ಸೋಮನಾಥ ದೇವಾಲಯದಲ್ಲಿನ ಬಹು ಯೋಜನೆ ಉದ್ಘಾಟಿಸಿದ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ ಮೋದಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ದಾಳಿ ಬಳಿಕ ಮಹತ್ವ ಪಡೆದ ಮೋದಿ ಹೇಳಿಕೆ

ನವದೆಹಲಿ(ಆ.20): ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿನ ಬಹು ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ನೆರವೇರಿಸಿದ್ದಾರೆ. ಈ ವೇಳೆ ಸೋಮನಾಥ ದೇವಾಲಯದ ಮೇಲೆ ನಡೆದ ಸತತ ದಾಳಿ ಬಳಿಕವೂ ದೇವಾಲಯ ಅದೇ ಗತವೈಭವದಲ್ಲಿ ಎದ್ದು ನಿಂತಿದೆ. ಇದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಅಫ್ಘಾನಿಸ್ತಾನ ನಿರಾಶ್ರಿತರಿಗೆ ನೆರವಾಗಿ: ಮೋದಿ ಮನವಿ!

ಮೋದಿ, ಸೋಮನಾಥ ವಾಯುವಿಹಾರ, ಸೋಮನಾಥ ಪ್ರದರ್ಶನ ಕೇಂದ್ರ ಮತ್ತು ಹಳೆಯ (ಜುನಾ) ಸೋಮನಾಥ ದೇವಾಲಯದ ಪುನರ್ನಿರ್ಮಾಣ ಯೋಜನೆಗಳ ಉದ್ಘಾಟನೆ ಮಾಡಿದರು. ಇದೇ ವೇಳೆ ಮೋದಿ ಶ್ರೀ ಪಾರ್ವತಿ ದೇವಾಲಯದ ಶಿಲಾನ್ಯಾಸವನ್ನೂ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಪಾಲ್ಗೊಂಡಿದ್ದರು.

Scroll to load tweet…

ಸೋಮನಾಥ ದೇವಾಲಯದ ಬಹುಯೋಜನೆ ಉದ್ಘಾಟಿಸಿ ಮಾತನಾಡಿದ ಮೋದಿ, ದೇವಾಲಯದ ಮೇಲೆ ಹಲವು ದಾಳಿಗಳು ನಡೆದಿದೆ. ವಿಗ್ರಹಗಳನ್ನು ನಾಶ ಮಾಡಲಾಯಿತು. ಹಲವು ವಿಗ್ರಹಗಳನ್ನು ದಾಳಿಕೋರರು ಕೊಂಡೊಯ್ದರು. ದೇವಸ್ಥಾನ ಅಪವಿತ್ರಗೊಳಿಸಲಾಗಿತ್ತು. ಸಂಪೂರ್ಣ ದೇವಾಲಯವನ್ನೇ ನಾಶಮಾಡು ಪ್ರಯತ್ನ ಹಲವು ಬಾರಿ ನಡೆದಿದೆ. ಆದರೆ ಪ್ರತಿ ಭಾರಿ ಸೋಮನಾಥ ಮಂದಿರ ಹಳೇ ಗತವೈಭದಲ್ಲಿ ಎದ್ದು ನಿಂತಿದೆ. ಹೀಗಾಗಿ ಭಯೋತ್ಪಾದನೆ, ದಾಳಿಕೋರರ ಪ್ರಾಬಲ್ಯ ಶಾಶ್ವತವಲ್ಲ ಎಂದು ಮೋದಿ ಹೇಳಿದ್ದಾರೆ.

Scroll to load tweet…

ಮೋದಿ ಇಲ್ಲಾಂದ್ರೆ ಓಡುತ್ತಿರೋ ಅಫ್ಘಾನಿಗಳ ಸ್ಥಾನದಲ್ಲಿ ನಾವೂ ಇರಬಹುದು: ಕಂಗನಾ

ಆಫ್ಘಾನಿಸ್ತಾನದಲ್ಲಿನ ತಾಲಿಬಾನ್ ದಾಳಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಈ ಮಾತುಗಳನ್ನು ಹೇಳಿದ್ದಾರೆ. ಸೋಮನಾಥ ದೇವಾಯಲ ಪ್ರತಿ ದಾಳಿಯನ್ನು ಎದುರಿಸಿ ಎದ್ದು ನಿಂತಿದೆ. ಇದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಮೋದಿ ಹೇಳಿದ್ದಾರೆ. 

ದಾಳಿಗಳಿಂದ ಸಂಪೂರ್ಣ ನಾಶವಾಗಿದ್ದ ಸೋಮನಾಥ ದೇವಾಲಯದ ಪ್ರಾಚೀನ ವೈಭವದ ಪುನರುಜ್ಜೀವನಕ್ಕಾಗಿ ಅದಮ್ಯ ಇಚ್ಛಾ ಶಕ್ತಿಯನ್ನು ತೋರಿಸಿದ ಸರ್ದಾರ್ ಪಟೇಲ್‌ಗೆ ಮೋದಿ ಗೌರವ ಸಲ್ಲಿಸಿದರು. ಸ್ವತಂತ್ರ ಭಾರತದಲ್ಲಿ ಭಾರತದ ಪರಂಪರೆ, ಭಕ್ತಿ ಕೇಂದ್ರವನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡಿದರು. ಇದೀಗ 'ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಸರ್ದಾರ್ ಪಟೇಲ್ ಪ್ರಯತ್ನಗಳನ್ನು ಮುಂದುವರಿಸವು ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಠ ಎಂದು ಮೋದಿ ಹೇಳಿದರು.

Scroll to load tweet…

ವಿಶ್ವನಾಥನಿಂದ ಸೋಮನಾಥದವರೆಗೆ ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ ಲೋಕಮಾತಾ ಅಹಲ್ಯಾಬಾಯಿ ಹೋಲ್ಕರ್ ಅವರನ್ನು ಪ್ರಧಾನಮಂತ್ರಿ ಸ್ಮರಿಸಿದರು. ಇದೇ ವೇಳೆ ಧಾರ್ಮಿಕ ಪ್ರವಾಸೋದ್ಯಮದಲ್ಲಿ ನಾವು ಹೊಸ ಸಾಧ್ಯತೆಗಳನ್ನು ಹುಡುಕುವುದು, ತೀರ್ಥಯಾತ್ರೆ ಮತ್ತು ಸ್ಥಳೀಯ ಆರ್ಥಿಕತೆಯ ನಡುವಿನ ಸಂಬಂಧವನ್ನು ಬಲಪಡಿಸಬೇಕಾಗಿದೆ ಎಂದರು.