ವರದಕ್ಷಿಣೆ ಪಡೆಯುವುದು ಅಪರಾಧವಾಗಿದೆ. ಆದರೆ ಈಗಲೂ ಮಗಳ ಕೈಹಿಡಿಯುವ ವರನಿಗೆ ಉಡುಗೊರೆ ನೀಡುವುದು ಸಾಾಮಾನ್ಯ. ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉಡುಗೊರೆ ನೀಡುತ್ತಾರೆ. ಇಲ್ಲೊಬ್ಬ ಅಸಾಮಿಗೆ ಮಾವ ರೈಲನ್ನೇ ಉಡುಗೊರೆಯಾಗಿ ನೀಡಿದ್ದರಂತೆ. ಆದರೆ ಪಾರ್ಕಿಂಗ್ ಕಾರಣ ರೈಲು ವರದಕ್ಷಿಣೆಯಾಗಿ ಪಡೆಯಲು ನಿರಾಕರಿಸಿದ್ದಾನೆ. ಈ ಕುರಿತ ವಿಡಿಯೋ ಒಂದು ವೈರಲ್ ಆಗಿದೆ.

ಬೆಂಗಳೂರು(ಏ.30):  ಮದುವೆಗೆ ಸ್ನೇಹಿತರು, ಕುಟುಂಬಸ್ಥರು ಹಲವು ಉಡುಗೊರೆ ನೀಡುತ್ತಾರೆ. ಆದರೆ ಮಗಳ ಕೈಹಿಡಿಯುವ ವರನಿಗೆ ಮಾವ ನೀಡುವ ಉಡುಗೊರೆ ವಿಶೇಷವಾಗಿದೆ. ಕಾರಣ ಈ ಉಡುಗೊರೆ ಮೌಲ್ಯದಲ್ಲೂ, ಬದುಕಿನಲ್ಲೂ ಪ್ರಾಮುಖ್ಯತೆ ಪಡೆದಿರುತ್ತದೆ. ಆದರೆ ಈ ಆಸಾಮಿ ಮಾವ ನೀಡಲು ಮುಂದಾಗಿದ್ದ ಉಡುಗೊರೆಯನ್ನೇ ಬೇಡ ಎಂದಿದ್ದಾನೆ. ಕಾರಣ ಪಾರ್ಕಿಂಗ್ ಸಮಸ್ಯೆ.

ಮದುವೆಯಾಗೋಣ ಬಾ ಎಂದ ನಕಲಿ ಮೇಜರ್, 17 ಮಹಿಳೆಯರಿಗೆ 6 ಕೋಟಿ ರೂ. ವಂಚನೆ!

ಅಷ್ಟಕ್ಕೂ ಈತನಿಗೆ ಮಾವ ನೀಡಲು ರೆಡಿಯಾಗಿದ್ದ ಉಡುಗೊರೆ ಸಾಮಾನ್ಯದಲ್ಲ, ರೈಲು. ಹೌದು. ರೈಲು ಉಡುಗೊರೆ ನೀಡಲು ಮುಂದಾದ ಮಾವನಿಗೆ ವರ ಬೇಡವೆ ಬೇಡ ಎಂದಿದ್ದಾನೆ. ಕಾರಣ ಸಣ್ಣ ವಾಹನಗಳಾದರೆ ಓಡಿಸಬಹುದಿತ್ತು, ಆದರೆ ರೈಲು ಚಲಾಯಿಸಲು ಬರುವುದಿಲ್ಲ, ಜೊತೆಗೆ ಪಾರ್ಕಿಂಗ್ ಸಮಸ್ಯೆ ಕಾರಣ ವರ ಉಡುಗೊರೆ ಬೇಡ ಎಂದಿದ್ದಾನೆ. 

ಅಷ್ಟಕ್ಕೂ ಈ ಮಾತನ್ನೂ ಈತನೇ ಹೇಳಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಎಲ್ಲಿ ರೆಕಾರ್ಡ್ ಮಾಡಲಾಗಿದೆ? ಈತನ ಕುರಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈತನ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ.

Scroll to load tweet…

ಈ ರೀತಿ ಒಂದು ಸುಳ್ಳನ್ನು ತಲೆಮೇಲೆ ಹೊಡೆದಂತೆ ಹೇಳುತ್ತಿರುವ ಈತನ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.