ಪ್ಲೀಸ್, ಜಾನು ಮನೆಗೆ ಬಾ.. ಬದುಕು ಕಷ್ಟವಾಗ್ತಿದೆ; ಪತ್ನಿಯ ಅಳಲು ಕೇಳಿ ಭಾವುಕರಾದ ಜನರು

Missing Husband: ಪ್ರಾಥಮಿಕ ಶಾಲಾ ಶಿಕ್ಷಕ ಪುಷ್ಪೇಂದ್ರ ಗಂಗ್ವಾರ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಕುಟುಂಬಸ್ಥರ ಸಂಪರ್ಕಕ್ಕೂ ಸಿಗದ ಪುಷ್ಪೇಂದ್ರ ಪತ್ನಿ ಜಯಶ್ರೀ ಗಂಗ್ವಾರ್ ವಿಡಿಯೋ ಮೂಲಕ ಕಣ್ಣೀರಿನ ಮನವಿ ಮಾಡಿದ್ದಾರೆ.

Bareilly Teacher Husband missing for 5 days Wife s tearful plea mrq

ಲಕ್ನೋ: ಕಾಣೆಯಾಗಿರುವ ಗಂಡನಿಗೆ ಹಿಂದಿರುಗಿ ಬರುವಂತೆ ಮಹಿಳೆ ಮನವಿ ಮಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳೆ ಕಣ್ಣೀರಿಗೆ ಕರಗಿರುವ ಜನರು, ದಯವಿಟ್ಟು ಮನೆಗೆ ಬನ್ನಿ ಅಥವಾ ಕುಟುಂಬಸ್ಥರಿಗೆ ಕರೆ ಮಾಡಿ ನೀವು ಎಲ್ಲಿದ್ದೀರಿ ಎಂಬ ಮಾಹಿತಿ ನೀಡಿ ಅವರ ಆತಂಕವನ್ನು ದೂರ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಯಾರು ಈ ವ್ಯಕ್ತಿ ಎಂದು ನೋಡೋಣ ಬನ್ನಿ.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಪುಷ್ಪೇಂದ್ರ ಗಂಗ್ವಾರ್ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಬರೇಲಿಯ ಇಜ್ಜತ್‌ನಗರದ ತ್ರಿಲೋಕ ವಿಹಾರದ ನಿವಾಸಿಯಾಗಿರುವ ಪುಷ್ಪೇಂದ್ರ ಗಂಗ್ವಾರ್ ಕುಟುಂಬಸ್ಥರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದು, ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪುಷ್ಪೇಂದ್ರ ಪತ್ನಿ, ಜಯಶ್ರೀ ಗಂಗ್ವಾರ್ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಜಯಶ್ರೀ ಗಂಗ್ವಾರ ಕಣ್ಣೀರಿನ ಮನವಿ 
ಪ್ಲೀಸ್.. ಜಾನು ನೀವು ಎಲ್ಲೇ ಇದ್ದರೂ ಮನೆಗೆ ಹಿಂದಿರುಗಿ ಬನ್ನಿ. ನಾನು ಮತ್ತು ನಿಮ್ಮ ಮಕ್ಕಳು ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮ ಮಕ್ಕಳಿಗೆ ನಾನು ಏನು ಉತ್ತರ ನೀಡಲಿ. ನೀವು ಎಲ್ಲಿ  ಹೋಗಿದ್ದೀರಿ? ಒಂಟಿ ಮಹಿಳೆ ಈ ಸಮಾಜದಲ್ಲಿ ಜೀವನ ನಡೆಸೋದು ಎಷ್ಟು ಕಷ್ಟ ಎಂದು ನೀವೇ ಹೇಳುತ್ತಿದ್ದೀರಿ. ಈಗ ನೀವು ನನ್ನನ್ನು ಒಂಟಿಯನ್ನಾಗಿ ಮಾಡಿ ಎಲ್ಲಿ ಹೋಗಿದ್ದೀರಿ? ಪ್ಲೀಸ್ ಮನೆಗೆ ವಾಪಸ್ ಬನ್ನಿ ಎಂದು ಕಣ್ಣೀರು ಹಾಕುತ್ತಾ ಜಯಶ್ರೀ ಕಣ್ಣೀರು ಹಾಕಿದ್ದಾರೆ. 

ಇದನ್ನೂ ಓದಿ: ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

ಈ ಮೊದಲು ನಾಪತ್ತೆ!
ಈ ಹಿಂದೆಯೂ ಅನೇಕ ಬಾರಿ ಪುಷ್ಪೇಂದ್ರ ಗಂಗ್ವಾರ್ ಯಾರಿಗೂ ಯಾವ ಮಾಹಿತಿಯನ್ನು ನೀಡದೇ ಹೋಗುತ್ತಿದ್ದರು. ಆದರೆ ಎರಡ್ಮೂರು ದಿನಗಳಲ್ಲಿ ಮತ್ತೆ ಹಿಂದಿರುಗಿ ಬರುತ್ತಿದ್ದರು. ಆದ್ದರಿಂದ ಎರಡು ದಿನ ಯಾರು ಸಹ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಐದು ದಿನವಾದರೂ ಹಿಂದಿರುಗಿ ಬರದ ಹಿನ್ನೆಲೆ ಕುಟುಂಬಸ್ಥರು ಆತಂಕಕ್ಕೆ  ಒಳಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಐದು ದಿನ ಕಳೆದರೂ ಶಿಕ್ಷಕ ಪುಷ್ಪೇಂದ್ರ ಸುಳಿವು ಸಿಗದ ಹಿನ್ನೆಲೆ ಕುಟುಂಬಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 

ಪೊಲೀಸ್ ತನಿಖೆ ಮುಂದುವರಿದಿದೆ
ಪುಷ್ಪೇಂದ್ರ ಗಂಗ್ವಾರ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಶಿಕ್ಷಕನ ಪತ್ತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಧ್ಯವಿರುವ ಎಲ್ಲಾ ಸ್ಥಳಗಳನ್ನು ಹುಡುಕಲಾಗುತ್ತಿದೆ ಮತ್ತು ಅವರ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ಕುಟುಂಬದವರಿಗೆ ಸಲಹೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ ಕುಟುಂಬಸ್ಥರು ಪುಷ್ಪೇಂದ್ರನಿಗಾಗಿ ಬಾಗಿಲ ಬಳಿಯಲ್ಲಿಯೇ ನಿಂತ್ಕೊಂಡು ಕಾಯುತ್ತಿದ್ದಾರೆ.

ಇದನ್ನೂ ಓದಿ: 

Latest Videos
Follow Us:
Download App:
  • android
  • ios