ನರೇಂದ್ರ ಮೋದಿ ಸೋಲಿಸಲು ಬಂದವರಿಗೆ ಔತಣ ಕೂಟದಲ್ಲಿ ಭರ್ಜರಿ ಊಟ: ಚಿಕನ್‌, ಮಟನ್‌ಗೆ ಆದ್ಯತೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಪಕ್ಷಗಳ ಮಹಾಘಟಬಂಧನ್‌ ಸಭೆಯಲ್ಲಿ ಭಾಗವಹಿಸುತ್ತಿರುವ ನಾಯಕರಿಗೆ ಭರ್ಜರಿ ಔತಣ ಕೂಟವನ್ನು ಏರ್ಪಡಿಸಲಾಗಿದೆ. ಈ ಪೈಕಿ ಚಿಕನ್, ಮಟನ್‌ಗೆ ಆದ್ಯತೆ ನೀಡಲಾಗಿದೆ.

Banquet for those who came to defeat Narendra Modi Chicken mutton preferred sat

ಬೆಂಗಳೂರು (ಜು.17): ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸಲು ಮಹಾ ಘಟಬಂಧನ್‌ 2ನೇ ಸಭೆಯನ್ನು ನಡೆಸುತ್ತಿರುವ ಪ್ರತಿಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಔತಣಕೂಟವನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲ ಊಟ, ತಿಂಡಿಗಳನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿಯೂ ಚಿಕನ್‌, ಮಟನ್‌ ಸೇರಿ ಮಾಂಸಾಹಾರಕ್ಕೆ ಆದ್ಯತೆ ನೀಡಲಾಗಿದೆ.

ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ನಾಯಕರಿಗೆ ಔತಣಕೂಟದಲ್ಲಿ ಭರ್ಜರಿ ಖಾದ್ಯಗಳ ಊಟ ಸಿದ್ಧವಾಗಿದೆ. ರಾಜ್ಯದ ಬಾಣಸಿಗರು ಎಲ್ಲ ಪ್ರತಿಪಕ್ಷಗಳ ನಾಯಕರಿಗೆ ವೆರೈಟಿ ತಿನಿಸುಗಳನ್ನ ಸಿದ್ಧಪಡಿಸಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿರುವ ನಾಯಕರಿಗೆ ತಿನಿಸುಗಳ ಪಟ್ಟಿಯ ಹೆರಸನ್ನು ಕೇಳಿದರೆ ನಿಮ್ಮ ಬಾಯಲ್ಲಿ ನೀರೂರುವುದು ಖಚಿತವಾಗಿದೆ. ದಕ್ಷಿಣ ಭಾರತ, ಉತ್ತರ ಭಾರತದ ಖಾದ್ಯಗಳ ಜೊತೆ ಈ ವಿಶೇಷವಾಗಿ ಈಶಾನ್ಯ ಭಾರತದ ಆಹಾರಗಳನ್ನು ಕೂಡ ಸಿದ್ಧಪಡಿಸಲಾಗಿದೆ. ಗಣ್ಯರಿಗೆ ಸಸ್ಯಾಹಾರದ ಜೊತೆಗೆ ಮಾಂಸಾಹಾರದ ಊಟದ ವ್ಯವಸ್ಥೆ ಮಾಡಲಾಗಿದೆ.

ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ, ಮೈತ್ರಿ ಸಭೆಗೂ ಮುನ್ನವೇ ಶಾಕ್ ನೀಡಿದ ಕಾಂಗ್ರೆಸ್!

  • ಊಟದ ಮೆನು ಇಲ್ಲಿದೆ ನೋಡಿ..: 
  • ಸಸ್ಯಾಹಾರದಲ್ಲಿ ಉತ್ತರ ಭಾರತದ ರೋಟಿ, ರೋಟಿ ನಾನ್, ತೊಗರಿ ಬೇಳೆಯ ದಾಲ್, ಹೆಸರು ಬೇಳೆಯ ದಾಲ್‌ ಹಾಗೂ ಅಲಸಂದಿಯ ಪಂಜಾಬಿ ತಡ್ಕಾವನ್ನು ಉರಿದ ಅಲೂ, ಪನ್ನೀರ್ ಟಿಕ್ಕಿ, ಪನ್ನೀರ್ ಮಸಾಲ, ಮೂರು ಬಗೆಯ ವೆಜ್‌ ಸೂಪ್‌ ಸಿದ್ಧಪಡಿಸಲಾಗಿದೆ. 
  • ಮಾಂಸಾಹಾರದಲ್ಲಿ ಚಿಕನ್ ತಂದೂರಿ, ಮಟನ್ ತಂದೂರಿ,  ಮಟನ್ ಮಸಾಲ, ಚಿಕನ್ ಮಸಾಲ, ಕಾಶ್ಮೀರಿ ತಂದೂರಿ, ವೆಜ್, ಚಿಕನ್ ನೂಡಲ್ಸ್, ಮಟನ್‌ ಮೂರು ಬಗೆಯ ಸೂಪ್, ಹೈದ್ರಾಬಾದ್ ಬಿರಿಯಾನಿ, ಈಶಾನ್ಯ ರಾಜ್ಯಗಳ  ಚಿಕನ್ ಫ್ರೈ ಮಸಾಲ, ದಕ್ಷಿಣ ಭಾರತದ ಖಾದ್ಯಗಳ ತಯಾರು ಮಾಡಲಾಗಿದೆ. 
  • ಸಿಹಿ ತಿಂಡಿಗಳಲ್ಲಿ ಪಂಜಾಬ್, ಗುಜರಾತ್, ದೆಹಲಿ, ಕೊಲ್ಕೊತ್ತಾ, ಉತ್ತರ ಪ್ರದೇಶ ಹಾಗೂ ಕರ್ನಾಟಕದ ಮೈಸೂರ್‌ಪಾಕ್‌, ಬೆಳಗಾವಿ ಮತ್ತು ಧಾರವಾಡ ಪೇಡಾ ಸೇರಿದಂತೆ ಬಗೆಬಗೆಯ ವಿಶೇಷ ಸಿಹಿ ತಿಂಡಿಗಳನ್ನು ಸಿದ್ಧಪಡಿಸಲಾಗಿದೆ.

ಜೆಡಿಎಸ್ ಮುಳುಗಿ ಹೋಗಿದೆ ಎಂಬ ಭ್ರಮೆಯಲ್ಲಿದ್ದಾರೆ: ಮಹಾಘಟಬಂಧನ್‌ ಸಭೆಗೆ ಹೆಚ್‌ಡಿಕೆ ಟಾಂಗ್‌

ರಾಹುಲ್‌ ಗಾಂಧಿಯೇ ಪ್ರಧಾನಿ ಅಭ್ಯರ್ಥಿ: ದೇಶದಲ್ಲಿ ಬಿಜೆಪಿ ಹೊರತಾದ ಪಕ್ಷದಿಂದ ಬೇರೊಬ್ಬ ನಾಯಕರು ಅಧಿಕಾರ ಹಿಡಿಯಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿರುವ ವಿಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಬಿಹಾರದ ಸಭೆ ಬಳಿಕ ಇದೀಗ 2ನೇ ಸುತ್ತಿನ ಮಹಾ ಸಭೆ ಇಂದು(ಜು.17) ಹಾಗೂ ನಾಳೆ(ಜು.18) ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕೆಲವೇ ಹೊತ್ತಲ್ಲಿ ಸಭೆ ಆರಂಭಗೊಳ್ಳುತ್ತಿದೆ. ಆದರೆ ಈ ಸಭೆಗೂ ಮುನ್ನವೇ ಕಾಂಗ್ರೆಸ್ ದಾಳ ಉರುಳಿಸಿದೆ. ವಿಪಕ್ಷಗಳ ಮೈತ್ರಿ ಕೂಟದಲ್ಲಿ ರಾಹುಲ್ ಗಾಂಧಿಯ ಪ್ರಮುಖ ನಾಯಕ. ಹೀಗಾಗಿ ರಾಹುಲ್ ಗಾಂಧಿಯೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ. ಈ ಹೇಳಿಕೆ ಇದೀಗ ಮೈತ್ರಿ ಸಭೆಗೂ ಮುನ್ನವೇ ಮಿತ್ರ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. 

Latest Videos
Follow Us:
Download App:
  • android
  • ios