ನವದೆಹಲಿ(ಆ. 31)   ಕೊರೋನಾ ಅನ್ ಲಾಕ್ ಒಂದೊಂದಾಗಿ ತೆರೆದುಕೊಳ್ಳುತ್ತಿದ್ದರೂ ಇದು ಮಹತ್ವದ ಸುದ್ದಿ. ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ವಿಧಿಸಿದ್ದ ನಿರ್ಭಂಧ ಸೆಪ್ಟೆಂಬರ್ 30  ರವರೆಗೆ ಮುಂದುವರಿಯಲಿದೆ.

ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಾಹಿತಿ ನೀಡಿದ್ದು, ಕೊರೋನಾ  ಮುನ್ನೆಚ್ಚರಿಕೆ ಭಾಗವಾಗಿ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿ ಅಂತರಾಷ್ಟ್ರೀಯ ವಿಮಾನ ಯಾನಕ್ಕೆ  ನಿರ್ಬಂಧ ಹೇರಿತ್ತು.  ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಿದ್ದ ಕೇಂದ್ರ ಸರ್ಕಾರ, ಇದೀಗ ಈ ನಿರ್ಬಂಧವನ್ನು ಸೆಪ್ಟಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.

ವಿದೇಶ ಪ್ರಯಾಣಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ

ಆದರೆ ಈ ನಿರ್ಧಾರ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ.ವಂದೇ ಭಾರತ್ ಮಿಷನ್‌ನಡಿ ಕೋವಿಡ್ ಕಾರಣದಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಭಾರತಕ್ಕೆ ಕರೆತರಲು ಏರ್‌ಇಂಡಿಯಾ ಮತ್ತು ದೇಶದಲ್ಲಿನ ಖಾಸಗಿ ವಿಮಾನಯಾನ ಸಂಸ್ಥೆಗಳು ಸಂಚಾರ ನಡೆಸುತ್ತಿದ್ದು ಅದು ಮುಂದುವರಿಯಲಿದೆ.

ಕೊರೋನಾ ಕಾರಣಕ್ಕೆ ಮೊದಲು  ಕೇಂದ್ರ ಸರ್ಕಾರ ತೆಗೆದುಕೊಂಡ  ಕ್ರಮ ಎಂದರೆ ಅದು ಅಂತಾರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧ. ಅಲ್ ಲಾಕ್ ಮಾಡಲಾಗಿದ್ದು ಮೆಟ್ರೋ ಮತ್ತು ಬಾರ್ ಪಬ್ ತೆರವಿಗೂ ದಿನಾಂಕ  ಸಮೀಪಿಸುತ್ತಿದೆ. ಶಾಲೆ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆ ಸದ್ಯಕ್ಕೆ ಆರಂಭವಿಲ್ಲ ಎಂಬುದು ಇದರಿಂದ ಗೊತ್ತಾಗುತ್ತಿದೆ.