ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬಸವಣ್ಣನ ಮಾರ್ಗ ಬೇಕು; ಕರ್ನಾಟಕ ನೆನೆದ ಕೇಂದ್ರ ಸಚಿವ!
- ಜಾತಿ ವ್ಯವಸ್ಥೆ ನಿರ್ನಾಮವಾಗಬೇಕು ಅಂದ್ರೆ ಅಂತರ್ಜಾತಿ ವಿವಾಹ ಆಗಬೇಕು
- ಜಾತಿ ವ್ಯವಸ್ಥೆ ಹಾಗೂ ಜಾತಿ ಗಣತಿ ಕುರಿತು ಕೇಂದ್ರ ಸಚಿವ ರಾಮದಾಸ್ ಅಠಾವಳೆ
- ಜನ್‌ಧನ್, ಮುದ್ರಾ ಯೋಜನೆ ಫಲಾನುಭವಿಗಳ ಕುರಿತು ವಿವರಣೆ ನೀಡಿದ ಅಠಾವಳೆ
ನವದೆಹಲಿ(ಜು.11): ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ನಾಮ ಆಗಬೇಕು. ಇದಕ್ಕೆ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ. ಈ ರೀತಿ ಸಮಾಜ ನಿರ್ಮಾಣಕ್ಕೆ ಕರ್ನಾಟಕದಲ್ಲಿ ಬಸವಣ್ಣ ಅನುಸರಿಸಿದ ಮಾರ್ಗ ಪಾಲಿಸಬೇಕು ಎಂದು ರಾಮದಾಸ್ ಹೇಳಿದ್ದಾರೆ.
ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
ಕರ್ನಾಟಕದಲ್ಲಿ ಬಸವಣ್ಣ ಲಿಂಗಾಯಿತ ಧರ್ಮ ಹುಟ್ಟುಹಾಕಿದರು. ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಈ ವ್ಯವಸ್ಥೆ ದೇಶದಲ್ಲಿ ಜಾರಿಯಾದರೆ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಲಿದೆ ಎಂದು ಅಠಾವಳೆ ಹೇಳಿದ್ದಾರೆ ಜಾತಿ ಗಣತಿ ಕುರಿತು ಪ್ರತಿಕ್ರಿಯೆ ವೇಳೆ ಅಠಾವಳೆ ಕರ್ನಾಟಕ ಹಾಗೂ ಬಸವಣ್ಣನ ಆದರ್ಶಗಳನ್ನು ನೆನೆದಿದ್ದಾರೆ.
ಜಾತಿಗಣತಿ:
ಸದ್ಯ ದೇಶದಲ್ಲಿ ಸದ್ದು ಮಾಡುತ್ತಿರುವ ಜಾತಿಗಣತಿ ಕುರಿತು ಅಠಾವಳೆ ಪ್ರತಿಕ್ರಿಯಿಸಿದ್ದಾರೆ. ಜಾತಿ ಗಣತಿಯಿಂದ ಕೋಮುವಾದ ಹೆಚ್ಚಾಗಲ್ಲ. ಜಾತಿ ಗಣತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರದಲ್ಲಿ ಅನಕೂಲ ಆಗಲಿದೆ. ಆಯಾ ಜಾತಿಯವರು ಪ್ರಮಾಣ ಎಷ್ಟಿದೆ ಎಂದು ತಿಳಿಯಲಿದೆ. ಇದರಿಂದ ಸೌಲಭ್ಯಗಳ ಹಂಚಿಕೆ ಸುಲಭವಾಗಲಿದೆ ಎಂದಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ, ದುರ್ಬಲರಿಗೆ ಅನಕೂಲಗಳು ಸಿಗಬೇಕು, ಉಳ್ಳವರಿಗಲ್ಲ ಎಂದು ಅಠಾವಳೆ ಹೇಳಿದ್ದಾರೆ.
ಕೆಲವು ಜಮೀನ್ದಾರರು, ಅಧಿಕಾರಿಗಳು,ಹಣವಂತರು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಎಲ್ಲ ಸಮುಧಾಯದಲ್ಲಿ ಬಡವರು ಹಿಂದೂಳಿದವರು ಇದ್ದಾರೆ. ಹೀಗಾಗಿ ಅವಶ್ಯಕತೆ ಇದ್ದವರಿ ಸೌಲಭ್ಯ ಸಿಗಬೇಕು ಎಂದು ಅಠಾವಳೆ ಹೇಳಿದ್ದಾರೆ.
ಚೈನೀಸ್ ಫುಡ್ ಮಾರಾಟ ಮಾಡುವ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಬಂದ್ ಮಾಡಿ: ಕೇಂದ್ರ ಸಚಿವ
ಉತ್ತರ ಪ್ರದೇಶ ಜನಸಂಖ್ಯಾ ನೀತಿ:
ಉತ್ತರ ಪ್ರದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಕರಡು ವಿದೇಯಕ ರಚನೆ ವಿಚಾರ ಕುರಿತು ಅಠಾವಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ಜನಸಂಖ್ಯೆ ದಿಢೀರ್ ಹೆಚ್ಚಾಗಿದೆ. ಮುಸ್ಲಿಮರಲ್ಲಿ ಮೂರ್ನಾಲ್ಕು ಮದುವೆ ಆಗುವ ಪರಿಪಾಠ ಇದೆ. ಹೀಗಾಗಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಅನಿವಾರ್ಯವಾಗಿದೆ. ಹೀಗಾಗಿ ಮುಸ್ಲಿಮರಲ್ಲಿ ಜನಸಂಖ್ಯೆ ಹೆಚ್ಚಳ ತಗ್ಗಿಸಲು ಈ ನಿಯಮ ತರಲಾಗುತ್ತಿದೆ ಎಂದು ಅಠವಾಳೆ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜನ್‌ಧನ್ ಖಾತೆ, ಮುದ್ರಾ ಯೋಜನೆಯಡಿ ಫಲಾನುಭವಿಗಳ ಕುರಿತು ಅಠವಾಳೆ ಮಾಹಿತಿ ನೀಡಿದರು. ದೇಶದಲ್ಲಿ 42.58 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದೆ. 1.52 ಕೋಟಿ ಜನಧನ್ ಖಾತೆಗಳು ರಾಜ್ಯದಲ್ಲಿ ತೆರೆಯಲಾಗಿದೆ. ಮುದ್ರಾ ಯೋಜನೆಯಡಿ ಉದ್ದಿಮೆದಾರರಿಗೆ 50 ಸಾವಿರದಿಂದ-10 ಲಕ್ಷ ಸಾಲ ಸೌಲಭ್ಯ ಕೊಡಲಾಗುತ್ತಿದೆ. 30.18 ಕೋಟಿ ಜನರಿಗೆ ಈ ಯೋಜನೆಯಡಿ ಸಾಲ ಕೊಡಲಾಗಿದೆ. 2.96 ಕೋಟಿ ಜನರಿಗೆ ರಾಜ್ಯದಲ್ಲಿ ಸಾಲ ಒದಗಿಸಲಾಗಿದೆ ಎಂದು ಅಠವಾಳೆ ಹೇಳಿದರು.