ಈ ನಟಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. MMS ವಿವಾದದ ನಂತರ, ಅವರು ಚಿತ್ರರಂಗದಿಂದ ದೂರವಾಗಿ ವೃಂದಾವನದಲ್ಲಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದಾರೆ.
ಮುಂಬೈ: ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದ ನಟಿಯ ಸಿನಿ ಜೀವನ ಒಂದು ಎಂಎಂಎಸ್‌ನಿಂದ ಹಾಳಾಯ್ತು. MMS ಲೀಕ್ ಬಳಿಕ ಅವಕಾಶಗಳಿಂದ ದೂರವಾದ ನಟಿ, ಸದ್ಯ ಬಣ್ಣದ ಲೋಕದಿಂದ ದೂರವಾಗಿ ವೃಂದಾವನದಲ್ಲಿ ಸಾಮಾನ್ಯ ಮಹಿಳೆಯಂತೆ ಜೀವನ ನಡೆಸುತ್ತಿದ್ದಾರೆ. ಗೆಳೆಯನೊಂದಿಗೆ ಕಳೆದ ಖಾಸಗಿ ಕ್ಷಣದ MMS ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆಸ್ತಿಕ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಇದೀಗ ಕೃಷ್ಣಭಕ್ತೆಯಾಗಿ ನಟಿ ಬದಲಾಗಿದ್ದಾರೆ.
ಎಂಎಂಸ್ ಲೀಕ್; ನಟಿ ಪ್ರಿಯಾಂಕಾ ಪಂಡಿತ್
ಭೋಜಪುರಿ ಸಿನಿಮಾ ಅಂಗಳದ ನಟಿ ಪ್ರಿಯಾಂಕಾ ಪಂಡಿತ್ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ. ನಟನೆಯಿಂದ ದೂರವಾಗಿರುವ ಪ್ರಿಯಾಂಕಾ ಪಂಡಿತ್, ಕೃಷ್ಣಭಕ್ತೆಯಾಗಿ ಬದಲಾಗಿದ್ದಾರೆ. ಸಿನಿಮಾ ಲೋಕಕ್ಕೆ ಗುಡ್‌ಬೈ ಹೇಳಿರುವ ಪ್ರಿಯಾಂಕಾ ಪಂಡಿತ್ ಸಾಧ್ವಿಯಾಗಿ ಬದಲಾಗಿದ್ದಾರೆ. ಎಂಎಂಎಸ್ ಲೀಕ್ ಬಳಿಕ ಪ್ರಿಯಾಂಕಾ ಪಂಡಿತ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು.
50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಪ್ರಿಯಾಂಕಾ ಪಂಡಿತ್ ಭೋಜಪುರಿ ಸಿನಿಮಾದ ಜನಪ್ರಿಯ ಕಲಾವಿದೆ. ಪವನ್ ಸಿಂಗ್ ಮತ್ತು ಖೇಸರಿ ಲಾಲ್‌ರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿರುವ ಪ್ರಿಯಾಂಕಾ ಪಂಡಿತ್ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೆಳೆಯನೊಂದಿಗಿನ ಖಾಸಗಿ ಕ್ಷಣದ ಎಂಎಂಎಸ್ ಲೀಕ್ ಬಳಿಕ ನಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಈ ಒಂದು ಎಂಎಂಎಸ್ ಪ್ರಿಯಾಂಕಾ ಪಂಡಿತ್ ಅವರ ವೃತ್ತಿಜೀವನವನ್ನೇ ಕೊನೆಗೊಳಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ ಪ್ರಿಯಾಂಕಾ ಪಂಡಿತ್, ಎಂಎಂಎಸ್‌ನಲ್ಲಿರೋದು ನಾನಲ್ಲ. ಇದು ನಕಲಿ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದರು.
ಪ್ರೇಮಾನಂದ ಮಹಾರಾಜರ ಭಕ್ತೆ
ಎಂಎಂಎಸ್ ಲೀಕ್ ಬಳಿಕ ಪ್ರಿಯಾಂಕಾ ಪಂಡಿತ್ ಅವರಿಗೆ ಕೆಲಸ ಸಿಗುವುದು ತುಂಬಾ ಕಡಿಮೆಯಾಯ್ತು. ನಂತರ ಹಂತ ಹಂತವಾಗಿ ಬಣ್ಣದ ಜಗತ್ತಿನಿಂದಲೇ ಪ್ರಿಯಾಂಕಾ ಪಂಡಿತ್ ದೂರವಾದರು. ಕೃಷ್ಣ ಭಕ್ತಿಯಲ್ಲಿ ಲೀನರಾದ ಪ್ರಿಯಾಂಕಾ ಪಂಡಿತ್, ಪ್ರೇಮಾನಂದ ಮಹಾರಾಜರ ಭಕ್ತೆಯಾಗಿ ಗುರುತಿಸಿಕೊಂಡಿದ್ದಾರೆ.
ಪತಿಯ ಫೋಟೋ ತೋರಿಸದ ಪ್ರಿಯಾಂಕಾ
ಇತ್ತೀಚೆಗೆ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದ್ರೆ ಮದುವೆಯ ಯಾವ ಫೋಟೋದಲ್ಲಿಯೂ ಗಂಡನ ಮುಖ ಕಾಣಿಸುತ್ತಿರಲಿಲ್ಲ. ವರನಿಲ್ಲದ ಮದುವೆನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಆದ್ರೆ ಅಭಿಮಾನಿಗಳ ಪ್ರಶ್ನೆಗೆ ಮಾತ್ರ ಪ್ರಿಯಾಂಕಾ ಪಂಡಿತ್ ಉತ್ತರಿಸಿಲ್ಲ ಮತ್ತು ಇದುವರೆಗೂ ಪತಿ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಕೆಲವರ ಪ್ರಕಾರ ಇದೊಂದು ಸುಳ್ಳು ಸುದ್ದಿಯಾಗಿದೆ. ಪ್ರಚಾರಕ್ಕಾಗಿ ನಟಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದರು.
ವೃಂದಾವನದಲ್ಲಿ ವಾಸವಾಗಿರುವ ನಟಿ
ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ನಟಿ ಪ್ರಿಯಾಂಕಾ ಪಂಡಿತ್, ಮಥುರಾ-ವೃಂದಾವನದ ವೀಡಿಯೊಗಳು ಮತ್ತು ಫೋಟೋಗಳನ್ನು ಸಹ ಹಂಚಿಕೊಳ್ಳುತ್ತಲೇ ಇದ್ದಾರೆ. ವೃಂದಾವನದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಜೌನ್‌ಪುರದಲ್ಲಿ ಜನಿಸಿದ ಪ್ರಿಯಾಂಕಾ ಪಂಡಿತ್ ಬೆಳೆದದ್ದು ಅಹಮಾದಾಬಾದ್‌ನಲ್ಲಿ. ನಂತರ ಸ್ವಲ್ಪ ದಿನ ಮುಂಬೈನಲ್ಲಿ ಕೆಲಸ ಮಾಡಿ ಭೋಜ್‌ಪುರಿ ಸಿನಿಮಾ ಅಂಗಳಕ್ಕೆ ಎಂಟ್ರಿ ನೀಡಿದ್ದರು. ಕಡಿಮೆ ಸಮಯದಲ್ಲಿಯೇ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡುವ ಅವಕಾಶ ಪ್ರಿಯಾಂಕ್ ಪಂಡಿತ್ ಅವರಿಗೆ ಸಿಕ್ಕಿತ್ತು.
