ಛತ್ತೀಸ್‌ಗಢ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕೋತಿಯೊಂದು 180 ಕಿಲೋ ಮೀಟರ್ ಪ್ರಯಾಣ ಬೆಳೆಸಿದೆ. ಆಗ್ರಾದಲ್ಲಿ ರೈಲು ಹತ್ತಿದ ಕೋತಿಯನ್ನು ಮಧ್ಯಪ್ರದೇಶದಲ್ಲಿ ರಕ್ಷಿಸಲಾಗಿದೆ.

ಗ್ವಾಲಿಯರ್‌: ಹಬ್ಬ ಅಥವಾ ವಿಶೇಷ ದಿನಗಳ ಸಂದರ್ಭದಲ್ಲಿ ಭಾರತೀಯ ರೈಲ್ವೆಯ ರೈಲುಗಳು ಕಾಲಿಡಲು ಜಾಗವಿಲ್ಲದಂತೆ ತುಂಬಿ ತುಳುಕುತ್ತಿರುತ್ತವೆ. ಈ ವೇಳೆ ಜನರು ರೈಲಿನ ಟಾಪ್ ಮೇಲೆಯೂ ಕುಳಿತು ಪ್ರಯಾಣಿಸುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಪುಟಾಣಿ ಕೋತಿ ಛತ್ತೀಸ್‌ಗರ್‌ ಎಕ್ಸ್‌ಪ್ರೆಸ್‌ ರೈಲಿನ ಟಾಪ್ ಮೇಲೆ ಕುಳಿತು ಬರೋಬ್ಬರಿ 180 ಕಿಲೋ ಮೀಟರ್ ಸಂಚರಿಸಿದೆ. ಕೆಲ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಈ ಮರಿ ಮಂಗ ಆಗ್ರಾದ ರಾಜಾ ಕಿ ಮಂಡಿರೈಲು ನಿಲ್ದಾಣದಲ್ಲಿ ಸಾಗಿ ಹೋಗುತ್ತಿದ್ದ ವೇಳೆ ರೈಲಿನ ಮೇಲೆ ಹಾರಿದೆ. ಈ ಛತ್ತೀಸ್‌ಗರ್ ಎಕ್ಸ್‌ಪ್ರೆಸ್ ರೈಲು ದೆಹಲಿಯಿಂದ ಬಿಲಾಸ್‌ಪುರಕ್ಕೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ನಂತರ ಈ ಕೋತಿ ಮರಿಯನ್ನು ಮಧ್ಯಪ್ರದೇಶ ದಬ್ರಾ ರೈಲು ನಿಲ್ದಾಣದಲ್ಲಿ ರಕ್ಷಣೆ ಮಾಡಲಾಯ್ತು. ಈ ಪುಟ್ಟ ಕೋತಿ ಮರಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ರೈಲಿನ ಮೇಲೆ ಜಿಗಿದ ಕೋತಿ
ದಬ್ರಾದಲ್ಲಿ ಹಲವು ಪ್ರಯತ್ನಗಳ ನಂತರ ಈ ಕೋತಿಯನ್ನು ರಕ್ಷಿಸಲಾಗಿದೆ. ಈ ಪುಟ್ಟ ಕೋತಿ ಮರಿಗೆ ವಿದ್ಯುತ ಶಾಕ್‌ಗೆ ಒಳಗಾಗಿತ್ತು. ಕೆಲ ಮಾಹಿತಿಗಳ ಪ್ರಕಾರ ಛತ್ತೀಸ್‌ಗಢ ಎಕ್ಸ್‌ಪ್ರೆಸ್ ಆಗ್ರಾದ ರಾಜಾ ಕಿ ಮಂಡಿ ಮೂಲಕ ಹಾದು ಹೋಗುವಾಗ, ಕೋತಿ ಮೊದಲು H-1 ಕೋಚಿನ ಟಾಪ್‌ ಮೇಲೆ ಉತ್ಸಾಹದಿಂದ ಜಿಗಿದಿದ್ದು ಕಂಡುಬಂದಿದೆ. ಆದರೆ ಈ ರೈಲಿನ ತಪ್ಪಿಸಿಕೊಳ್ಳುವ ಯತ್ನದಲ್ಲಿ ಈ ಮರಿ ಕೋತಿಗೆ ವಿದ್ಯುತ್ ಆಘಾತವಾಗಿದೆ. ಇದರಿಂದ ಗಾಯಗೊಂಡ ಮರಿಕೋತಿ ಕೋಚಿನ ಕಪ್ಲಿಂಗ್‌ಗಳ ನಡುವೆ ಜಿಗಿದಿದೆ. ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಯ್ತು.

ನೀ ಇಲ್ಲದೇ ನಾ ಹೇಗಿರಲಿ... ಗೆಳೆಯನ ಸಾವಿಗೆ ರೋದಿಸಿದ ಸರ್ಕಸ್ ಆನೆ: ಮನಕಲಕುವ ವೀಡಿಯೋ

ಕೋತಿಯ ರಕ್ಷಣೆಗಾಗಿ ಹಲವು ನಿಲ್ದಾಣಗಳಲ್ಲಿ ನಿಂತ ರೈಲು
ನಂತರ ಈ ಕೋತಿ ಮರಿಯನ್ನು ರಕ್ಷಿಸಲು ರೈಲನ್ನು ಆಗ್ರಾ ಕ್ಯಾಂಟ್, ಧೌಲ್‌ಪುರ, ಮುರಾನ್, ಬನ್ಮೋರ್, ಗ್ವಾಲಿಯರ್ ಮತ್ತು ದಬೇರಾ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು. ಆದರೆ ಇಲ್ಲೆಲ್ಲೂ ಕೋತಿಮರಿ ಸಿಕ್ಕಿಲ್ಲ. ನಂತರ ಮಧ್ಯ ಪ್ರದೇಶದ ಗ್ವಾಲಿಯರ್ ರೈಲ್ವೆ ನಿಲ್ದಾಣದಲ್ಲಿ, ಕೋತಿ ಮರಿಯನ್ನು ರಕ್ಷಿಸುವ ಸಲುವಾಗಿ ಅರಣ್ಯ ಇಲಾಖೆಯ ತಂಡವನ್ನು ಕರೆಸಲಾಯಿತು. ಸುಮಾರು 10 ನಿಮಿಷಗಳ ಹುಡುಕಾಟದ ನಂತರವೂ ಕೋತಿ ತಕ್ಷಣವೇ ಪತ್ತೆಯಾಗಲಿಲ್ಲ. ರೈಲು ಹೊರಟ ನಂತರ, ಕೋತಿ H-1 ಕೋಚ್‌ನ ಕಪ್ಲಿಂಗ್‌ಗಳ ನಡುವೆ ಅಡಗಿಕೊಂಡಿರುವುದನ್ನು ಗಮನಿಸಲಾಯಿತು, ಇದು ನಿಯಂತ್ರಣ ಕೊಠಡಿಗೆ ಹೊಸ ಎಚ್ಚರಿಕೆಯನ್ನು ನೀಡಿತು. ಅಂತಿಮವಾಗಿ, ದಬೆರಾದಲ್ಲಿ ಕೋತಿಯನ್ನು ರಕ್ಷಿಸಲಾಯಿತು.

ಮ್ಯಾಂಗೋ ಜ್ಯೂಸ್‌ಗಾಗಿ ಮೊಬೈಲ್ ಕಸಿದು ಡೀಲ್ ಮಾಡಿದ ಕೋತಿ: ವೀಡಿಯೋ ಸಖತ್ ವೈರಲ್‌

ಕೋತಿಯಿಂದ ಉಂಟಾದ ಅನಿರೀಕ್ಷಿತ ಘಟನೆಯಿಂದಾಗಿ ರೈಲು ಪ್ರಯಾಣ ಸುಮಾರು 30 ನಿಮಿಷಗಳ ಕಾಲ ವಿಳಂಬವಾಯಿತು. ಕೋತಿಮರಿಯನ್ನು ತೆಗೆದುಹಾಕಲು ಆರು ವಿಭಿನ್ನ ನಿಲ್ದಾಣಗಳಲ್ಲಿ ಪದೇ ಪದೇ ರೈಲನ್ನು ನಿಲ್ಲಿಸಿದ್ದರಿಂದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು. ಪರಿಣಾಮವಾಗಿ, ರೈಲು ನಿಗದಿಗಿಂತ 1 ಗಂಟೆ 8 ನಿಮಿಷ ತಡವಾಗಿ ಆಗ್ರಾ ಕ್ಯಾಂಟ್ ತಲುಪಿತು ಮತ್ತು ಅದು ಗ್ವಾಲಿಯರ್ ತಲುಪುವ ಹೊತ್ತಿಗೆ ಇನ್ನೂ ವಿಳಂಬವಾಗಿತ್ತು.

ವೈರಲ್ ಆದ ವೀಡಿಯೋ ಇಲ್ಲಿದೆ ನೋಡಿ

Scroll to load tweet…