Asianet Suvarna News Asianet Suvarna News

ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ

ಮಹಾರಾಷ್ಟ್ರದ ನಾಗಪುರದಲ್ಲಿ ಎಟಿಎಂಗೆ ತೆರಳಿ ಐನೂರು ರೂಪಾಯಿ ಡ್ರಾ ಮಾಡಲು ಹೊರಟ  ವ್ಯಕ್ತಿಗೆ ಐನೂರು ರೂಪಾಯಿಯ ಐದು ನೋಟುಗಳು ಸಿಕ್ಕಿದ್ದು ಒಟ್ಟು ಎರಡೂವರೆ ಸಾವಿರ ರೂಪಾಯಿಗಳು ಒಮ್ಮೆಲೆ ಅವರ ಕೈ ಸೇರಿದೆ.

ATM dispenses 5 times extra cash in maharashtras nagpur people gathered near the atm to withdraw money akb
Author
Bangalore, First Published Jun 16, 2022, 3:44 PM IST

ನಾಗಪುರ: ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಹೋದ ವೇಳೆ ಕೆಲವೊಮ್ಮೆ ಹಣ ಇಲ್ಲದಿರುವುದು, ಹಣ ಡ್ರಾ ಆದ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದರೂ ಎಟಿಎಂನಿಂದ ಕ್ಯಾಶ್ ಬರದೇ ಇರುವುದು. ಒಮ್ಮೊಮ್ಮೆ ಡ್ರಾ ಆಗಿದ್ದಕ್ಕಿಂತ ಕಡಿಮೆ ಹಣ ಬರುವುದು ಇಂತಹ ಅನುಭವ ನಿಮಗೂ ಆಗಿರಬಹುದು. ಆದರೆ ಎಟಿಎಂ ನಿಮಗೆ ನೀವು ಎಂಟ್ರಿ ಮಾಡಿದ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣ ನೀಡಿದರೆ ಹೇಗಾಗಬಹುದು. ಧರ್ಮಕ್ಕೆ ಹಣ ಸಿಕ್ಕರೇ ಯಾರಿಗೆ ಬೇಡ. ಹಾಗಾಗಿ ಖುಷಿ ಖುಷಿಯಾಗಿ ಹಿಗ್ಗುವುದು ಸಾಮಾನ್ಯ. ಹಾಗೆಯೇ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ(nagapur) ಎಟಿಎಂಗೆ ಹೋದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯ ಅನುಭವ ಆಗಿದೆ. ಎಟಿಎಂಗೆ ತೆರಳಿ ಐನೂರು ರೂಪಾಯಿ ಡ್ರಾ ಮಾಡಲು ಹೊರಟ ಅವರಿಗೆ ಐನೂರು ರೂಪಾಯಿಯ ಐದು ನೋಟುಗಳು ಸಿಕ್ಕಿದ್ದು ಒಟ್ಟು ಎರಡೂವರೆ ಸಾವಿರ ರೂಪಾಯಿಗಳು ಒಮ್ಮೆಲೆ ಅವರ ಕೈ ಸೇರಿದೆ.

ಆತ ಮತ್ತೆ 500 ರೂಪಾಯಿ ಡ್ರಾ ಮಾಡಲು ಹೊರಟಿದ್ದು, ಆಗ ಆತನಿಗೆ ಮತ್ತೆಯೂ 2,500  ಸಿಕ್ಕಿದೆ. ಮಹಾರಾಷ್ಟ್ರದ ನಾಗಪುರದಿಂದ (Nagpur) 30 ಕಿ.ಮೀ ದೂರದಲ್ಲಿರುವ ಖಪ್ರಖೇಡ ನಗರದಲ್ಲಿ ಖಾಸಗಿ ಬ್ಯಾಂಕ್‌ಗೆ ಸೇರಿದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಈ ವಿಚಾರ ಕಾಡ್ಗಿಚ್ಚಿನಂತೆ ಆ ಪ್ರದೇಶದಲ್ಲಿ ಹಬ್ಬಿದ್ದು, ಜನ ಈ ಎಟಿಎಂ ಮುಂದೆ ದೌಡಾಯಿಸಿದ್ದಾರೆ. 

ಹಣ ಹೊರ ಬರ್ತಿದಂತೆ ಎಟಿಎಂ ಒಳಗೆ ಯುವತಿಯ ಡಿಂಕಚಕ ಡಾನ್ಸ್ : ವಿಡಿಯೋ ವೈರಲ್‌

ನಂತರ ಬ್ಯಾಂಕ್‌ನ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಎಟಿಎಂ ಕೇಂದ್ರವನ್ನು ಬಂದ್‌ ಮಾಡಿ ಬ್ಯಾಂಕ್‌ ಸಿಬ್ಬಂದಿಗೆ ಎಟಿಎಂನಲ್ಲಿ (Automated Teller Machine) ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ನೀಡಿದರು ಎಂದು ಖಪ್ರಖೇಡ್ ಪೊಲೀಸ್ ಠಾಣೆ (Khaparkheda police station) ಸಿಬ್ಬಂದಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಎಟಿಎಂ ಹೆಚ್ಚಿನ ಹಣವನ್ನು ನೀಡುತ್ತಿತ್ತು ಎಂದು ಅವರು ಹೇಳಿದರು. 

ಎಟಿಎಂಗೆ ಹಾಕೋ ಹಣದೊಂದಿಗೆ ಪರಾರಿಯಾದ ಸಿಬ್ಬಂದಿ, ಹೊಸ ಮೊಬೈಲ್ ಖರೀದಿಸಿ ಸಿಕ್ಕಿಬಿದ್ದ

100 ಮುಖಬೆಲೆಯ ನೋಟುಗಳನ್ನು ವಿತರಿಸುವ ಎಟಿಎಂ ಟ್ರೇನಲ್ಲಿ 500 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇಡಲಾಗಿತ್ತು. ಇದರಿಂದ ಈ ರೀತಿಯ ಅನಾಹುತವಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ವಂಚನೆ ತಡೆಯೋ ಉದ್ದೇಶದಿಂದ ಎಲ್ಲ ಬ್ಯಾಂಕುಗಳ ಎಟಿಎಂ (ATM)ಕೇಂದ್ರಗಳಲ್ಲಿ ಯುನಿಫೈಡ್‌ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಕಾರ್ಡ್ ರಹಿತ (cardless) ವಿತ್ ಡ್ರಾ (withdrawal) ಆಯ್ಕೆ ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಶಿಫಾರಸ್ಸು ಮಾಡಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಯಂತ್ರಣಕ್ಕೊಳಪಟ್ಟಿರುವ ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ (UPI) ಅಭಿವೃದ್ಧಿಪಡಿಸಿದೆ. ಐಎಂಪಿಎಸ್ (IMPS) ಮೂಲಸೌಕರ್ಯ ಆಧರಿಸಿ ಯುಪಿಐ ಅಭಿವೃದ್ಧಿಪಡಿಸಲಾಗಿದ್ದು,ಇದು ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು  ಅವಕಾಶ ಕಲ್ಪಿಸಿದೆ. 

ಕಾರ್ಡ್ ರಹಿತ ವಹಿವಾಟು ಅಂದ್ರೆ ಹಣವನ್ನು ಒಂದು ಖಾತೆಯಿಂದ ಭಾರತದಲ್ಲಿರೋ ಯಾವುದೇ ವ್ಯಕ್ತಿಗೆ ಮಾನ್ಯತೆ ಹೊಂದಿರೋ ಮೊಬೈಲ್ ಸಂಖ್ಯೆ ಮೂಲಕ ಕಳುಹಿಸೋದು. ಈ ಸೌಲಭ್ಯ ಹೊಂದಿರೋ ಗ್ರಾಹಕ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಬಳಸದೆ ಎಟಿಎಂನಿಂದ ನಗದು ವಿತ್ ಡ್ರಾ ಮಾಡಬಹುದಾಗಿದೆ. ಈ ಸೌಲಭ್ಯವನ್ನು ಯಾವುದೇ ಬ್ಯಾಂಕಿನ ಎಟಿಎಂ, ಮೂರನೇ ವ್ಯಕ್ತಿ ಹಾಗೂ ವೈಟ್ ಲೇಬಲ್ ಎಟಿಎಂಗಳಲ್ಲಿ ಬಳಸಬಹುದಾಗಿದೆ.

Follow Us:
Download App:
  • android
  • ios