763 ಸಂಸದರ ಆಸ್ತಿ ಮೌಲ್ಯ 29,251 ಕೋಟಿ ರೂ.: ವರದಿ
ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರ ಒಟ್ಟು ಆಸ್ತಿ ಮೌಲ್ಯ 29,251 ಕೋಟಿ ರು.ನಷ್ಟಿದೆ. ಪ್ರತಿ ಸಂಸದರ ಸರಾಸರಿ ಆದಾಯ 38.5 ಕೋಟಿ ರು.ನಷ್ಟಿದೆ ಎಂದು ಎಡಿಆರ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರ ಒಟ್ಟು ಆಸ್ತಿ ಮೌಲ್ಯ 29,251 ಕೋಟಿ ರು.ನಷ್ಟಿದೆ. ಪ್ರತಿ ಸಂಸದರ ಸರಾಸರಿ ಆದಾಯ 38.5 ಕೋಟಿ ರು.ನಷ್ಟಿದೆ ಎಂದು ಎಡಿಆರ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು ಕಳೆದ ಚುನಾವಣೆ ಮತ್ತು ಉಪ ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿರುವ ಮಾಹಿತಿಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಎಡಿಆರ್ ಹೇಳಿದೆ. ಲೋಕಸಭೆ ಸಂಸದರ ಸರಾಸರಿ ಆಸ್ತಿ ಮೌಲ್ಯ 38.33 ಕೋಟಿ ರು. ಇದ್ದರೆ, ರಾಜ್ಯಸಭೆ ಸಂಸದರ ಸರಾಸರಿ ಆಸ್ತಿ 50.03 ಕೋಟಿ ರು.ನಷ್ಟಿದೆ’ ಎಂದು ವರದಿ ತಿಳಿಸಿದೆ.
ಅಲ್ಲದೇ ಬಿಜೆಪಿಯ (BJP) 385 ಸಂಸದರು 7,051 ಕೋಟಿ ರು. ಆಸ್ತಿ ಹೊಂದಿದ್ದಾರೆ. ಟಿಆರ್‌ಎಸ್‌ನ (TRS) 16 ಸಂಸದರು 6,136 ಕೋಟಿ ರು., ವೈಎಸ್‌ಆರ್‌ಪಿಯ (YSRP) 31 ಸಂಸದರು 4,766 ಕೋಟಿ ರು., ಕಾಂಗ್ರೆಸ್‌ನ 81 ಸಂಸದರು 3,169 ಕೋಟಿ ರು ಮತ್ತು ಆಪ್‌ನ 11 ಸಂಸದರು 1,318 ಕೋಟಿ ರು. ಆಸ್ತಿ ಹೊಂದಿದ್ದಾರೆ. ಹಾಗೆಯೇ ಅತಿ ಹೆಚ್ಚು ಆಸ್ತಿ ಹೊಂದಿರುವ ಸಂಸದರನ್ನು ಹೊಂದಿರುವ ರಾಜ್ಯದಲ್ಲಿ ತೆಲಂಗಾಣ (Telangana) (24 ಸಂಸದರು) ಮೊದಲ ಸ್ಥಾನದಲ್ಲಿದೆ. ತೆಲಂಗಾಣದ ಸಂಸದರು ಒಟ್ಟಾರೆ 262.26 ಕೋಟಿ ರು. ಆಸ್ತಿ ಹೊಂದಿದ್ದಾರೆ. 2ನೇ ಸ್ಥಾನದಲ್ಲಿ ಆಂಧ್ರಪ್ರದೇಶ (36 ಸಂಸದರು) ಇದ್ದು, ಇಲ್ಲಿನ ಸಂಸದರ ಒಟ್ಟು ಆಸ್ತಿ ಮೌಲ್ಯ 150.17 ಕೋಟಿ ರು. ಆಗಿದೆ. ಪಂಜಾಬ್(20 ಸಂಸದರು) 3ನೇ ಸ್ಥಾನದಲ್ಲಿದ್ದು, ಆಸ್ತಿ ಮೌಲ್ಯ 88.94 ಕೋಟಿ ರು. ಆಗಿದೆ ಎಂದು ವರದಿ ತಿಳಿಸಿದೆ.
ಭಾರತದ ಅತ್ಯಂತ ಶ್ರೀಮಂತ ಸಂಸದನ ಆಸ್ತಿ 39200 ಕೋಟಿ, ಬೃಹತ್ ಫಾರ್ಮಾ ಕಂಪೆನಿ ಮಾಲೀಕರೂ ಹೌದು!
763 ಸಂಸದರಲ್ಲಿ 53 ಮಂದಿ (ಶೇ.7ರಷ್ಟು) ಶತಕೋಟ್ಯಧಿಪತಿಗಳಾಗಿದ್ದಾರೆ. ಕರ್ನಾಟಕದ 39 ಸಂಸದರಲ್ಲಿ 3 (ಶೇ.8) ಮಂದಿಯ ಆಸ್ತಿ 100 ಕೋಟಿ ರು.ಗಿಂತ ಹೆಚ್ಚಿದೆ ಎಂದು ಎಡಿಆರ್ ಹೇಳಿದೆ.
ಸನಾತನ ಧರ್ಮದ ವಿರುದ್ಧ ಮಾತಾಡಿದವರ ಕಣ್ಣು, ನಾಲಿಗೆ ಕೀಳಲಾಗುವುದು: ಶೆಖಾವತ್
ಜೈಪುರ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ ಮತ್ತು ಕಣ್ಣುಗಳನ್ನು ಕಿತ್ತು ಹಾಕುತ್ತೇವೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಆಕ್ರೋಶ ಹೊರಹಾಕಿದ್ದಾರೆ. ಡಿಎಂಕೆ ನಾಯಕರಾದ ಉದಯನಿಧಿ ಸ್ಟಾಲಿನ್ ಮತ್ತು ಎ. ರಾಜಾ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಕುಷ್ಟರೋಗಕ್ಕೆ ಹೋಲಿಸಿ ಅದನ್ನು ನಿರ್ಮೂಲನೆ ಮಾಡುವ ಕೀಳು ಹೇಳಿಕೆ ನೀಡಿದ್ದಕ್ಕೆ ಪ್ರತ್ಯುತ್ತರವಾಗಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಸಿಂಗ್ ಅವರ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಈ ವೇಳೆ ಸಿಂಗ್ "ಸನಾತನ ಧರ್ಮದ ವಿರುದ್ಧ ಮಾತನಾಡಿ ಯಾರೂ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ನಾನು ಚಾಲೆಂಜ್ ಮಾಡುತ್ತೇನೆ. 2,000 ವರ್ಷಗಳ ಹಿಂದಿನಿಂದ ಸನಾತನ ಧರ್ಮವನ್ನು ನಾಶ ಮಾಡಲು ಅಲ್ಲಾವುದ್ದೀನ್ ಖಿಲ್ಜಿಯಂತಹವರು ಅನಕರು ಪ್ರಯತ್ನಿಸಿದರು. ಆದರೆ ನಮ್ಮ ಪೂರ್ವಜರು ಸಮರ್ಥರಾಗಿದ್ದರು ಮತ್ತು ಧರ್ಮವನ್ನು ರಕ್ಷಿಸಿದರು" ಎಂದಿದ್ದಾರೆ.
ಸಂಸದರ ಆಸ್ತಿ ಮೌಲ್ಯ ಏರಿಕೆ: ರಮೇಶ್ ಜಿಗಜಿಗಣಿ ನಂ. 1, ಪಿ.ಸಿ. ಮೋಹನ್ ನಂ. 2..!
ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.83ಕ್ಕೆ ಇಳಿಕೆ
ನವದೆಹಲಿ: ದೇಶದಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆ ಇಳಿಸುವಿಕೆಯಿಂದಾಗಿ ದೇಶದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.6.83ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜುಲೈ ತಿಂಗಳಿನಲ್ಲಿ ಶೇ.7.44ರಷ್ಟಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲಿನ ಬೆಲೆ ಕಡಿತಗೊಳಿಸಲು ಕ್ರಮ ಕೈಗೊಂಡ ಪರಿಣಾಮ ಆಹಾರ ಹಣದುಬ್ಬರವು ಜುಲೈ ತಿಂಗಳಿನ ಶೇ.11.54 ನಿಂದ ಶೇ.9.94ಕ್ಕೆ ಇಳಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಸಾಲಿನ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಶೇ.5.4ರಷ್ಟು ಇರಲಿದೆ ಎಂದು ಅಂದಾಜಿಸಿದೆ.