ಬೆಂಗಳೂರು(ಆ.03): ಕೊರೋನಾ ವೈರಸ್‌ನಿಂದ ಪಾರಾಗಲು ಜಗತ್ತು ಪರದಾಡುತ್ತಿರುವಾಗ ಬೆಂಗಳೂರಿನ ಸಂಶೋಧನಾ ಸಂಸ್ಥೆಯೊಂದು ಕೊರೋನಾ ವೈರಸ್‌ಗಳನ್ನು ನಿಷ್ಕಿ್ರಯಗೊಳಿಸುವ ವಿಶಿಷ್ಟಯಂತ್ರವೊಂದನ್ನು ಆವಿಷ್ಕರಿಸಿದೆ. ಇದರ ಮಾರಾಟಕ್ಕೆ ಅಮೆರಿಕ ಮತ್ತು ಯುರೋಪ್‌ನಲ್ಲಿ ಒಪ್ಪಿಗೆ ದೊರಕಿದ್ದು, ಅಲ್ಲಿನ ಮಾರುಕಟ್ಟೆಗೆ ಯಂತ್ರ ಪ್ರವೇಶಿಸಿದೆ.

"

ಸೋಂಕಿತ ಮಗುವಿನೊಂದಿಗೆ ತಾಯಿ ಇರಲು ಲಂಚ ಕೇಳಿದ ಬಿಬಿಎಂಪಿ ಸಿಬ್ಬಂದಿ?

ಶೈಕೋಕ್ಯಾನ್‌ ಹೆಸರಿನ ಈ ಯಂತ್ರವನ್ನು ಪ್ರಸಿದ್ಧ ‘ಆರ್ಗನೈಸೇಷನ್‌ ಡಿ ಸ್ಕೇಲೀನ್‌’ ಕಂಪನಿಯ ಸಂಶೋಧನಾ ಘಟಕ, ಬೆಂಗಳೂರಿನಲ್ಲಿರುವ ‘ಸೆಂಟರ್‌ ಅಡ್ವಾನ್ಸಡ್‌ ರೀಸಚ್‌ರ್‍ ಆ್ಯಂಡ್‌ ಡೆವಲಪ್‌ಮೆಂಟ್‌’ (ಎಸ್‌-ಕಾರ್ಡ್‌) ಶೋಧಿಸಿದೆ. ‘ಇದು ಕೊರೋನಾ ವೈರಸ್ಸನ್ನಾಗಲೀ ಅಥವಾ ಯಾವುದೇ ಬ್ಯಾಕ್ಟೀರಿಯಾ ಅಥವಾ ಫಂಗಸ್ಸನ್ನಾಗಲೀ ಕೊಲ್ಲುವುದಿಲ್ಲ. ಬದಲಿಗೆ ನಿಷ್ಕಿ್ರಯಗೊಳಿಸುತ್ತದೆ. ಕಚೇರಿ, ಮನೆ, ವಾಣಿಜ್ಯ ಘಟಕಗಳು ಮುಂತಾದ ಒಳಾಂಗಣದಲ್ಲಿ ಒಂದು ಯಂತ್ರ ಇರಿಸಿದರೆ ಸುತ್ತಮುತ್ತಲಿನ 10,000 ಕ್ಯೂಬಿಕ್‌ ಅಡಿ ಅಳತೆಯ ಜಾಗದಲ್ಲಿ ಇದು ಕೊರೋನಾ ವೈರಸ್‌ ಕುಟುಂಬದ ಎಲ್ಲಾ ವೈರಸ್‌ಗಳನ್ನೂ ನಿಷ್ಕಿ್ರಯಗೊಳಿಸುತ್ತದೆ’ ಎಂದು ಸಂಸ್ಥೆಯ ಚೇರ್ಮನ್‌ ಡಾ| ರಾಜಾ ವಿಜಯಕುಮಾರ್‌ ಹೇಳಿದ್ದಾರೆ.

ಕೊರೋನಾ ಸೋಂಕಿತರಿಗೆ ಶೇ.50 ಹಾಸಿಗೆ ಮೀಸಲಿಡದ ಆಸ್ಪತ್ರೆಗಳಿಗೆ ಬಿಬಿಎಂಪಿ ಚಾಟಿ

ಈ ಯಂತ್ರದಲ್ಲಿ ಯಾವುದೇ ರಾಸಾಯನಿಕ ಅಥವಾ ಔಷಧಗಳನ್ನು ಬಳಸುವುದಿಲ್ಲ. ಇದು ವಿದ್ಯುತ್ತನ್ನು ಬಳಸಿ ಹೈ-ವೆಲಾಸಿಟಿಯ ಎಲೆಕ್ಟ್ರಾನ್‌ಗಳನ್ನು ಉತ್ಪಾದಿಸಿ ಬಿಡುಗಡೆ ಮಾಡುತ್ತದೆ. ಈ ಎಲೆಕ್ಟ್ರಾನ್‌ಗಳು ಒಳಾಂಗಣ ವಾತಾವರಣದಲ್ಲಿರುವ ಕೊರೋನಾ ವೈರಸ್‌ನ ಎಸ್‌-ಪ್ರೊಟೀನ್‌ಗಳನ್ನು ನಿಷ್ಕಿ್ರಯಗೊಳಿಸುತ್ತವೆ. ವಾಸ್ತವವಾಗಿ ಇದು ಕೊರೋನಾ ವೈರಸ್ಸನ್ನು ನಾಶಪಡಿಸಲು ಈಗ ಅಭಿವೃದ್ಧಿಪಡಿಸಿದ ಯಂತ್ರವಲ್ಲ. ಬಹಳ ಹಿಂದೆಯೇ ಕೊರೋನಾ ಕುಟುಂಬದ ವೈರಸ್‌ಗಳನ್ನು ನಿಷ್ಕಿ್ರಯಗೊಳಿಸಲು ಅಭಿವೃದ್ಧಿಪಡಿಸಿದ ಯಂತ್ರವಾಗಿದ್ದು, ಈಗ ಅಮೆರಿಕ ಮತ್ತು ಯುರೋಪ್‌ನಲ್ಲಿ ಮಾರಾಟಕ್ಕೆ ಪರವಾನಗಿ ಪಡೆದುಕೊಂಡಿದೆ.