತಿ ಲಭ್ಯವಾಗುವುದಲ್ಲದೆ, ಸೆಕ್ಯುರಿಟಿ ಲೋಪವನ್ನು ತಪ್ಪಿಸಲಿದೆ. ಅಲ್ಲದೆ, ಇದರಿಂದ ಕೆಲವು ಸೂಕ್ಷ್ಮ ಡೇಟಾ ಹಾಗೂ ಬಳಕೆದಾರರ ಮಾಹಿತಿಯನ್ನೂ ಸಹ ಕಾಪಾಡಿಕೊಳ್ಳಬಹುದು. 

2FA ಅನ್ನು ಹೇಗೆ ಸಕ್ರಿಯಗೊಳಿಸುವುದು..?
ಟೈಂ ಬೇಸ್ಡ್ ಅಥೆಂಟಿಕೇಶನ್ ಆ್ಯಪ್ (ಸಮಯಾಧಾರಿತ ದೃಢೀಕೃತ ಆ್ಯಪ್) ಗಳಾದ ಗೂಗಲ್ ಅಸಿಸ್ಟೆಂಟ್, ಮೈಕ್ರೋಸಾಫ್ಟ್ ಅಥೆಂಟಿಕೇಟರ್, ಫ್ರೀಒಟಿಪಿ ಗಳಲ್ಲಿದ್ದಂತೆ ಒಟಿಪಿ ಸೇವೆಯನ್ನು 2FA ಮೂಲಕ ಕೇಳಲಾಗುತ್ತದೆ. ಇಲ್ಲಿ ಎಸ್‌ಎಂಎಸ್ ಇಲ್ಲವೇ ಫೋನ್ ಕಾಲ್ ಮೂಲಕ ಬಳಕೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ. 

ಇದನ್ನು ಓದಿ: ಭಾರತದಲ್ಲಿಯೇ ಶುರುವಾಗುತ್ತೆ ಆ್ಯಪಲ್ ಆನ್‌ಲೈನ್ ಸ್ಟೋರ್!

ಹೀಗೆ ಬಳಕೆ ಮಾಡಬೇಕು…
1. ಜೂಮ್ ಆ್ಯಪ್ ಅನ್ನು ಓಪನ್ ಮಾಡಿ, ಅಲ್ಲಿ ಸೈನ್ ಇನ್ ಆಗಬೇಕು

2. ಅಲ್ಲಿರುವ ನ್ಯಾವಿಗೇಷನ್ ಮೆನುವಿನಿಂದ ಅಡ್ವಾನ್ಸ್ಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಸೆಕ್ಯುರಿಟಿಯತ್ತ ಗಮನಹರಿಸಿ

3. ಇಲ್ಲಿ  2FA ಅನ್ನು ದೃಢೀಕರಿಸಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಇದನ್ನು ಓದಿ: ನೀವು ಖರೀದಿಸಬಹುದಾದ 5 ಅತ್ಯುತ್ತಮ ಪವರ್ ಬ್ಯಾಂಕ್!

4. ಇಲ್ಲಿ 2FA ಅನ್ನು ನಿಮಗೆ ಬೇಕಾದಂತೆ ಅನುಮತಿಗಳನ್ನು ಕೊಡಲು ಬಳಸಿಕೊಳ್ಳಬಹುದು. ಅಂದರೆ, ಎಲ್ಲ ಬಳಕೆದಾರರಿಗೂ ಲಭ್ಯವಾಗುವ ಹಾಗೆ, ಇಲ್ಲವೇ ಕೆಲವೇ ಕೆಲವು ಬಳಕೆದಾರರಿಗೆ ಸಿಗುವಂತೆ, ಇಲ್ಲಿ ಸ್ಪೇಸಿಫೈಡ್ ರೋಲ್ ಬೇಕಿದ್ದರೆ ಅದರ ಮೇಲೆ ಕ್ಲಿಕ್ ಮಾಡಿ ಓಕೆ ಕೊಟ್ಟು ಸೇವ್ ಮಾಡಿಕೊಂಡು 2FA ಆಯ್ಕೆಯನ್ನು ಖಚಿತಪಡಿಸಬೇಕು.

ಇಲ್ಲಿ ಅಡ್ಮಿನ್‌ಗೆ ಹೆಚ್ಚಿನ ಅಧಿಕಾರವಿದ್ದು, ಅವರುಗಳು ತಮಗೆ ಬೇಕಾದ ಗ್ರೂಪ್ ಇಲ್ಲವೇ ಬಳಕೆದಾರರಿಗೆ ಮಾತ್ರ ಲಭ್ಯವಾಗುವಂತೆ ಮಾಡಬಹುದಾಗಿದೆ. ಈ ಅನುಮತಿ ನೀಡುವ ಅಧಿಕಾರ ಅಡ್ಮಿನ್‌ಗೆ ಇಲ್ಲವೇ ವೆಬ್ ಪೋರ್ಟಲ್‌ಗೆ ಮಾತ್ರವೇ ಇರುತ್ತದೆ. 

Follow Us:
Download App:
  • android
  • ios