ಮೇಣದ ಬತ್ತಿ, ಸೆಲ್‌ಫೋನ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
- ಆಂಧ್ರಪ್ರದೇಶದಾದ್ಯಂತ ತೀವ್ರ ವಿದ್ಯುತ್ ಕಡಿತ
- ಟಾರ್ಚ್ ಬೆಳಕಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
- ಆಸ್ಪತ್ರೆ ಅವ್ಯವಸ್ಥೆಗೆ ಜನರ ಆಕ್ರೋಶ, ವಿಡಿಯೋ ವೈರಲ್
ಆಂಧ್ರ ಪ್ರದೇಶ(ಏ.8): ವಿದ್ಯುತ್ ಕಡಿತದಿಂದಾಗಿ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿಗಳು, ಸೆಲ್ ಫೋನ್ ಟಾರ್ಚ್‌ಗಳು ಮತ್ತು ಚಾರ್ಜಿಂಗ್ ಲೈಟ್‌ಗಳ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ನರಸಿಪಟ್ನಂ ಏರಿಯಾದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಕಡಿತದ ನಡುವೆ ಬುಧವಾರ ತಡರಾತ್ರಿ ಮೇಣದಬತ್ತಿಗಳು, ಸೆಲ್ ಫೋನ್ ಟಾರ್ಚ್‌ಗಳು ಮತ್ತು ಚಾರ್ಜಿಂಗ್ ಲೈಟ್‌ಗಳ ಬೆಳಕಲ್ಲಿ ಮಗುವಿಗೆ ಜನ್ಮ ನೀಡಲಾಗಿದೆ ಎಂದು ವರದಿಯಾಗಿದೆ.
ಕತ್ತಲೆಯಲ್ಲಿ ಶಿಶು ನರಳುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸ್ಥಳೀಯರು, ಮಹಿಳೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕರಿಂದ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಇಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಕಡಿತ ತೀವ್ರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ, ಪ್ರತಿನಿತ್ಯ 7 ರಿಂದ 10 ಗಂಟೆಗಳವರೆಗೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಬುಧವಾರದಂದು ಆಸ್ಪತ್ರೆಯಲ್ಲಿನ ಜನರೇಟರ್ ಮತ್ತು ಲೇಬರ್ ರೂಮ್‌ನಲ್ಲಿನ ಇನ್ವರ್ಟರ್ ಕೂಡ ಕೆಲವು ತಾಂತ್ರಿಕ ದೋಷಗಳಿಂದಾಗಿ ಸ್ಥಗಿತಗೊಂಡಿತ್ತು. ಇದರಿಂದ ಆಸ್ಪತ್ರೆಯಲ್ಲಿರುವ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು.
Davanagere: 21 ದಿನಗಳ ನಂತರ ಮಗು ಬಸ್ ಸ್ಟ್ಯಾಂಡ್ ಹೋಟೆಲ್ ಬಳಿ ಪತ್ತೆ
ವಿದ್ಯುತ್ ಕಡಿತದ ಪರಿಣಾಮ ಮೇಣದಬತ್ತಿಗಳು, ಸೆಲ್ ಫೋನ್ ಟಾರ್ಚ್‌ಗಳು ಮತ್ತು ಚಾರ್ಜಿಂಗ್ ಲೈಟ್‌ಗಳನ್ನು ಬಳಸಿಕೊಂಡು ವೈದ್ಯಕೀಯ ಸೇವೆ ಒದಗಿಸುವಂತಾಗಿದೆ. ಅದೃಷ್ಟವಶಾತ್ ಇದು ಸಾಮಾನ್ಯ ಹೆರಿಗೆಯಾಗಿತ್ತು ಎಂದು ಆಸ್ಪತ್ರೆಯ ಪ್ರಭಾರಿ ಸೂಪರಿಂಟೆಂಡೆಂಟ್ ಡಾ.ಡೇವಿಡ್ ವಸಂತ್ ಕುಮಾರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು (Patient, ಗರ್ಭಿಣಿಯರು (Pregnent), ನವಜಾತ ಶಿಶುಗಳು (Infants)ಸೇರಿದಂತೆ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತಾಜಾ ಗಾಳಿಗಾಗಿ ಮಹಿಳೆ ನವಜಾತ ಶಿಶುವನ್ನು ಹೊರ ತರುತ್ತಿರುವ ವೀಡಿಯೊಗಳು ವೈರಲ್ ಆಗಿವೆ. ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ರೋಗಿಗಳ ಪರಿಚಾರಕರು ಅಸಮಾಧಾನ ವ್ಯಕ್ತಪಡಿಸುವ ವೀಡಿಯೊಗಳು ಗುರುವಾರ ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವೀಡಿಯೋವೊಂದರಲ್ಲಿ ಮಹಿಳೆಯೊಬ್ಬರು, ಯಾವ ಆಸ್ಪತ್ರೆಯಲ್ಲಾದರು ಮೊಬೈಲ್ ಫೋನ್ ಲೈಟ್‌ಗಳನ್ನು ಬಳಸಿ ಹೆರಿಗೆ ಮಾಡಿಸಲಾಗುತ್ತದೆಯೇ ಎಂದು ಆಸ್ಪತ್ರೆಯ ಸಿಬ್ಬಂದಿಯನ್ನು ಕೇಳುತ್ತಿರುವುದು ಕಂಡು ಬಂದಿದೆ.
ಹಾವೇರಿ ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಕ್ಲೋಸ್: ಗರ್ಭಿಣಿಯರ ಕಷ್ಟ ಕೇಳೋರಿಲ್ಲ..!
ಕಳೆದ ರಾತ್ರಿ ವಿದ್ಯುತ್ (Power Cut) ಇಲ್ಲದೆ ಸುಮಾರು ಎರಡು ಗಂಟೆಗಳ ಕಾಲ ಕಾದ ನಂತರ, ನಾವು ಅದರ ಬಗ್ಗೆ ಸಿಬ್ಬಂದಿಯನ್ನು ಕೇಳಿದೆವು. ಸಿಬ್ಬಂದಿ ಬಳಿ ಉತ್ತರವಿರಲಿಲ್ಲ ಮತ್ತು ಮೇಣದಬತ್ತಿಗಳನ್ನು ತರುವಂತೆ ಕೇಳಿದರು. ಮಧ್ಯರಾತ್ರಿಯ ನಂತರ ನಮಗೆ ಮೇಣದಬತ್ತಿಗಳನ್ನು ಯಾರು ಒದಗಿಸುತ್ತಾರೆ, ಎಂದು ತನ್ನ ಗರ್ಭಿಣಿ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಿಸಿದ ವ್ಯಕ್ತಿಯೊಬ್ಬರು ಪ್ರಶ್ನಿಸಿದರು.
ಕಳೆದ ಮೂರು ದಿನಗಳಿಂದ ಇದೇ ಪರಿಸ್ಥಿತಿ ಇದೆ ಎನ್ನುತ್ತಾರೆ ಮತ್ತೋರ್ವ ರೋಗಿಯ ಪರಿಚಾರಕರು. ಆಸ್ಪತ್ರೆಯಲ್ಲಿ ತೀವ್ರ ನೀರಿನ ಕೊರತೆ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ಸಂಬಂಧಿಕರಿಗೆ ಹ್ಯಾಂಡ್ ಫ್ಯಾನ್‌ಗಳನ್ನು ಬಳಸಲು ನಾವು ಒತ್ತಾಯಿಸಿದ್ದೇವೆ. ವಿದ್ಯುತ್ ಕಡಿತದಿಂದ ಅನೇಕ ರೋಗಿಗಳು ನಿದ್ದೆಯಿಲ್ಲದೆ ರಾತ್ರಿ ಕಳೆಯುತ್ತಿದ್ದಾರೆ' ಎಂದು ರೋಗಿಯ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಜನರೇಟರ್‌ಗಳಿದ್ದರೂ ಆಡಳಿತ ಮಂಡಳಿ ಬಳಸುತ್ತಿಲ್ಲ ಎಂದು ಆಸ್ಪತ್ರೆ ಅಟೆಂಡರ್‌ಗಳು ಹೇಳಿದ್ದಾರೆ. ಅಲ್ಲದೇ ಸಿಬ್ಬಂದಿ ಮತ್ತು ತಜ್ಞ ವೈದ್ಯರ ಕೊರತೆಯಿಂದಾಗಿ ಎಲ್ಲಾ ಪ್ರಮುಖ ಅಥವಾ ನಿರ್ಣಾಯಕ ಪ್ರಕರಣಗಳನ್ನು ಇಲ್ಲಿನ ಸಿಬ್ಬಂದಿ ವಿಶಾಖಪಟ್ಟಣಂ ಅಥವಾ ಕೆಜಿಎಚ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗ ಜನರೇಟರ್ ದುರಸ್ತಿಗೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ಡಾ.ಡೇವಿಡ್ ವಸಂತ್ (Devid vasanth) ಅವರು ಹೇಳಿದ್ದಾರೆ.