Asianet Suvarna News Asianet Suvarna News

ಪ್ರವಾಹದಿಂದ ಮನೆಗೆ ಹಾನಿಯಾಗಿದ್ದರೆ 5 ಲಕ್ಷ ರು.

ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ 5 ಲಕ್ಷ ರು. ಪರಿಹಾರದ ಮೊತ್ತವನ್ನು ಸರ್ಕಾರ ಪ್ರಕಟಿಸಿದೆ.

5 Lakh Compensation to Flood hit House snr
Author
Bengaluru, First Published Oct 22, 2020, 8:00 AM IST

ಬೆಂಗಳೂರು (ಅ.22):  ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ 5 ಲಕ್ಷ ರು. ಪರಿಹಾರದ ಮೊತ್ತವನ್ನು ಸರ್ಕಾರ ಪ್ರಕಟಿಸಿದೆ.

ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಯಾಗಿದ್ದರೆ ಮಾರ್ಗಸೂಚಿ ದರವು 95,100 ರು. ಇದೆ. ಸರ್ಕಾರವು ಇದರ ಮೊತ್ತವನ್ನು ಪರಿಷ್ಕೃತ ಮಾಡಿ 5 ಲಕ್ಷ ರು. ಘೋಷಿಸಿದೆ. ಶೇ.25-75ರಷ್ಟುಭಾಗಶಃ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸಲು) ಸಹ ಮಾರ್ಗಸೂಚಿ ದರ 95,100 ರು. ಇದ್ದು, ಪರಿಷ್ಕೃತ ದರ 5 ಲಕ್ಷ ರು. ನಿಗದಿ ಮಾಡಲಾಗಿದೆ. ಶೇ.25-75ರಷ್ಟುಭಾಗಶಃ ಮನೆಹಾನಿಗೆ (ದುರಸ್ತಿ) 3 ಲಕ್ಷ ರು. ಮತ್ತು ಶೇ.15-25ರಷ್ಟುಅಲ್ಪಸ್ವಲ್ಪ ಮನೆಹಾನಿಯಾಗಿದ್ದರೆ 50 ಸಾವಿರ ರು. ಪರಿಹಾರ ಪ್ರಕಟಿಸಲಾಗಿದೆ.

ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳಿಗಾಗಿ ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ 3800 ರು. ನಿಗದಿ ಪಡಿಸಿರುವುದರ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ 6200 ರು. ಸೇರಿಸಿ ಒಟ್ಟು 10 ಸಾವಿರ ರು. ಪರಿಹಾರವನ್ನು ಪ್ರತಿ ಕುಟುಂಬಕ್ಕೆ ನೀಡಲಾಗುವುದು. ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್‌ ನಿರ್ಮಾಣ/ ದುರಸ್ತಿಗಾಗಿ ಕೇಂದ್ರ ಸರ್ಕಾರ್‍ದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಸರ್ಕಾರ ನೀಡುತ್ತಿದೆ.

 ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಶೇ.75ಕ್ಕಿಂತ ಹೆಚ್ಚು ಮನೆ ಹಾನಿಯಾಗಿದ್ದರೆ 5 ಲಕ್ಷ ರು. ಪರಿಹಾರದ ಮೊತ್ತವನ್ನು ಸರ್ಕಾರ ಪ್ರಕಟಿಸಿದೆ.

‘ಮಹಾಮಳೆ’ಗೆ ತೊಯ್ದು ತೊಪ್ಪೆಯಾದ ಬೆಂಗ್ಳೂರು: 23 ವರ್ಷದ 3ನೇ ಮಹಾಮಳೆ

ಶೇ.75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿಯಾಗಿದ್ದರೆ ಮಾರ್ಗಸೂಚಿ ದರವು 95,100 ರು. ಇದೆ. ಸರ್ಕಾರವು ಇದರ ಮೊತ್ತವನ್ನು ಪರಿಷ್ಕೃತ ಮಾಡಿ 5 ಲಕ್ಷ ರು. ಘೋಷಿಸಿದೆ. ಶೇ.25-75ರಷ್ಟುಭಾಗಶಃ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸಲು) ಸಹ ಮಾರ್ಗಸೂಚಿ ದರ 95,100 ರು. ಇದ್ದು, ಪರಿಷ್ಕೃತ ದರ 5 ಲಕ್ಷ ರು. ನಿಗದಿ ಮಾಡಲಾಗಿದೆ. ಶೇ.25-75ರಷ್ಟುಭಾಗಶಃ ಮನೆಹಾನಿಗೆ (ದುರಸ್ತಿ) 3 ಲಕ್ಷ ರು. ಮತ್ತು ಶೇ.15-25ರಷ್ಟುಅಲ್ಪಸ್ವಲ್ಪ ಮನೆಹಾನಿಯಾಗಿದ್ದರೆ 50 ಸಾವಿರ ರು. ಪರಿಹಾರ ಪ್ರಕಟಿಸಲಾಗಿದೆ.

ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರ ಬಟ್ಟೆ-ಬರೆ ಹಾಗೂ ದಿನಬಳಕೆ ವಸ್ತುಗಳಿಗಾಗಿ ಕೇಂದ್ರ ಸರ್ಕಾರವು ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ 3800 ರು. ನಿಗದಿ ಪಡಿಸಿರುವುದರ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ 6200 ರು. ಸೇರಿಸಿ ಒಟ್ಟು 10 ಸಾವಿರ ರು. ಪರಿಹಾರವನ್ನು ಪ್ರತಿ ಕುಟುಂಬಕ್ಕೆ ನೀಡಲಾಗುವುದು. ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪುನರ್‌ ನಿರ್ಮಾಣ/ ದುರಸ್ತಿಗಾಗಿ ಕೇಂದ್ರ ಸರ್ಕಾರ್‍ದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಸರ್ಕಾರ ನೀಡುತ್ತಿದೆ.

Follow Us:
Download App:
  • android
  • ios