Karishma Sharma Injuired: ಬಾಲಿವುಡ್ ನಟಿ Karishma Sharma ಚಲಿಸುತ್ತಿದ್ದ ಮುಂಬೈ ಲೋಕಲ್ ರೈಲಿನಿಂದ ಕೆಳಗೆ ಹಾರಿ ಗಾಯಗೊಂಡಿದ್ದಾರೆ. ಶೂಟಿಂಗ್‌ಗೆ ತೆರಳುವಾಗ ಈ ಘಟನೆ ನಡೆದಿದೆ.

ಮುಂಬೈ ಲೋಕಲ್ ರೈಲಿನಿಂದ ಕೆಳಗೆ ಹಾರಿದ ನಟಿ ಕರಿಷ್ಮಾ ಶರ್ಮಾ

ರಾಗಿಣಿ ಎಂಎಂಎಸ್ ರಿಟರ್ನ್ ಖ್ಯಾತಿಯ ನಟಿ ಕರಿಷ್ಮಾ ಶರ್ಮಾ ಅವರು ಚಲಿಸುತ್ತಿದ್ದ ಮುಂಬೈ ಲೋಕಲ್ ರೈಲಿನಿಂದ ಕೆಳಗೆ ಹಾರಿದ್ದರಿಂದ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಲಿಸುವ ರೈಲಿನಿಂದ ಹಾರುವ ವೇಳೆ ನಟಿ ಕರೀಷ್ಮಾ ಶರ್ಮಾ ಹಿಮ್ಮುಖವಾಗಿ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದು, ಇದರಿಮದ ನಟಿಯ ನಟಿ ತಲೆ ಹಾಗೂ ಹಿಂಭಾಗಕ್ಕೆ ತಾಗಿದೆ. ಘಟನೆಯಲ್ಲಿ ತಲೆ ಸ್ವಲ್ಪ ಊದಿಕೊಂಡಿದೆ ಎಂದು ವರದಿಯಾಗಿದೆ.

ನಟಿ ಕರೀಷ್ಮಾ ಶರ್ಮಾ ಅವರು ರಾಗಿಣಿ ಎಂಎಂಎಸ್ ರಿಟರ್ನ್‌, ಪ್ಯಾರ್‌ ಕಾ ಪಂಚನಾಮ್-2 ಹಾಗೂ ಉಜ್ದಾ ಚಮನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಬುಧವಾರ ಮುಂಬೈನ ಲೋಕಲ್ ರೈಲಿನಿಂದ ಕೆಳಗೆ ಹಾರುವ ವೇಳೆ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದು, ಇದರಿಂದ ಆಕೆ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಗಿಣಿ ಎಂಎಂಸ್‌ ರಿಟರ್ನ್ ಖ್ಯಾತಿಯ ಕರೀಷ್ಮಾ ಶರ್ಮಾ ರೈಲಿನಿಂದ ಹಾರಿದ್ದೇಕೆ?

ಈ ಘಟನೆಯ ಬಗ್ಗೆ ಸ್ವತಃ ಕರೀಷ್ಮಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ. ಶೂಟ್‌ಗಾಗಿ ಚರ್ಚ್‌ಗೇಟ್‌ಗೆ ಹೋಗುವುದಕ್ಕೆ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. 'ನಿನ್ನೆ ಶೂಟ್‌ಗಾಗಿ ಚರ್ಚ್‌ಗೇಟ್‌ಗೆ ಹೋಗುವುದಕ್ಕೆ ಹೊರಟಿದ್ದೆ, ಸಾರಿ ಧರಿಸಿದ್ದ ನಾನು ಲೋಕಲ್ ರೈಲಿನಲ್ಲಿ ಹೋಗುವುದಕ್ಕೆ ನಿರ್ಧರಿಸಿದ್ದೆ. ನಾನು ರೈಲು ಏರುತ್ತಿದ್ದಂತೆ ರೈಲು ವೇಗ ಪಡೆದುಕೊಂಡಿತ್ತು. ಈ ವೇಳೆ ನನ್ನ ಸ್ನೇಹಿತರು ಈ ರೈಲನ್ನು ಏರಿಲ್ಲ ಎಂಬುದು ನನ್ನ ಗಮನಕ್ಕೆ ಬರುತ್ತಿದ್ದಂತೆ ನಾನು ಭಯದಿಂದ ನಾನು ರೈಲಿನಿಂದ ಕೆಳಗೆ ಹಾರಿದೆ. ಆದರೆ ದುರಾದೃಷ್ಟವಶಾತ್‌ ನಾನು ಹಿಮ್ಮುಖವಾಗಿ ಬಿದ್ದಿದ್ದು, ಇದರಿಂದ ನನ್ನ ತಲೆ ನೆಲಕ್ಕೆ ಬಡಿಯಿತು.

ನನ್ನ ಬೆನ್ನಿಗೆ ಗಾಯವಾಗಿದೆ ನನ್ನ ತಲೆ ಊದಿಕೊಂಡಿದೆ. ವೈದ್ಯರು ನನಗೆ ಎಂಆರ್‌ಐ ಮಾಡುವಂತೆ ಸಲಹೆ ನೀಡಿದರು ಹಾಗೂ ತಲೆಗೆ ಗಾಯವಾಗಿರುವುದರಿಂದ ಎರಡು ದಿನ ನನ್ನನ್ನು ಪರಿವೀಕ್ಷಣೆಯಲ್ಲಿ ಇಟ್ಟಿದ್ದಾರೆ. ನಿನ್ನೆಯಿಂದ ನನಗೆ ತುಂಬಾ ನೋವಾಗಿದೆ. ಆದರೂ ನಾನು ಸದೃಢವಾಗಿ ಇದ್ದೇನೆ. ದಯವಿಟ್ಟು ನನ್ನನ್ನು ನಿಮ್ಮ ಪ್ರಾರ್ಥನೆ ವೇಳೆ ನೆನಪಿಸಿಕೊಳ್ಳಿ. ಹಾಗೂ ನಾನು ಬೇಗ ಹುಷಾರಾಗುವುದಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೀಷ್ಮಾ..

ಹಾಗೆಯೇ ಕರೀಷ್ಮಾ ಅವರ ಗೆಳತಿಯೂ ಕೂಡ ಕರೀಷ್ಮಾ ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಫೋಟೋವೊಂದನ್ನು ಹಂಚಿಕೊಂಡು ಗೆಳತಿಗೆ ಬೇಗ ಹುಷಾರಾಗುವಂತೆ ಪ್ರಾರ್ಥಿಸಿದ್ದಾರೆ. ಘಟನೆ ನಡೆಯುವ ಮೊದಲು ಇವರೂ ಕರೀಷ್ಮಾ ಜೊತೆಗಿದ್ದರು. ಈ ರೀತಿ ಆಯ್ತು ಎಂಬುದನ್ನು ನಂಬೋದಕ್ಕೆ ಆಗ್ತಿಲ್ಲ. ನನ್ನ ಸ್ನೇಹಿತೆ ರೈಲಿನಿಂದ ಬಿದ್ದಳು, ಆಕೆಗೆ ಏನೇನೂ ನೆನಪಿಲ್ಲ, ನಾವು ಆಕೆಯನ್ನು ನೆಲದ ಮೇಲೆ ನೋಡಿದೆವು. ವೈದ್ಯರು ಏನಾಗಿರಬಹುದು ಎಂಬುದನ್ನು ಇನ್ನಷ್ಟೇ ಪತ್ತೆ ಮಾಡುತ್ತಿದ್ದಾರೆ. ದಯವಿಟ್ಟು ಅವಳು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿ ಬೇಗ ಹುಷಾರಾಗು ಬೇಬಿ ಎಂದು ಬರೆದು ಅವರು ಕರೀಷ್ಮಾ ಅವರು ಹಾಸಿಗೆ ಮೇಲೆ ಮಲಗಿರುವ ಫೋಟೋ ಶೂಟ್ ಮಾಡಿದ್ದಾರೆ.

ಸಿನಿಮಾ, ವೆಬ್‌ಸಿರೀಸ್‌ಗಳಲ್ಲದೇ ಕರೀಷ್ಮಾ ಶರ್ಮಾ ಅವರು ನಿರಂತರ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದರು. ಕಾಮಿಡಿ ಸರ್ಕಸ್, ದಿ ಕಪಿಲ್ ಶರ್ಮಾ ಶೋ, ಫಿಯರ್ ಫೈಲ್ಸ್: ಡರ್ ಕಿ ಸಚ್ಚಿ ತಸ್ವಿರಿಯನ್ ಮುಂತಾದ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಕರ್ನಾಟಕ ಮೂಲದ ಮ್ಯಾನೇಜರ್ ತಲೆಕಡಿದ ಕೆಲಸದವ

ಇದನ್ನೂ ಓದಿ: ನೇಪಾಳ ಪ್ರಧಾನಿ ಸ್ಥಾನಕ್ಕೆ ಕೇಳಿ ಬರ್ತಿದೆ ಭಾರತದಲ್ಲಿ ಶಿಕ್ಷಣ ಪಡೆದ ಕುಲ್ಮನ್ ಘೀಸಿಂಗ್ ಹೆಸರು