ಸರಪಂಚ್‌ ಹುದ್ದೆ 2 ಕೋಟಿ ರೂ,ಗೆ ಹರಾಜು ಆಗಿದೆ.  ಬಿಜೆಪಿ ನಾಯಕ 2 ಕೋಟಿ. ರು. ಚೆಕ್‌ ಮೂಲಕ ಬಿಡ್ಡಿಂಗ್‌ ಮಾಡಿದ್ದಾರೆ.

ಚಂಡಿಗಢ: ಪಂಜಾಬ್‌ನಲ್ಲಿ ಅ.15ಕ್ಕೆ ಗ್ರಾಮ ಪಂಚಾಯತ್‌ ಚುನಾವಣೆಗಳು ನಡೆಯಲಿದ್ದು, ಸರಪಂಚ್‌ ಹುದ್ದೆಗೆ ಭರ್ಜರಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ರಾಜ್ಯದ ಹಲವು ಗ್ರಾಮಗಳಲ್ಲಿ ಅತಿ ಹೆಚ್ಚು ಹಣವನ್ನು ಬಿಡ್‌ ಮಾಡಿ ಗೆದ್ದವರನ್ನು ಆಯ್ಕೆ ಮಾಡುವ ಸಂಪ್ರದಾಯ ಹಲವು ವರ್ಷಗಳಿಂದ ಪಾಲನೆಯಾಗುತ್ತಿದೆ. ಹೀಗೆ ನೀಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಲಾಗುವುದು. ಇದೇ ಮಾದರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಹರ್ದೋವಲ್‌ ಕಲಾನ್‌ ಎಂಬ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ರು. ವರೆಗೂ ಬಿಡ್ಡಿಂಗ್‌ ನಡೆದಿದೆ. ಸ್ಥಳೀಯ ಬಿಜೆಪಿ ನಾಯಕ ಆತ್ಮಸಿಂಗ್‌ ಅವರು 2 ಕೋಟಿ. ರು. ಚೆಕ್‌ ಮೂಲಕ ಬಿಡ್ಡಿಂಗ್‌ ಮಾಡಿದ್ದಾರೆ. ಬಠಿಂಡಾದ ಗೆಹ್ರಿ ಬಟ್ಟಾರ್‌ ಗ್ರಾಮದಲ್ಲಿ ಇದೇ ರೀತಿಯ ಬಿಡ್ಡಿಂಗ್‌ ನಡೆಸಿದ್ದು, ಆಕಾಕ್ಷಿಂಗಳಲ್ಲಿ ಒಬ್ಬ 60 ಲಕ್ಷ ರು. ಬಿಡ್‌ ಮಾಡಿದ್ದಾರೆ.

ದೇಗುಲಗಳಿಂದ ಸಾಯಿಬಾಬಾ ಪ್ರತಿಮೆ ತೆರವು; ಕಾಶೀಲಿ ಶಿವನಿಗಷ್ಟೇ ಪೂಜೆ ಎಂದ ಸನಾತನ ದಳ

ಈ ಹರಾಜು ವಿಧಾನವನ್ನು ಕೆಲ ರಾಜಕೀಯ ಮುಖಂಡರು ಖಂಡಿಸಿದ್ದು, ಪ್ರಜಾಪ್ರಭುತ್ವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹರಾಜಿನ ಆಯೋಜಕರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ತಿರುಪತಿ ಲಡ್ಡು ವಿವಾದ: ಆಂಧ್ರ ಸರ್ಕಾರಕ್ಕೆ ಸುಪ್ರೀಂ ಚಾಟಿ ಬೀಸಿದ ಬೆನ್ನಲ್ಲೇ ಎಸ್‌ಐಟಿ ತನಿಖೆಗೆ ತಡೆ