ಕನ್ವರ್ ಯಾತ್ರೆ ಹೊರಟವರಿಂದ ಬುಲ್ಡೋಜರ್ ಬಾಬಾ ಟೀಶರ್ಟ್‌ಗೆ ಭಾರೀ ಡಿಮ್ಯಾಂಡ್
ತೀರ್ಥಯಾತ್ರೆಗೆ ಹೊರಟ ಯಾತ್ರಿಕರ ಪಾಲಿಗೆ ಉತ್ತರಪ್ರದೇಶ ಸಿಂ ಯೋಗಿ ಆದಿತ್ಯನಾಥ್ ಹಾಟ್ ಫೇವರೇಟ್ ಆಗಿದ್ದು, ಬಹುತೇಕ ಯಾತ್ರಿಕರು ಯೋಗಿ ಹಾಗೂ ಬುಲ್ಡೋಜರ್ ಫೋಟೋ ಇರುವ ಕೇಸರಿ ಬಣ್ಣದ ಟೀಶರ್ಟ್ ಧರಿಸಿ ಕನ್ವರ್‌ಯಾತ್ರೆ ತೆರಳುತ್ತಿದ್ದಾರೆ.
ಪ್ರಯಾಗ್‌ರಾಜ್: ಶ್ರಾವಣಮಾಸ ಈಗಾಗಲೇ ಆರಂಭವಾಗಿದ್ದು, ದೇಶದ ವಿವಿಧೆಡೆಯಿಂದ ಶಿವಭಕ್ತರು ಕನ್ವರ್‌ಯಾತ್ರೆ ಹೊರಟಿದ್ದು, ಗಂಗೆ ಹರಿಯುವ ಉತ್ತರಾಖಂಡ್‌ನ ಪವಿತ್ರ ತೀರ್ಥಕ್ಷೇತ್ರಗಳಾದ ಹರಿದ್ವಾರ, ಕೇದರನಾಥ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಗಂಗೆಯನ್ನು ಹೊತ್ತು ಸಾಗುತ್ತಿದ್ದು, ಅಲ್ಲಿ ಶಿವನಿಗೆ ಗಂಗಾಭೀಷೇಕ ಮಾಡಲಿದ್ದಾರೆ. ಹೀಗೆ ತೀರ್ಥಯಾತ್ರೆಗೆ ಹೊರಟ ಯಾತ್ರಿಕರ ಪಾಲಿಗೆ ಉತ್ತರಪ್ರದೇಶ ಸಿಂ ಯೋಗಿ ಆದಿತ್ಯನಾಥ್ ಹಾಟ್ ಫೇವರೇಟ್ ಆಗಿದ್ದು, ಬಹುತೇಕ ಯಾತ್ರಿಕರು ಯೋಗಿ ಹಾಗೂ ಬುಲ್ಡೋಜರ್ ಫೋಟೋ ಇರುವ ಕೇಸರಿ ಬಣ್ಣದ ಟೀಶರ್ಟ್ ಧರಿಸಿ ಕನ್ವರ್‌ಯಾತ್ರೆ ತೆರಳುತ್ತಿದ್ದಾರೆ.
ದೇಶದ ವಿವಿಧೆಡೆಯಿಂದ ಶಿವ ಭಕ್ತರು ಪಾದಯಾತ್ರಯ ಮೂಲಕ ಕನ್ವರ್‌ಯಾತ್ರೆ (Kanwar yatra) ತೆರಳುತ್ತಿದ್ದು, ಇವರನ್ನು ಈ ಬುಲ್ಡೋಜರ್ ಹಾಗೂ ಯೋಗಿ ಆದಿತ್ಯನಾಥ್ ಇರುವ ಟೀ ಶರ್ಟ್‌ಗಳು ಸೆಳೆಯುತ್ತಿವೆ. ಗಂಗೆಯ ಸಂಗಮ ಪ್ರದೇಶಗಳು ಹಾಗೂ ದಾರಗಂಜ್‌ನಲ್ಲಿ ಇವುಗಳ ಮಾರಾಟ ಪ್ರಮಾಣ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಟೀಶರ್ಟ್‌ಗಳನ್ನು ಮುಂಗಡವಾಗಿ ಆರ್ಡರ್ ಮಾಡಲಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಅಮ್ಮನ ಋಣ ತೀರಿಸೋದು ಸಾಧ್ಯಾನ : ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟ ಪುತ್ರ ವೀಡಿಯೋ ವೈರಲ್
ಸರ್ಕಾರದ ಆಸ್ತಿಯನ್ನು ಧ್ವಂಸ ಮಾಡುವವವರು ಹಾಗೂ ಅಕ್ರಮವಾಗಿ ಸರ್ಕಾರದ ಆಸ್ತಿಯನ್ನು ಒಳಗೆ ಹಾಕಿಕೊಂಡು ಮನೆ ಕಟ್ಟಿದವರು ಹಾಗೂ ಅಕ್ರಮ ವ್ಯವಹಾರಗಳಲ್ಲಿ ತೊಡಗಿ ಸಮಾಜದ ಸಾಮರಸ್ಯಕ್ಕೆ ಭೀತಿ ಉಂಟು ಮಾಡುತ್ತಿರುವವರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ (Uttar Pradesh) ಸರ್ಕಾರವೂ ನಿರ್ದಾಕ್ಷಿಣ್ಯವಾಗಿ ಬುಲ್ಡೋಜರ್ ಪ್ರಯೋಗ ಮಾಡುತ್ತಿದ್ದು, ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಇದೇ ಕಾರಣಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬುಲ್ಡೋಜರ್ ಬಾಬಾ ಎಂದು ಕರೆಯುತ್ತಿದ್ದಾರೆ.
ಹೀಗಾಗಿ ಯೋಗಿ ಆದಿತ್ಯನಾಥ್ ಫೋಟೋ ಹಾಗೂ ಬುಲ್ಡೋಜರ್ ಇರುವ ಟೀಶರ್ಟ್‌ಗೆ ಭಾರಿ ಡಿಮ್ಯಾಂಡ್ ಬಂದಿದೆ. ಯೋಗಿ ಹಾಗೂ ಬುಲ್ಡೋಜರ್ ಇರುವ ಟೀಶರ್ಟ್‌ಗೆ ಭಾರಿ ಡಿಮ್ಯಾಂಡ್ ಬಂದಿದೆ. ನಾನು ಇದುವರೆಗೆ ಇಂತಹ 100 ಟೀಶರ್ಟ್‌ಗಳನ್ನು ಸೇಲ್ ಮಾಡಿದ್ದೇನೆ. ಅಲ್ಲದೇ ಈ ಟೀಶರ್ಟ್ ನೀಡುವಂತೆ ಕೇಳಿ ಅನೇಕರು ಬೇಡಿಕೆ ಇರಿಸಿದ ಕಾರಣ ಮತ್ತಷ್ಟು ಟೀಶರ್ಟ್‌ಗೆ ಆರ್ಡರ್ ಮಾಡಿದ್ದೇನೆ. ಇತ್ತೀಚೆಗೆ ಬುಲ್ಡೋಜರ್‌ಗೂ ಭಾರೀ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ನಾವು ಮತ್ತಷ್ಟು ಟೀಶರ್ಟ್‌ಗೆ ಆರ್ಡರ್ ಮಾಡಿದ್ದೇವೆ. ಪ್ರತಿವರ್ಷವೂ ಯಾತ್ರೆಯ ವೇಳೆ ಟ್ರೆಂಡ್‌ಗೆ ತಕ್ಕಂತೆ ಟೀಶರ್ಟ್‌ಗೆ ಡಿಮಾಂಡ್ ಬರುತ್ತದೆ ಈ ಸಾರಿ ಬುಲ್ಡೋಜರ್ ಹಾಗೂ ಬಾಬಾ ಟೀಶರ್ಟ್‌ಗೆ ಡಿಮ್ಯಾಂಡ್ ಬಂದಿದೆ ಎಂದು ಟೀ ಶರ್ಟ್ ಶಾಪ್ ಮಾಲೀಕ ರಾಜೇಶ್ ಹೇಳಿದ್ದಾರೆ.
ಕೇದಾರನಾಥ ಪವರ್ ಫುಲ್ 'ಶಕ್ತಿ'ಧಾಮ: ತ್ರಿಕೋನ ಆಕಾರದ ಲಿಂಗದ ಮಹತ್ವ ಏನು?
ಜುಲೈ 4 ರಂದು ಪ್ರಾರಂಭವಾದ ಈ ಯಾತ್ರೆ ಆಗಸ್ಟ್ ಅಂತ್ಯದವರೆಗೆ ಮುಂದುವರೆಯಲಿದೆ. ಗಂಗಾ ನದಿಯ ಪವಿತ್ರ ನೀರನ್ನು ತರಲು ದೇಶದಾದ್ಯಂತದ ಭಕ್ತರು ಹಿಂದೂ ಯಾತ್ರಾ ಸ್ಥಳಗಳಾದ ಹರಿದ್ವಾರ, ಗೌಮುಖ ಮತ್ತು ಉತ್ತರಾಖಂಡದ ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ಗೆ ಪ್ರಯಾಣಿಸುತ್ತಾರೆ. ನಂತರ ಅಲ್ಲಿಂದ ನೀರು ತೆಗೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. 59 ದಿನಗಳ ಕಾಲ ಈ ಪವಿತ್ರ ಮಾಸವಿದ್ದು, ಜನ ತೀರ್ಥಕ್ಷೇತ್ರಗಳ ದರ್ಶನ ಪಡೆಯುತ್ತಾರೆ.