ಗಂಭೀರ ಅಪರಾಧಗಳಲ್ಲಿ ಕೋರ್ಟುಗಳಿಂದ ದೋಷಾರೋಪಕ್ಕೆ ಗುರಿಯಾಗಿರುವ ವ್ಯಕ್ತಿಗಳ ಚುನಾವಣಾ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಎಂಬ ಅರ್ಜಿಯ ಕುರಿತಾಗಿ ಸುಪ್ರೀಂ ಕೋರ್ಟು, ಕೇಂದ್ರ ಸರ್ಕಾರಿದಿಂದ ಪ್ರತಿಕ್ರಿಯೆ ಬಯಸಿದೆ. ಉತ್ತರಿಸಲು 4 ವಾರಗಳ ಕಾಲಾವಕಾಶ ನೀಡಿದೆ.

ನವದೆಹಲಿ (ಏ.10) : ಗಂಭೀರ ಅಪರಾಧಗಳಲ್ಲಿ ಕೋರ್ಟುಗಳಿಂದ ದೋಷಾರೋಪಕ್ಕೆ ಗುರಿಯಾಗಿರುವ ವ್ಯಕ್ತಿಗಳ ಚುನಾವಣಾ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಎಂಬ ಅರ್ಜಿಯ ಕುರಿತಾಗಿ ಸುಪ್ರೀಂ ಕೋರ್ಟು(Supreme court), ಕೇಂದ್ರ ಸರ್ಕಾರಿದಿಂದ ಪ್ರತಿಕ್ರಿಯೆ ಬಯಸಿದೆ. ಉತ್ತರಿಸಲು 4 ವಾರಗಳ ಕಾಲಾವಕಾಶ ನೀಡಿದೆ.

ವಕೀಲ ಅಶ್ವಿನಿ ಉಪಾಧ್ಯಾಯ(Ashvin upadhyaya) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(Public Interest Litigation)ಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಗಂಭೀರ ಅಪರಾಧಗಳು ಯಾವುವು ಎಂಬುದನ್ನು ಮೊದಲು ಸರ್ಕಾರ ಗುರುತಿಸಬೇಕು. ಅದನ್ನು ನೋಡಿಕೊಂಡು ಮುಂದಿನ ವಿಚಾರಣೆ ನಡೆಸೋಣ. 4 ವಾರಗಳಲ್ಲಿ ಕೇಂದ್ರ ಸರ್ಕಾರ ಉತ್ತರಿಸಬೇಕು’ ಎಂದು ಹೇಳಿ ಜುಲೈಗೆ ವಿಚಾರಣೆ ಮುಂದೂಡಿತು.

ಸುಪ್ರೀಂಕೋರ್ಟ್‌ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ

ಗಂಭೀರ ಆರೋಪಗಳನ್ನು(Persons Charge Sheeted) ಹೊತ್ತಿರುವವರ ವಿರುದ್ಧ ಮೊದಲು ತನಿಖೆ ನಡೆಯುತ್ತದೆ ಹಾಗೂ ನಂತರ ಅವರ ವಿರುದ್ಧ ಪೊಲೀಸರು ಆರೋಪಪಟ್ಟಿಸಲ್ಲಿಸುತ್ತಾರೆ. ಇದನ್ನು ಪರಿಶೀಲಿಸುವ ಕೋರ್ಟು ದೋಷಾರೋಪಗಳನ್ನು ಹೊರಿಸಿ ವಿಚಾರಣೆ ಆರಂಭಿಸುತ್ತದೆ. ಈ ಹಂತದಿಂದಲೇ ಇಂಥವರನ್ನು ಚುನಾವಣಾ ಸ್ಪರ್ಧೆಯಿಂದ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 539 ವಿಜೇತರ ಪೈಕಿ 233 ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ ಕೇಸುಗಳಿವೆ ಎಂದು ದಾಖಲಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.