Asianet Suvarna News Asianet Suvarna News

ತ್ರಯಂಬಕೇಶ್ವರ ದೇಗುಲಕ್ಕೆ ನುಗ್ಗಲು ಮುಸ್ಲಿಮರ ಯತ್ನ: ತನಿಖೆಗೆ ಮಹಾ ಡಿಸಿಎಂ ಫಡ್ನವೀಸ್‌ ಆದೇಶ

  • ತ್ರಯಂಬಕೇಶ್ವರ ದೇಗುಲಕ್ಕೆ ನುಗ್ಗಲು ಮುಸ್ಲಿಮರ ಯತ್ನ
  • ಜ್ಯೋತಿರ್ಲಿಂಗಕ್ಕೆ ಚಾದರ ಸಮರ್ಪಿಸಲು ಪ್ರಯತ್ನ
  • ಗುಂಪನ್ನು ತಡೆದ ಭದ್ರತಾ ಸಿಬ್ಬಂದಿ
  • ತನಿಖೆಗೆ ಮಹಾ ಡಿಸಿಎಂ ಫಡ್ನವೀಸ್‌ ಆದೇಶ
  • ನಾಸಿಕ್‌ನಲ್ಲಿ ಬಿಗಿ ಭದ್ರತೆ, ಪರಿಸ್ಥಿತಿ ಶಾಂತ
Attempt Muslims to break into Trimbakeshwar temple in nasik at maharashtra Fadnavis orders SIT probe rav
Author
First Published May 17, 2023, 3:01 AM IST

ನಾಸಿಕ್‌ (ಮೇ.17): ಮುಸ್ಲಿಂ ಸಮುದಾಯದ ಜನರ ಗುಂಪೊಂದು ‘ಚಾದರ’ ಅರ್ಪಿಸುವ ಉದ್ದೇಶದಿಂದ ಪ್ರಸಿದ್ಧ ತ್ರಯಂಬಕೇಶ್ವರ ದೇವಸ್ಥಾನ ಒಳಗೆ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ. ಇವರನ್ನು ಭದ್ರತಾ ಸಿಬ್ಬಂದಿ ತಡೆದು ಯತ್ನ ವಿಫಲಗೊಳಿಸಿದ್ದಾರೆ. ಇದರ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.

ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ದೇವಾಲಯವನ್ನು ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ. ಆದಾಗ್ಯೂ ಶನಿವಾರ ಇವರು ಪ್ರವೇಶಿಸಲು ಯತ್ನಿಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಮಂಗ್ಳೂರು ದೇಗುಲಕ್ಕೆ ನುಗ್ಗಿದ ಮೂವರು ಮುಸ್ಲಿಂ ಯುವಕರು: ಭದ್ರತಾ ಆತಂಕ!

ಘಟನೆಯನ್ನು ಗಮನಿಸಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌( deputy chief minister Devendra Fadnavis), ದೇವಾಲಯಕ್ಕೆ ಬಲವಂತವಾಗಿ ನುಗ್ಗಲು ಗುಂಪು ಯತ್ನಿಸಿದ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಆದೇಶಿಸಿದ್ದಾರೆ ಹಾಗೂ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಶ್ರೇಣಿಯ ಅಧಿಕಾರಿಯೊಬ್ಬರು ಎಸ್‌ಐಟಿಯ ಮುಖ್ಯಸ್ಥರಾಗಿರುತ್ತಾರೆ.

ಇದಲ್ಲದೆ ಕಳೆದ ವರ್ಷ ನಡೆದಿದ್ದ ಇಂಥದ್ದೇ ಇನ್ನೊಂದು ಘಟನೆಯ ತನಿಖೆಗೂ ಆದೇಶಿಸಲಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ(), ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಆಡಳಿತದ ಜವಾಬ್ದಾರಿ. ಆದರೆ ಜನರು ಸಹ ಸಹಕರಿಸಬೇಕು. ಪ್ರತಿಯೊಂದು ಸಮುದಾಯದ ಜನರು ಮುಂದೆ ಬಂದು ಶಾಂತಿ ಕಾಪಾಡಬೇಕು ಎಂದಿದ್ದಾರೆ.

ಸಂಕೀರ್ತನಾ ಯಾತ್ರೆ ವೇಳೆ ಮಸೀದಿಗೆ ನುಗ್ಗಲು ಯತ್ನ, ಪೊಲೀಸರ ತಡೆ

ಈ ನಡುವೆ, ತ್ರಯಂಬಕೇಶ್ವರ ದೇವಸ್ಥಾನದ ಟ್ರಸ್ವ್‌ ಕೂಡ ನಾಸಿಕ್‌ ಪೊಲೀಸ್‌ ಆಯೋಗಕ್ಕೆ ಪತ್ರ ಬರೆದು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ನಡುವೆ, ನಾಸಿಕ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ಹೇಳಿದ್ದಾರೆ.

Follow Us:
Download App:
  • android
  • ios