* ಎಟಿಎಂಗೆ ತುಂಬೋ ಹಣ ಕಳ್ಳತನ ಮಾಡಿ ಪರಾರಿಯಾದ ಸಿಬ್ಬಂದಿ* ಎರಡೇ ದಿನಕ್ಕೆ ಆರೋಪಿಯನ್ನು ಬಂಧಿಸಿದ ಪೊಲೀಸರು* ಹೊಸ ಮೊಬೈಲ್ ಖರೀದಿಸಿ ಸಿಕ್ಕಿಬಿದ್ದ 

ವರದಿ : ನರಸಿಂಹ ಮೂರ್ತಿ ‌ಕುಲಕರ್ಣಿ

ಬಳ್ಳಾರಿ, (ಮೇ.23):
ಎಟಿಎಂಗೆ ತುಂಬುವ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಶನಿವಾರ ಬಳ್ಳಾರಿ ಮೀನಾಕ್ಷಿ ಸರ್ಕಲ್ ಬಳಿಯ ಕರ್ನಾಟಕ ಬ್ಯಾಂಕ್ನಿಂದ 50 ಲಕ್ಷ ಹಣವನ್ನು ಎಟಿಎಂಗೆ ಹಾಕಲು ಪಡೆದು ಅದನ್ನು ಎಟಿಎಂಗೆ ಹಾಕದೇ ಜೊತೆಗೆ ಎಟಿಎಂ ನಲ್ಲಿರೋ 6.18 ಲಕ್ಷದ ಜೊತೆ ಹಣವನ್ನು ಕದ್ದು ಪರಾರಿಯಾಗಿದ್ದ.

ಹಣವನ್ನು ತೆಗೆದುಕೊಂಡು ಬಳಿಕ ಯಾರಿಗೂ ಸಿಗಬಾರದೆಂದು ತನ್ನ ಮೊಬೈಲ್ ಸ್ವೀಚ್ ಆಫ್ ಮಾಡಿದ್ದನು. ಹಣವನ್ನು ಹೇಗೆ ಬಳಕೆ ಮಾಡಬೇಕೆನ್ನುವದನ್ನು ಗೊತ್ತಾಗದೇ ಕೊಪ್ಪಳದ ಲಾಡ್ಜ್ ವೊಂದರಲ್ಲಿ ಉಳಿದಕೊಂಡಿದ್ದನು. ಆದ್ರೆ, ಕಳ್ಳತನದ ಹಣದಲ್ಲಿ ಕೇವಲ ಹದಿನೈದು ಸಾವಿರದ ಒಂದು ಮೊಬೈಲ್ ಪಡೆದು ತನ್ನ ಹಳೇ ಸಿಮ್‌ ಹಾಕಿದ ಕಾರಣ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಬಳ್ಳಾರಿ ಮೂಲದ ನಿಯಾಸಿಯಾದ ನೀಲಕಂಠ ಬಂಧಿತ ಆರೋಪಿ. ಈತ ಕಳೆದೊಂದುವರೆ ವರ್ಷ ಸಿ.ಎಸ್.ಎಂ ಎನ್ನುವ ಎಟಿಎಂಗೆ ಹಣ ಹಾಕೋ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ.

ಸಿನಿಮೀಯ ರೀತಿಯಲ್ಲಿ ದರೋಡೆ, ಸಹಾಯ ಕೇಳುವ ನೆಪದಲ್ಲಿ ಬಂದವರಿಂದ ಕೃತ್ಯ

ಮೊಬೈಲ್ ಟ್ರೆಸ್ ಔಟ್ ಮಾಡಿದ ಪೊಲೀಸರು ಕೊಪ್ಪಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 56ಲಕ್ಷ ರೂಪಾಯಿ ಹಣ ಜಪ್ತಿ ಎರಡು ಮೊಬೈಲ್ ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಹೆಚ್ಚುವರಿ ಎಸ್ಪಿ ಗುರುನಾಥ ಬಿ ಮತ್ತೂರು ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ..

ನಿಯಮ ಉಲ್ಲಂಘನೆ ಕಳ್ಳತನಕ್ಕೆ ಕಾರಣವಾಯ್ತೇ..?

ಇನ್ನೂ ಪ್ರಕಣದಲ್ಲಿ ಸಿ.ಎಸ್.ಎಂ ಕಂಪನಿ ಸೇರಿದಂತೆ ಬ್ಯಾಂಕಿನವರು ಕೂಡ ಮೇಲ್ನೊಟಕ್ಕೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಯಾಕಂದ್ರೆ ಯಾವುದೇ ಒಂದು ಎಟಿಎಂಗೆ ಹಣ ತುಂಬುವ ಖಾಸಗಿ ಕಂಪನಿ ಬ್ಯಾಂಕ್‌ನಿಂದ ಎಟಿಎಂಗೆ ಹಣ ತುಂಬಲು ತೆಗೆದುಕೊಂಡು ಹೋಗಬೇಕಾದ್ರೆ, ಒಂದು ಜೀಪ್, ಓರ್ವ ಗನ್ ಮ್ಯಾನ್, ಡ್ರೈವರ್ ಮತ್ತು ಖಾಸಗಿ ಎಜೆನ್ಸಿಯ ಸಿಬ್ಬಂದಿ ಸೇರಿ ಕನಿಷ್ಟ ಮೂರು ಸಿಬ್ಬಂದಿ ಇರಬೇಕು. ಆದ್ರೆ ಬೈಕ್ ನಲ್ಲಿ ಆರೋಪಿ ನೀಲಕಂಠ ಒಬ್ಬನೇ ಹಣವನ್ನು ತೆಗೆದುಕೊಂಡು ಹೋಗೋದಕ್ಕೆ ಯಾರು ಅನುಮತಿ ಕೊಟ್ರು ಅನ್ನೋದೆ ಸದ್ಯದ ಪ್ರಶ್ನೆಯಾಗಿದೆ. 

ಅಲ್ಲದೇ ಹಣವನ್ನು ಕದ್ದ ನೀಲಕಂಠ ಹಣವನ್ನು ಖರ್ಚು ಮಾಡಲು ಯಾವುದೇ ದಿಕ್ಕು ತೋಚಿಲ್ಲ ಯಾಕಂದ್ರೆ ನಿತ್ಯ ಲಕ್ಷಗಟ್ಟಲೇ ಹಣ ನೋಡಿದವನಿಗೆ ಅವತ್ತು ಅವನು ಕದ್ದ ಐವತ್ತು ಲಕ್ಷ ದೊಡ್ಡ ಮೊತ್ತವೆನಾಗಿರಲಿಲ್ಲ. ಈ ರೀತಿ ಯಾಕೆ ಕಳ್ಳತನ ಮಾಡಿದ್ದಾನೆ ಅನ್ನೊದೇ ಸದ್ಯದ ಪ್ರಶ್ನೆ.. ಮೂಲಗಳ ಪ್ರಕಾರ ಖಾಸಗಿ ಏಜೆನ್ಸಿಯಲ್ಲಿರೋ ಅಂತರಿಕ ಭಿನ್ನಾಭಿಪ್ರಾಯವೇ ಕಳ್ಳತನಕ್ಕೆ ಕಾರಣ ಎನ್ನಲಾಗುತ್ತಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.