Asianet Suvarna News Asianet Suvarna News

Bengaluru Crime News : ಹಿನ್ನೆಲೆ ಗಾಯಕಿ ತಂದೆ ಅನುಮಾನಾಸ್ಪದವಾಗಿ ಸಾವು

  •   ತೆಲುಗು ಚಿತ್ರರಂಗದ ಹಿನ್ನೆಲೆ ಗಾಯಕಿ ಹರಿಣಿ ಅವರ ತಂದೆ ಅನುಮಾನಾಸ್ಪದವಾಗಿ ಸಾವು
  • ಯಲಹಂಕ- ರಾಜಾನುಕುಂಟೆ ನಡುವಿನ ಪ್ರದೇಶದ ರೈಲು ಹಳಿ ಮೇಲೆ ಮೃತದೇಹ ಪತ್ತೆ
Telugu singer harini father dead body Found in Bengaluru snr
Author
Bengaluru, First Published Nov 26, 2021, 11:27 AM IST

ಬೆಂಗಳೂರು (ನ.26) :   ತೆಲುಗು ಚಿತ್ರರಂಗದ (Telugu cinema Industry)  ಹಿನ್ನೆಲೆ ಗಾಯಕಿ (Play Back Singer) ಹರಿಣಿ (Harini) ಅವರ ತಂದೆ (Father) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಯಲಹಂಕ- ರಾಜಾನು ಕುಂಟೆ ನಡುವಿನ ಪ್ರದೇಶದ ರೈಲು ಹಳಿ (Railway Track) ಮೇಲೆ ಮೃತದೇಹ ಪತ್ತೆಯಾಗಿದೆ. ಡಾ. ಎ.ಕೆ.ರಾವ್ ಮೃತರು. ಚಾಕುವಿನಿಂದ ಕೈ ಹಾಗೂ ಕತ್ತಿಗೆ ಚುಚ್ಚಿಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಡಾ. ಎ.ಕೆ. ರಾವ್ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ(Police Station) ದೂರು ನೀಡಿದ್ದರು. 

ಕೆಲ ದಿನಗಳ ಹಿಂದೆ ಬೆಂಗಳೂರಿಗೆ (Bengaluru) ಬಂದಿದ್ದ ರಾವ್ ಖಾಸಗಿ ಹೋಟೆಲ್ನಲ್ಲಿ (Private Hotel) ತಂಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು (Doctor) ಎ.ಕೆ.ರಾವ್ ಅವರದು ಆತ್ಮಹತ್ಯೆ ಎಂದು ವರದಿ ನೀಡಿದ್ದಾರೆ. ರಾವ್ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದು, ರಾವ್ ಅವರದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

 ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು (Police) ತನಿಖೆ ಕೈಗೊಂಡಿದ್ದಾರೆ. ಎ.ಕೆ.ರಾವ್ ಅವರು ಪಾಲುದಾರಿಕೆಯಲ್ಲಿ ಉದ್ಯಮವೊಂದನ್ನು ಆರಂಭಿಸಿದ್ದರು. ಉದ್ಯಮದ ವಿಚಾರದಲ್ಲಿ ಅವರಿಗೆ ವಂಚನೆಯಾಗಿದ್ದು, ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಎ.ಕೆ.ರಾವ್ ಮೃತದೇಹ ಸಿಕ್ಕ ಜಾಗದಲ್ಲಿ ಆಧಾರ್ ಕಾರ್ಡ್ (Aadhaar), ವಂಚನೆಗೆ ಸಂಬಂಧಿಸಿದಂತೆ ಕೆಲ ದಾಖಲೆಗಳು, ದೂರಿನ ಪ್ರತಿಗಳು ಪತ್ತೆಯಾಗಿವೆ ಎನ್ನಲಾಗಿದೆ.  

ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ :   ರಾಜ್ಯದ ವಿವಿಧೆಡೆ ಬುಧವಾರ ನಾಲ್ಕು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಉತ್ತರ ಕನ್ನಡ(Uttara Kannada) ಜಿಲ್ಲೆಯ ಹೊನ್ನಾವರ(Honnava) ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಮುಗ್ವಾ ಹಳಗೇರಿ ಮೂಲದ, ಈಗ ಅನಂತವಾಡಿ ಕೋಟಾದಲ್ಲಿ ವಾಸಿಸುತ್ತಿರುವ ವಿಶಾಲ ಗೌಡ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ(Student). ಅವರು ಅನಂತವಾಡಿ ಸಮೀಪ ಚಲಿಸುವ ರೈಲಿಗೆ ತಲೆಕೊಟ್ಟಿದ್ದಾರೆ. ರೈಲಿನ(Railway) ಗಾಲಿಗೆ ಸಿಕ್ಕು ದೇಹ ಚಿದ್ರವಾಗಿದ್ದು, ರುಂಡ ಒಂದು ಕಡೆ ಮುಂಡ ಒಂದು ಕಡೆ ಬಿದ್ದಿದೆ. ಸ್ಥಳಕ್ಕೆ ಮಂಕಿ ಪೊಲೀಸರು ದೌಡಾಯಿಸಿ ಸಾರ್ವಜನಿಕರ ಸಹಕಾರದಿಂದ ಶವವನ್ನು ಸ್ಥಳಾಂತರಿಸಿದ್ದಾರೆ. ವಿಶಾಲ್‌ ಪ್ರಥಮ ಪಿಯುಸಿಗೆ ಸೇರಿದ ಆನಂತರವಷ್ಟೇ ಕೋಟಾದಿಂದ ಕಾಲೇಜಿಗೆ ಬರುತ್ತಿದ್ದ ಎನ್ನಲಾಗಿದೆ. ತಂದೆ-ತಾಯಿ ಕೃಷಿಕರು. ವಿದ್ಯಾರ್ಥಿ ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಮಣಿಪಾಲ(ಉಡಪಿ): ಇಲ್ಲಿನ ಮಂಚಿಕುಮೇರಿ ಎಂಬಲ್ಲಿ ಸುಂದರ (50) ಎಂಬವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ವಿಪರೀತ ಮದ್ಯಪಾನ ಮಾಡುತಿದ್ದ ಅವರು ಮನೆಯಲ್ಲಿ ಜಗಳವಾಡುತ್ತಿದ್ದರು. ಮಂಗಳವಾರ ರಾತ್ರಿ 8.30ಕ್ಕೆ ಮದ್ಯಪಾನ ಮಾಡಿ ಮನೆಗೆ ಬಂದು ಸಾಯುತ್ತೇನೆ ಎಂದು ರೂಮಿನೊಳಗೆ ಹೋಗಿ ಲಾಕ್‌ ಹಾಕಿಕೊಂಡು, ಮಾಡಿಗೆ ಹಗ್ಗ ಕಟ್ಟಿನೇಣು ಬಿಗಿದು ಮೃತಪಟ್ಟಿದ್ದಾರೆ. ಮಣಿಪಾಲ(Manipal) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಧಾರವಾಡ(Dharwad): ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೆಳೆಹಾನಿಯಾಗಿ(Crop Damage) ನೊಂದು ರೈತನೋರ್ವ(Farmer) ತಮ್ಮ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ಈರಪ್ಪ ಬಸಪ್ಪ ಸಾದರ (37) ಆತ್ಮಹತ್ಯೆಗೆ ಶರಣಾದ ರೈತ. ಬೆಳಗ್ಗೆ ಈರಪ್ಪ ಪ್ರತಿದಿನದಂತೆ ನಸುಕಿನ ಜಾವ ಎದ್ದು ದನಗಳ ಕೊಟ್ಟಿಗೆ ಸ್ವಚ್ಛ ಮಾಡ್ದಿ, ಬಳಿಕ ಅದೇ ಹಸುಗಳನ್ನು ಹೊರಗಡೆ ಕಟ್ಟಿ ಬಂದು ದನದ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಕೃಷಿ ಚಟುವಟಿಕೆಗಾಗಿ ಗ್ರಾಮದ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ 1 ಲಕ್ಷ, ಸ್ವಸಹಾಯ ಸಂಘದಲ್ಲಿ 1 ಲಕ್ಷ ಹಾಗೂ 2 ಲಕ್ಷ ಕೈಗಡ ಸಾಲ(Loan) ಮಾಡಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದ ಹೊಲದಲ್ಲಿನ ಈರುಳ್ಳಿ ಬೆಳೆ ಕೊಳೆತಿತ್ತು. ಸಾಲ ತೀರಿಸುವುದು ಹೇಗೆ ಎಂದು ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಕೋಡಿ ಚಂದ್ರಶೇಖರ್‌ ಆತ್ಮಹತ್ಯೆ

ಮಡಿಕೇರಿ: ಕೊಡಗು(Kodagu) ಜಿಲ್ಲಾ ಸರ್ವೋದಯ ಸಮಿತಿಯ ಖಜಾಂಚಿ ಹಾಗೂ ಗೌಡ ಸಮಾಜದ ಪದಾಧಿಕಾರಿ ಕೋಡಿ ಚಂದ್ರಶೇಖರ್‌ (54) ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ರಾಘವೇಂದ್ರ ದೇವಾಲಯದ ಸಮೀಪವಿರುವ ತಮ್ಮ ಮನೆಯಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.  ಈ ಸಂಬಂಧ ಮಡಿಕೇರಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow Us:
Download App:
  • android
  • ios