ಭಾರತದ ಅತ್ಯಂತ ಶ್ರೀಮಂತ ಸಂಸದನ ಆಸ್ತಿ 39200 ಕೋಟಿ, ಬೃಹತ್ ಫಾರ್ಮಾ ಕಂಪೆನಿ ಮಾಲೀಕರೂ ಹೌದು!
ರಾಜಕೀಯಕ್ಕೆ ಇಳಿದವರು ದುಡ್ಡು ಮಾಡದೇ ಇರ್ತಾರಾ. ಪಂಚಾಯತ್ ಅಧ್ಯಕ್ಷರಿಂದ ತೊಡಗಿ ಎಂಪಿ, ಮಿನಿಸ್ಟರ್ ಎಲ್ಲರೂ ದುಡ್ಡು ಮಾಡ್ತಾರೆ. ಆದ್ರೆ ಭಾರತದ ಅತ್ಯಂತ ಶ್ರೀಮಂತ ಸಂಸದರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಅವರು ಉತ್ತರ ಭಾರತದವರಲ್ಲ, ದಕ್ಷಿಣ ಭಾರತದವರು ಅನ್ನೋದು ಅಚ್ಚರಿ ಪಡುವ ವಿಷ್ಯ.
ರಾಜಕೀಯದಲ್ಲಿ ಅಧಿಕಾರಕ್ಕೇರಿದವರು ಅದೆಷ್ಟು ದೊಡ್ಡ ಹುದ್ದೆಯಾಗಿರಲಿ ಅಥವಾ ಸಣ್ಣ ಹುದ್ದೆಯಾಗಿರಲಿ ಸರಿಯಾಗಿ ದುಡ್ಡು ಮಾಡ್ಕೊಳ್ತಾರೆ. ಕೋಟಿ ಕೋಟಿ ಸಂಪತ್ತು ಶೇಖರಿಸುತ್ತಾರೆ. ಹೀಗಿರುವಾಗ ಭಾರತದ ಅತ್ಯಂತ ಶ್ರೀಮಂತ ಸಂಸದರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಅವರು ಉತ್ತರ ಭಾರತದವರಲ್ಲ, ದಕ್ಷಿಣ ಭಾರತದವರು ಅನ್ನೋದು ಅಚ್ಚರಿ ಪಡುವ ವಿಷ್ಯ.
ರಾಜ್ಯಸಭಾ ಸದಸ್ಯ ಬಿ.ಪಾರ್ಥ ಸಾರಧಿ ರೆಡ್ಡಿ ಕಳೆದ ವರ್ಷ ದೇಶದ ಅತ್ಯಂತ ಶ್ರೀಮಂತ ಸಂಸತ್ ಸದಸ್ಯ (MP) ಆಗಿದ್ದರು. ರೆಡ್ಡಿ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಸದಸ್ಯರಾಗಿದ್ದಾರೆ.ಹೆಟೆರೊ ಗ್ರೂಪ್ ಆಫ್ ಕಂಪನೀಸ್‌ನಲ್ಲಿ ಅಧ್ಯಕ್ಷರು ಮತ್ತು ಮುಖ್ಯಸ್ಥರೂ ಆಗಿದ್ದಾರೆ.
ಈ ಕಂಪೆನಿಯಿಂದಲೇ ಬೃಹತ್ ಸಂಪತ್ತನ್ನು ಗಳಿಸಿದ್ದಾರೆ. ಕಂಪನಿಯನ್ನು 1993ರಲ್ಲಿ ಸ್ಥಾಪಿಸಲಾಯಿತು ಮತ್ತು ಕಳೆದ ಮೂರು ದಶಕಗಳಲ್ಲಿ ಫಾರ್ಮಾ ವಿಭಾಗದಲ್ಲಿ ಈ ಕಂಪೆನಿ ಮುಂಚೂಣಿಯಲ್ಲಿದೆ.
ರೆಡ್ಡಿ ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸಿಂಥೆಟಿಕ್ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಮತ್ತು ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪಡೆದಿದ್ದಾರೆ. ಸಂಶ್ಲೇಷಿತ ರಸಾಯನಶಾಸ್ತ್ರದಲ್ಲಿ ಅವರ ಪರಿಣತಿಯು ಹೆಟೆರೊ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಿದೆ.
ಜಾಗತಿಕವಾಗಿ ಉನ್ನತ ಜೆನೆರಿಕ್ API ಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯು ಆಂಟಿ-ರೆಟ್ರೊವೈರಲ್ ಔಷಧಿಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
ಡಾ ರೆಡ್ಡಿ ಅವರು ರಾಜ್ಯಸಭೆಗೆ ನಾಮನಿರ್ದೇಶನವನ್ನು ಸಲ್ಲಿಸುವಾಗ 3900 ಕೋಟಿ ರೂ.ಗೂ ಹೆಚ್ಚು ವೈಯಕ್ತಿಕ ಆಸ್ತಿಯನ್ನು ಘೋಷಿಸಿದರು. ಅವರ ಕುಟುಂಬ ಸದಸ್ಯರ ಆಸ್ತಿಯೂ ಸೇರಿದಾಗ ಒಟ್ಟು ಮೌಲ್ಯ ಸುಮಾರು 5,300 ಕೋಟಿ ರೂ. ಆಗಿದೆ.
IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಹೈದರಾಬಾದ್ ಮೂಲದ ಬಿ ಪಾರ್ಥ ಸಾರಧಿ ರೆಡ್ಡಿ ಮತ್ತು ಕುಟುಂಬವು ಫಾರ್ಮಾ ಉದ್ಯಮಿಗಳಲ್ಲಿ 4ನೇ ಶ್ರೀಮಂತ ಕುಟುಂಬವಾಗಿದ್ದು, ಒಟ್ಟು ಸಂಪತ್ತು ರೂ 39,200 ಕೋಟಿ ಎಂದು ಅಂದಾಜಿಸಿದೆ. ಇದು ಕಳೆದ ವರ್ಷದಲ್ಲಿ 50 ಪ್ರತಿಶತದಷ್ಟು ಹೆಚ್ಚಳವಾಗಿದೆ.