Asianet Suvarna News Asianet Suvarna News

ಒಂದೇ ಫ್ಲ್ಯಾಟ್ , ಪಾರ್ಕಿಂಗ್ ಇಲ್ಲದಿರುವವರು 4 ರಿಂದ 5 ಕಾರು ಬಳಸುವಂತಿಲ್ಲ; ಹೈಕೋರ್ಟ್!

  • ಪಾರ್ಕಿಂಗ್ ಸ್ಥಳದ ಕೊರತೆಗೆ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್
  • ಒಂದು ಫ್ಲ್ಯಾಟ್ ಇದ್ದವರು 4 ರಿಂದ 5 ಕಾರು ಬಳಸಲು ಅನುಮತಿ ಯಾಕೆ?
  • ಪಾರ್ಕಿಂಗ್ ಇದ್ದರೆ ಮಾತ್ರ ಅನುಮತಿ ಕೊಡಿ ಎಂದು ಕೋರ್ಟ್ ಸೂಚನೆ
Authorities not allow citizens to own multiple vehicles if they didnt have parking space Bombay High Court ckm
Author
Bengaluru, First Published Aug 13, 2021, 9:03 PM IST
  • Facebook
  • Twitter
  • Whatsapp

ಮುಂಬೈ(ಆ.13): ವಾಹನ ದಟ್ಟಣೆ, ಪಾರ್ಕಿಂಗ್ ಕೊರತೆ ಸಮಸ್ಯೆಗಳಿಗೆ ಮುಂಬೈ ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. ಮುಂಬೈ ನಗರದಲ್ಲಿ ಒಂದು ಫ್ಲ್ಯಾಟ್ ಹೊಂದಿದವರು 4 ರಿಂದ 5 ಕಾರು ಬಳಸುತ್ತಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದವರೂ ಹೆಚ್ಚಿನ ಕಾರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಈ ಸಮಸ್ಯೆಗಳಾಗುತ್ತಿದೆ. ಹೀಗಾಗಿ ಒಂದು ಫ್ಲ್ಯಾಟ್ ಹೊಂದಿದವರು 4 ರಿಂದ 5 ಕಾರುಗಳಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ಚಾಟಿ ಬೀಸಿದೆ.

ವರದಕ್ಷಿಣೆಯಾಗಿ ಬಂದ ರೈಲನ್ನು ಪಾರ್ಕಿಂಗ್ ಇಲ್ಲ ಎಂದು ನಿರಾಕರಿಸಿದ ವರ; ವಿಡಿಯೋ ವೈರಲ್!

ನಿವಾಸಿಗಳಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲದಿದ್ದರೆ ಅವರಿಗೆ ಖಾಸಗಿ ಕಾರುಗಳನ್ನು ಖರೀದಿಗೆ ಅವಕಾಶ ನೀಡಬಾರದು. ಅದರಲ್ಲೂ 4 ರಿಂದ 5 ಕಾರುಗಳಿಗೆ ಅವಕಾಶವೇ ಇರಬಾರದು ಎಂದು ಬಾಂಬೆ ಹೈಕೋರ್ಟ್ ಚೀಫ್ ಜಸ್ಟೀಸ್ ದೀಪಾಂಕರ್ ದತ್ತ ಹಾಗೂ ಜಸ್ಟೀಸ್ ಜಿಎಸ್ ಕುಲಕರ್ಣಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಸೂಚನೆ ನೀಡಿದೆ.

ಕಾರ್ಯಕರ್ತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸರ್ಕಾರಕ್ಕೆ ಈ ಸೂಚನೆ ನೀಡಿದೆ. ತಮ್ಮ ತಮ್ಮ ಫ್ಲ್ಯಾಟ್‌ನಲ್ಲಿ ಪಾರ್ಕಿಂಗ್ ಸೌಲಭ್ಯಕ್ಕೆ ಅನುಗುಣವಾಗಿ ಕಾರು ಖರೀದಿಗೆ ಅವಕಾಶ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದವರಲ್ಲಿ ನಾಲ್ಕೈದು ಕಾರುಗಳನ್ನು ಖರೀದಿಸುವುದರಿಂದ ದಾರಿಯಲ್ಲಿ ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ನಗರದಲ್ಲಿ ಪಾರ್ಕಿಂಗ್ ಕೊರತೆ, ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮನೆ ಮುಂದೆ, ರಸ್ತೆ ಬದಿ ವಾಹನ ನಿಲ್ಲಿಸಿದರೆ ಪಾರ್ಕಿಂಗ್ ಚಾರ್ಜ್; ಬೆಂಗಳೂರಿಗರಿಗೆ ಮತ್ತೊಂದು ಶಾಕ್!

ಒಂದು ಕುಟುಂಬಕ್ಕೆ ಖರೀದಿಸುವ ಶಕ್ತಿ ಇದೆ ಎಂದು 4 ರಿಂದ 5 ಕಾರು ಖರೀದಿಸಲು ಅವಕಾಶ ನೀಡಲು ಸಾಧ್ಯವಿದೆ. ಕಾರು ಖರೀದಿಸುವ ವ್ಯಕ್ತಿಗೆ ಪಾರ್ಕಿಂಗ್ ವ್ಯವಸ್ಥೆ ಇದೆಯೇ ಎಂದು ಪರಿಶೀಲಿಸಬೇಕು. ಇದು ಸರ್ಕಾರದ ಜವಾಬ್ದಾರಿ ಎಂದು ಕೋರ್ಟ್ ಹೇಳಿದೆ.

ವಾಹನ ಪಾರ್ಕಿಂಗ್ ಕುರಿತು ಸರ್ಕಾರ ಇದುವರೆಗೂ ಸೂಕ್ತ ನಿಯಮ, ಮಾರ್ಗಸೂಚಿ ಜಾರಿ ಮಾಡಿಲ್ಲ. ಈ ಕುರಿತು ಯಾವ ಯೋಜನೆಯೂ ಸರ್ಕಾರದ ಬಳಿ ಇಲ್ಲ. ಹಣವಿದೆ ಎಂದು ಬೇಕಾದ ರೀತಿಯಲ್ಲಿ ಬದಕಲು ಸಾಧ್ಯವಿಲ್ಲ. ಇದರಿಂದ ಇತರರಿಗೆ ಸಮಸ್ಯೆಯಾಗುತ್ತಿದೆ ಅನ್ನೋ ಅರಿವು ಸರ್ಕಾರಕ್ಕಿಲ್ಲವೇ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.

ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಸರ್ಕಾರ ಇದುವರೆಗೂ ಯಾವ ಪರಿಹಾರ ಸೂತ್ರವನ್ನೂ ಕಂಡುಕೊಂಡಿಲ್ಲ. ಶಿಸ್ತುಬದ್ಧ ನೀತಿ ಇಲ್ಲ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಇಲ್ಲವೇ ಇಲ್ಲ. ಹೀಗಾಗಿ ಶೀಘ್ರವೇ ಈ ಕುರಿತು ಕಟ್ಟು ನಿಟ್ಟಿನ ನೀತಿ ಜಾರಿಗೊಳಿಸಬೇಕು ಎಂದು ಕೋರ್ಟ್ ಹೇಳಿದೆ.

Follow Us:
Download App:
  • android
  • ios