ಭಾರತೀಯರಿಗೆ ಬಹ್ರೇನ್ ದೇಶದ ಮೆಘಾ ಆಫರ್, ಕೇವಲ 1,168 ರೂಗೆ ವೀಸಾ, ಬಹ್ರೇನ್ ಇದೀಗ ಭಾರತೀಯರಿಗೆ ಅತೀ ಕಡಿಮೆ ಬೆಲೆಯಲ್ಲಿ ವೀಸಾ ಆಫರ್ ನೀಡಿದೆ. ಯಾವೆಲ್ಲಾ ಡಾಕ್ಯುಮೆಂಟ್ ಬೇಕು, ಆನ್‌ಲೈನ್ ಮೂಲಕ ಅಪ್ಲೈ ಮಾಡುವುದು ಹೇಗೆ?
ನವದೆಹಲಿ (ಸೆ.18) ಭಾರತೀಯರಿಗೆ ಬಹ್ರೇನ್ ವಿಶೇಷ ಆಫರ್ ಘೋಷಿಸಿದೆ. ಬಹ್ರೇನ್ ದೇಶ ಇದೀಗ ಭಾರತೀಯರಿಗೆ ಅತೀ ಕಡಿಮೆ ಬೆಲೆಯಲ್ಲಿ ವೀಸಾ ನೀಡುತ್ತಿದೆ. ಕೇವಲ 1,168 ರೂಪಾಯಿಗೆ ಬಹ್ರೇನ್ ವೀಸಾ ಆಫರ್ ನೀಡಿದೆ. ವಿದೇಶ ಪ್ರವಾಸ, ಕೆಲಸದ ನಿಮಿತ್ತ ಭೇಟಿ ಸೇರಿದಂತೆ ಹಲವು ಕಾರಣಗಳಿಂದ ವಿದೇಶ ಪ್ರವಾಸ ಮಾಡುವವರಿಗೆ ಬಹ್ರೇನ್ ಉತ್ತಮ ಆಫರ್ ನೀಡಿದೆ. ವಿಶೇಷವಾಗಿ ಇದು ಭಾರತೀಯರಿಗೆ ನೀಡಿದ ಆಫರ್. ಆನ್‌ಲೈನ್ ಮೂಲಕ ಸುಲಭವಾಗಿ ಅಪ್ಲೈ ಮಾಡಿ ವೀಸಾ ಪಡೆದುಕೊಳ್ಳಬಹುದು.
ಬಹ್ರೇನ್ ದೇಶಕ್ಕೆ ಭೇಟಿ ನೀಡಲು ವೀಸಾ ಕಡ್ಡಾಯವಾಗಿದೆ.ವೀಸಾ ಪಡೆಯಲು ಅಧಿಕೃತ ಪಾಸ್‌ಪೋರ್ಟ್, ನಿಮ್ಮ ಖಾತೆಯಲ್ಲಿ ಬಹ್ರೇನ್ ಭೇಟಿ ನೀಡಿ ಬರುವಷ್ಟು ಹಣ, ಹಿಂದಿರುವ ವಿಮಾನ ಟಿಕೆಟ್ ಎಲ್ಲವೂ ಇರಬೇಕು. ಎರಡು ವಿಧದ ಪ್ರಮುಖ ವೀಸಾ ಪಡೆದುಕೊಳ್ಳಬಹುದು.
Dubai Golden Visa: ಕೇವಲ 23 ಲಕ್ಷ ರೂಪಾಯಿಗೆ ನಿಜವೇ? ಯಾರಿಗೆ ಸಿಗುತ್ತದೆ? ಸೌಲಭ್ಯಗಳೇನು ಗೊತ್ತಾ
ವೀಸಾ ಆನ್ ಅರೈವಲ್ (ವಿಮಾನ ನಿಲ್ದಾಣದಲ್ಲಿ ನೀಡುವ ವೀಸಾ)
- ಇ ವೀಸಾ (ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು)
- ಭಾರತೀಯರಿಗೆ ಬಹ್ರೇನ್ ವೀಸಾ ಶುಲ್ಕ ಹಾಗೂ ವ್ಯಾಲಿಟಿಡಿ
ಅರೈವಲ್ ವೀಸಾ
- 2 ವಾರ, ಒಂದೇ ಬಾರಿ ಪ್ರವೇಶ: BD 5.000 ( 1,168 ರೂಪಾಯಿ)
- 3 ತಿಂಗಳು, ಹಲವು ಭಾರಿ ಪ್ರವೇಶ: BD 12.000 (2,804 ರೂಪಾಯಿ)
ಆನ್‌ಲೈನ್ ವೀಸಾ
- 2 ವಾರ, ಒಂದೇ ಬಾರಿ ಪ್ರವೇಶ: BD 10.000 (2,336 ರೂಪಾಯಿ)
- 3 ತಿಂಗಳು, ಹಲವು ಭಾರಿ ಪ್ರವೇಶ: BD 17.00 ( 3,972 ರೂಪಾಯಿ)
- 1 ವರ್ಷ, ಹಲವು ಬಾರಿ ಪ್ರವೇಸ: BD 45.000 (10,515 ರೂಪಾಯಿ)
ನಿಮ್ ಪ್ರವಾಸಕ್ಕೆ ಯಾವುದು ಸೂಕ್ತ ಈ ವೀಸಾ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಪ್ರವಾಸದ ಕಾರಣ ಹಾಗೂ ನಿಮಗೆ ಯಾವ ವೀಸಾ ಸೂಕ್ತ ಅನ್ನೋ ವಿವರ ಇಲ್ಲಿದೆ.
ಗ್ರೀಸ್ ರಾಜಕುಮಾರಿಯನ್ನೇ ಪ್ರೀತಿಸಿ ಮದುವೆಯಾದ ಭಾರತದ ವಕೀಲನ ರೋಚಕ ಸ್ಟೋರಿ
ಪ್ರವಾಸಿ ವೀಸಾ ಅಥವಾ ಭೇಟಿ ವೀಸಾ: ರಜಾ ದಿನ ಕಳೆಯಲು, ಗೆಳೆಯರು, ಆಪ್ತರ ಭೇಟಿಯಾಗಲು, ಕುಟುಂಬದ ಜೊತೆ ಕಳೆಯಲು ೀ ವೀಸಾ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಸಿಂಗಲ್ ಎಂಟ್ರಿ ಹಾಗೂ ಹಲವು ಬಾರಿ ಪ್ರವೇಶ ಎರಡೂ ಆಯ್ಕೆಗಳಿವೆ.
ಟ್ರಾನ್ಸಿಟ್ ವೀಸಾ: ನೀವು ಬಹ್ರೇನ್ ದೇಶದ ಮೂಲಕ ಹಾದು ಹೋಗುವ ವೇಳೆ ಏರ್‌ಲೈನ್ಸ್ ಸಂಸ್ಥೆಗಳು ಬಹ್ರೇನ್ ದೇಶದಲ್ಲಿ ಹೋಟೆಲ್‌ನಲ್ಲಿ ತಂಗಬೇಕಾದ ಅನಿವಾರ್ಯತೆ ಇದ್ದರೆ ಟ್ರಾನ್ಸಿಟ್ ವೀಸಾ ಆಯ್ಕೆ ಮಾಡಿಕೊಳ್ಳಬೇಕು.
ಕೆಲಸದ ವೀಸಾ: ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಿದ್ದರೆ ವರ್ಕ್ ವೀಸಾ ಅಪ್ಲೈ ಮಾಡಬೇಕು. ಇದನ್ನು ಲೇಬರ್ ಮಾರ್ಕೆಟ್ ರೆಗ್ಯೂಲೇಟರ್ ಅಥಾರಿಟಿ ಮೂಲಕ ಅಪ್ಲೈ ಮಾಡಬೇಕು.
