Asianet Suvarna News Asianet Suvarna News

ಬೆಂಗಳೂರಿನಲ್ಲಿ ಭೂಕಂಪನ, ಐಶ್ವರ್ಯಗೆ ಸಮಸ್ಸೆ ತಂದಿಟ್ಟ ಚುಂಬನ; ನ.26ರ ಟಾಪ್ 10 ಸುದ್ದಿ!

ಸುರಕ್ಷಿತ ನಗರ ಅನ್ನೋ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ಮಧ್ಯಾಹ್ನ 12.15 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ತಿರುಗೇಟು ನೀಡಲು ರೆಡಿಯಾಗಿದೆ. ಹೃತಿಕ್‌ ಜೊತೆಯ ಕಿಸ್‌ ಸೀನ್‌ನಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ ಎಂದು ಐಶ್ವರ್ಯ ರೈ ಹೇಳಿದ್ದಾರೆ.  40% ಕಮಿಷನ್‌ ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ ನೀಡಿದ್ದಾರೆ.  ದೇಶದಲ್ಲಿಂದು ಸಂವಿಧಾನ ದಿನ ಆಚರಣೆ, ಪರಂಬೀರ್ ಮೇಲೆ ಕಸಬ್ ಫೋನ್ ನಾಶಗೊಳಿಸಿದ ಆರೋಪ ಸೇರಿದಂತೆ ನವೆಂಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Bangaluru Loud Boom earthquake to Aishwarya Rai kissing scene top 10 news of November 26 ckm
Author
Bengaluru, First Published Nov 26, 2021, 5:57 PM IST
  • Facebook
  • Twitter
  • Whatsapp

Constitution Day: 'ಸಂವಿಧಾನ ಅನೇಕ ವೈವಿಧ್ಯತೆಯ ಸಂಗ್ರಹ, ನಮ್ಮ ಪರಂಪರೆಯ ಆಧುನಿಕ ಅಭಿವ್ಯಕ್ತಿ'

Bangaluru Loud Boom earthquake to Aishwarya Rai kissing scene top 10 news of November 26 ckm

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ (Democracy) ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ (BR Ambedkar)  ಅವರಿಂದ ರಚಿಸಲ್ಪಟ್ಟ ಸಂವಿಧಾನ (Constitution) ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ನರೇಂದ್ರ ಮೋದಿಯವರು (PM Modi) ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ 2015ರಿಂದ ನವೆಂಬರ್‌ 26ನ್ನು ಸಂವಿಧಾನ ದಿವಸವನ್ನಾಗಿ (Constition day) ಆಚರಿಸಲು ಕರೆ ನೀಡಿದ್ದರು. ಇಂದು ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. 

Women Empowerment: ವರದಕ್ಷಿಣೆ ಹಣದಲ್ಲಿ ಹಾಸ್ಟೆಲ್‌ ನಿರ್ಮಿಸಿ ಎಂದ ಮಗಳು, ಖಾಲಿ ಚೆಕ್‌ ಕೊಟ್ಟ ಅಪ್ಪ

Bangaluru Loud Boom earthquake to Aishwarya Rai kissing scene top 10 news of November 26 ckm

ದೇಶದಲ್ಲಿ ಶಿಕ್ಷಿತ ವರ್ಗ ಹಿಂದೆಂದಿಗಿಂತಲೂ ಈಗ ಹೆಚ್ಚೇ ಆಗಿದ್ದರೂ, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗನ್ನು ದೇಶದಿಂದ ಸಂಪೂರ್ಣವಾಗಿ ಹೊರಗೋಡಿಸಲಾಗುತ್ತಿಲ್ಲ.  ವರದಕ್ಷಿಣೆ ತರದ ಕಾರಣಕ್ಕೆ ಎಷ್ಟು ಹೆಣ್ಣು ಮಕ್ಕಳು ಸಾವಿಗೀಡಾಗುತ್ತಿದ್ದಾರೆ.  ಆದರೆ ರಾಜಸ್ಥಾನದಲ್ಲಿ ವಧುವೊಬ್ಬಳು ವರದಕ್ಷಿಣೆಗೆ ಬದಲಾಗಿ ಹೆಣ್ಣುಮಕ್ಕಳಿಗಾಗಿ ಹಾಸ್ಟೆಲ್‌ ನಿರ್ಮಿಸುವಂತೆ ತನ್ನ ತಂದೆಗೆ ಹೇಳಿದ್ದಾಳೆ.

26/11 Attack: ಕಸಬ್‌ ಫೋನನ್ನು ಆಗಿನ ಪೊಲೀಸ್‌ ಕಮೀಷನರ್‌ ನಾಶಗೊಳಿಸಿದರು: ನಿವೃತ್ತ ಅಧಿಕಾರಿಯ ಆರೋಪ

Bangaluru Loud Boom earthquake to Aishwarya Rai kissing scene top 10 news of November 26 ckm

 ಮುಂಬೈ ಮೇಲೆ ಉಗ್ರರ ದಾಳಿ ವೇಳೆ ಜೀವಂತವಾಗಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್‌ ಕಸಬ್‌(Ajmal Kasab)ನ ಮೊಬೈಲ್‌ನ್ನು ಮುಂಬೈಯ ಮಾಜಿ ಪೊಲೀಸ್‌ ಕಮೀಷನರ್‌ ಆಗಿದ್ದ ಪರಂ ಬೀರ್‌ ಸಿಂಗ್‌(Param Bir Singh) ನಾಶಗೊಳಿಸಿದ್ದರು ಎಂದು ಈಗ ನಿವೃತ್ತಿ ಹೊಂದಿರುವ ಸಹಾಯಕ ಪೊಲೀಸ್‌ ಕಮೀಷನರ್‌ ಸಂಶೀರ್‌ ಖಾನ್‌ ಪಠಾಣ್‌ (Samsher Khan Pathan)ಆರೋಪಿಸಿದ್ದಾರೆ. 

Bengaluru Crime News : ಹಿನ್ನೆಲೆ ಗಾಯಕಿ ತಂದೆ ಅನುಮಾನಾಸ್ಪದವಾಗಿ ಸಾವು

Bangaluru Loud Boom earthquake to Aishwarya Rai kissing scene top 10 news of November 26 ckm

ತೆಲುಗು ಚಿತ್ರರಂಗದ (Telugu cinema Industry)  ಹಿನ್ನೆಲೆ ಗಾಯಕಿ (Play Back Singer) ಹರಿಣಿ (Harini) ಅವರ ತಂದೆ (Father) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಯಲಹಂಕ- ರಾಜಾನು ಕುಂಟೆ ನಡುವಿನ ಪ್ರದೇಶದ ರೈಲು ಹಳಿ (Railway Track) ಮೇಲೆ ಮೃತದೇಹ ಪತ್ತೆಯಾಗಿದೆ. ಡಾ. ಎ.ಕೆ.ರಾವ್ ಮೃತರು. ಚಾಕುವಿನಿಂದ ಕೈ ಹಾಗೂ ಕತ್ತಿಗೆ ಚುಚ್ಚಿಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಡಾ. ಎ.ಕೆ. ರಾವ್ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ(Police Station) ದೂರು ನೀಡಿದ್ದರು.

Letter To PM MOdi : 40% ಕಮಿಷನ್‌ ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ

Bangaluru Loud Boom earthquake to Aishwarya Rai kissing scene top 10 news of November 26 ckm

ಟೆಂಡರ್‌  ಪ್ರಕ್ರಿಯೆಯಲ್ಲಿ ಶೇ.40ರಷ್ಟು ಕಮಿಷನ್‌ ಬೇಡಿಕೆ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ (Prime minister narendra Modi) ಅವರಿಗೆ ಪತ್ರ (Letter) ಬರೆದ ವಿಷಯವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ. 

Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!

Bangaluru Loud Boom earthquake to Aishwarya Rai kissing scene top 10 news of November 26 ckm

ಭಾರತ ಹಾಗೂ ನ್ಯೂಜಿಲೆಂಡ್‌ (India vs New Zealand) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮೊದಲ ದಿನ ಮೇಲುಗೈ ಸಾಧಿಸಿದರೆ, ಇದೀಗ ಎರಡನೇ ದಿನದಲ್ಲಿ ಪ್ರವಾಸಿ ಕಿವೀಸ್‌ ತಂಡ ಆತಿಥೇಯರಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು 345 ರನ್‌ಗಳಿಗೆ ಆಲೌಟ್ ಮಾಡಿದ ನ್ಯೂಜಿಲೆಂಡ್ ತಂಡವು (New Zealand Cricket Team) ಎರಡನೇ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 129 ರನ್‌ ಬಾರಿಸಿದೆ. ಇನ್ನೂ ಕೇನ್ ವಿಲಿಯಮ್ಸನ್‌ (Kane Williamson) ಪಡೆ 216 ರನ್‌ಗಳ ಹಿನ್ನೆಡೆಯಲ್ಲಿದೆ.

Boom in Bengaluru: ಬೆಂಗಳೂರಿನಲ್ಲಿ 2.6 ರಷ್ಟು ತೀವ್ರತೆಯ ಭೂಕಂಪವಾಗಿದೆ: ಭೂ ವಿಜ್ಞಾನಿ

Bangaluru Loud Boom earthquake to Aishwarya Rai kissing scene top 10 news of November 26 ckm

ನಗರದ ಹಲವೆಡೆ ಭೂ ಕಂಪನದ (Earthquake) ಅನುಭವವಾಗಿದೆ. ಕಗ್ಗಲಿಪುರ, ಆರ್‌ಆರ್ ನಗರ, ಕೆಂಗೇರಿ, ಹೆಮ್ಮಿಗೆಪುರ ಸೇರಿ ಹಲವೆಡೆ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ 12.15 ಕ್ಕೆ ಭೂಮಿ ನಡುಗಿದ ಅನುಭವವಾಗಿದೆ. ಸ್ಫೋಟದ ಸದ್ದಿನೊಂದಿಗೆ  (Loud Boom) ಭೂ ಕಂಪನದ ಅನುಭವಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ

Dhoom 2 : ಹೃತಿಕ್‌ ಜೊತೆಯ ಕಿಸ್‌ ಸೀನ್‌ನಿಂದ ತೊಂದರೆಗೊಳಗಾದ ಐಶ್ವರ್ಯಾ!

Bangaluru Loud Boom earthquake to Aishwarya Rai kissing scene top 10 news of November 26 ckm

ಹೃತಿಕ್-ಐಶ್ವರ್ಯಾ ನಡುವಿನ ಕಿಸ್ಸಿಂಗ್‌ ಸೀನ್‌ ಇದಕ್ಕೆ ಕಾರಣ. ಈ ದೃಶ್ಯವನ್ನು ಮಾಡಿದ ನಂತರ, ಐಶ್ವರ್ಯಾ ಕಾನೂನು ತೊಂದರೆಗೆ ಸಿಲುಕಿದರಷ್ಟೇ ಅಲ್ಲ, ಈ ದೃಶ್ಯವನ್ನು ನೋಡಿ ಬಚ್ಚನ್ ಕುಟುಂಬವೂ ಕೋಪಗೊಂಡಿತ್ತು. ಐಶ್ವರ್ಯಾ ರೈ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದು ಏಕೆ ಗೊತ್ತಾ?

National Milk Day: ಹಾಲಿನ ಪ್ಯಾಕೆಟ್ ಮೇಲೆ ಮಿಲ್ಕ್ ಮ್ಯಾನ್ ಆಫ್ ಇಂಡಿಯಾಗೆ ನಂದಿನಿ ನಮನ

Bangaluru Loud Boom earthquake to Aishwarya Rai kissing scene top 10 news of November 26 ckm

ಇಂದು ನಿಮ್ಮ ಮನೆಗೆ ಬಂದಿರೋ ನಂದಿನಿ (Nandini)  ಹಾಲಿನ ಪ್ಯಾಕ್ (Milk pack) ಎಂದಿನಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಅದ್ರಲ್ಲಿ ಭಾರತದ ಮಿಲ್ಕ್ ಮ್ಯಾನ್ (Milk man) ಡಾ.ವರ್ಗೀಸ್ ಕುರಿಯನ್ ಗೆ ನಮನ ಸಲ್ಲಿಸಲಾಗಿದೆ.ಹೌದು, ಇಂದು ಭಾರತದ ʼಕ್ಷೀರ ಕ್ರಾಂತಿ ಪಿತಾಮಹʼ ಕುರಿಯನ್ ಜನ್ಮದಿನ. ಕುರಿಯನ್ ಅವರ ಸಾಧನೆಯ ಕಿರುಪರಿಚಯ ಇಲ್ಲಿದೆ

Auto News: ಹೊಸ 2022 SX4 S Cross ಅನಾವರಣ, ರಗಡ್ ಲುಕ್, ಸಖತ್ ಸ್ಟೈಲಿಶ್!

Bangaluru Loud Boom earthquake to Aishwarya Rai kissing scene top 10 news of November 26 ckm

ಹೊಸ ಎಸ್ ಕ್ರಾಸ್ ಕಾರನ್ನ ಸುಜುಕಿ ಜಾಗತಿಕವಾಗಿ ಅನಾವರಣ ಮಾಡಿದೆ. ಈ ಹಿಂದಿನ ಎಸ್ ಕ್ರಾಸ್‌ಗೆ ಹೋಲಿಸಿದರೆ, ಈಗ ಅನಾವರಣಗೊಂಡಿರುವ ಕಾರ್ ಸಖತ್ ಸ್ಟೈಲಿಶ್ ಆಗಿದೆ, ರಗಡ್ ಲುಕ್ ಹೊಂದಿದೆ. ಜತೆಗೆ ಹೆಚ್ಚು ವಿಶಾಲವೂ ಆಗಿದೆ. ಎಸ್ ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲೂ ಒಳ್ಳೆಯ ಪ್ರತಿಕ್ರಿಯೆ ಇದೆ. ಈಗ ಹೊಸ ಎಸ್ ಕ್ರಾಸ್‌ಗೆ ಯಾವ ರೀತಿ ಪ್ರಕ್ರಿಯೆ ಸಿಗಲಿದೆ ನೋಡಬೇಕು.
 
Follow Us:
Download App:
  • android
  • ios