ಮೋದಿ ಇಲ್ಲಾಂದ್ರೆ ಓಡುತ್ತಿರೋ ಅಫ್ಘಾನಿಗಳ ಸ್ಥಾನದಲ್ಲಿ ನಾವೂ ಇರಬಹುದು: ಕಂಗನಾ
- ತಾಲೀಬಾನ್ ಕುರಿತು ಕಂಗನಾ ರಣಾವತ್ ಪ್ರತಿಕ್ರಿಯೆ
- ಮೋದಿ ಇಲ್ಲಾಂದ್ರೆ ಅಫ್ಘಾನಿಗಳ ಸ್ಥಳದಲ್ಲಿ ನಾವೂ ಇರಬಹುದು ಎಂದ ನಟಿ
ಅಫ್ಘಾನ್ ತಾಲಿಬಾನಿಗಳ ವಶಕ್ಕೆ ಬಂದ ನಂತರ ಅಲ್ಲಿನ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತಾಲಿಬಾನಿಗಳ ಕ್ರೂರತೆ, ನಾಗರಿಕ ಕಷ್ಟದ ವಿಡಿಯೋಗಳು ಮನ ಕಲಕುವಂತಿದೆ. ಈ ಬಗ್ಗೆ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಬೆಳವಣಿಗೆ ನಡೆದಾಗಲೂ ಮೊದಲು ಪ್ರತಿಕ್ರಿಯಿಸೋ ನಟಿ ಅಫ್ಘಾನಿಸ್ತಾನದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಫ್ಘಾನ್ ನಾಗರಿಕರು ತಪ್ಪಿಸಿಕೊಳ್ಳಲು ಹೆಣಗಾಡುವ ಬಹಳಷ್ಟು ಚಿತ್ರಣಗಳು ನೆಟ್ಟಿಗರ ಮನಮುಟ್ಟುವಂತಿದೆ.
ಇದನ್ನು ನೋಡಿ. ಪಾಕಿಸ್ತಾನವು ತಾಲಿಬಾನಿಗಳನ್ನು ಪೋಷಿಸುತ್ತದೆ. ಅಮೆರಿಕವು ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡಿದೆ ಎಂಬುದನ್ನು ನೆನಪಿಸಿಕೊಳ್ಳಿ, ತಾಲಿಬಾನಿಗಳು ನಿಮಗೆ ತುಂಬಾ ಹತ್ತಿರವಾಗಿದ್ದಾರೆ. ಈಗ ನೋಡಿ.. ಮೋದಿ ಇಲ್ಲದಿದ್ದರೆ ನಾಳೆ ಅವರ ಸ್ಥಾನದಲ್ಲಿ ನೀವಿರಬಹುದು ಎಂದಿದ್ದಾರೆ ಕಂಗನಾ
ಸೋಷಿಯಲ್ ಮಿಡಿಯಾದಲ್ಲಿ ಅಫ್ಘಾನ್-ತಾಲಿಬಾನ್ ಕುರಿತ ವಿಡಿಯೋ ಫೋಟೋಗಳನ್ನು ಕಂಗನಾ ಶೇರ್ ಮಾಡುತ್ತಲೇ ಇದ್ದಾರೆ. ಇತ್ತೀಚಿನ ಫೋಸ್ಟ್‌ನಲ್ಲಿ ಇದು ಇಂದು ಅಫ್ಘಾನಿಸ್ತಾನದ ಅಧ್ಯಕ್ಷೀಯ ಅರಮನೆಯಲ್ಲಿ ಕಾಣುವ ದೃಶ್ಯ ಶತಮಾನಗಳ ಹಿಂದೆ ಇಸ್ಲಾಮಿಕ್ ಅಲೆಮಾರಿಗಳು ಅತ್ಯಂತ ಸಮೃದ್ಧ ಮತ್ತು ಅತ್ಯಾಧುನಿಕ ಭಾರತ ಮಾತೆಯನ್ನು ಹೇಗೆ ಸೆರೆಹಿಡಿದಿರಬಹುದು ಎಂಬುದನ್ನು ಇದು ನನಗೆ ತಿಳಿಸುತ್ತಿದೆ ಎಂದಿದ್ದಾರೆ.
ನಿಮಗೆ ತಿಳಿದಿದೆಯೇ ಅಫ್ಘಾನಿಸ್ತಾನವು ಇಸ್ಲಾಂ ಆಗುವ ಮುನ್ನ ಹಿಂದೂ ಮತ್ತು ಬೌದ್ಧ ರಾಷ್ಟ್ರವಾಗಿತ್ತು ಎಂದಿದ್ದಾರೆ ಕಂಗನಾ. ಅಫ್ಘಾನಿಸ್ತಾನದ ಬಹಳಷ್ಟು ಫೋಟೋ ಹಾಗೂ ವಿಡಿಯೋಗಳನ್ನು ನಟಿ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇವತ್ತು ಮೌನವಾಗಿದ್ದುಕೊಂಡು ನೋಡಿ, ನಾಳೆ ನಮಗೂ ಇದೇ ಸ್ಥಿತಿ ಬರಬಹುದು ಎಂದು ಕಂಗನಾ ಇನ್‌ಸ್ಟಗ್ರಾಂ ಸ್ಟೋರಿ ಶೇರ್ ಮಾಡಿದ್ದಾರೆ. ತಾಲೀಬಾನಿಗಳಿಗೆ ಶರಣಾಗದ ಅಫ್ಘಾನಿಸ್ತಾನ್ ಆರ್ಮಿ ಆಫೀಸರ್ ಹಾಗೂ ಕಮಾಂಡರ್‌ಗಳನ್ನು ಬಹಿರಂಗವಾಗಿ ಗಲ್ಲಿಗೇರಿಸುವ ಫೋಟೋಗಳನ್ನು ಶೇರ್ ಮಾಡಿ ನಟಿ ಈ ರೀತಿ ಕ್ಯಾಪ್ಶನ್ ಕೊಟ್ಟಿದ್ದಾರೆ.
kabul airport
ಈಗಾಗಲೇ ಬಹಳಷ್ಟು ಅಫ್ಘಾನಿಸ್ತಾನ ನಾಗರಿಕರು ದೇಶಬಿಟ್ಟು ಓಡಿ ಹೋಗುತ್ತಿದ್ದು, ನೂಕು ನುಗ್ಗಲಿನಲ್ಲಿ ಜನ ವಿಮಾನ ಹತ್ತುತ್ತಿರುವ ಕಾಬುಲ್ ವಿಮಾನ ನಿಲ್ದಾಣದ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ.